72ರ ಹರೆಯದ ಪ್ರಿಯತಮನ ವಿರುದ್ಧ ದೂರು ನೀಡಿದ 63ರ ಹರೆಯದ ಅಜ್ಜಿ – ಕಾರಣವೇನು ಗೊತ್ತಾ?

72ರ ಹರೆಯದ ಪ್ರಿಯತಮನ ವಿರುದ್ಧ ದೂರು ನೀಡಿದ 63ರ ಹರೆಯದ ಅಜ್ಜಿ – ಕಾರಣವೇನು ಗೊತ್ತಾ?

ನ್ಯೂಸ್ ಆ್ಯರೋ‌ : ಇದು ಪ್ರಬುದ್ಧರ ಲವ್ ಸ್ಟೋರಿ. ಆದರೆ ಇದೀಗ 72 ವರ್ಷದ ಲೋಕನಾಥ್ ಮತ್ತು 63ರ ಹರೆಯದ ದಯಾಮಣಿ ಮಧ್ಯದ ಪ್ರೇಮಕಥೆಯಲ್ಲಿ ಟ್ವಿಸ್ಟ್ ಸಿಕ್ಕಿದೆ. ಲೋಕನಾಥ್ ಮದುವೆಯಾಗುವುದಾಗಿ ಹೇಳಿ ಈಗ ಮೋಸ ಮಾಡಿದ್ದಾರೆ ಎಂದು ದಯಾಮಣಿ ಬೆಂಗಳೂರಿನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಏನಿದು ಘಟನೆ?

ಸಂಗಾತಿಗಳನ್ನು ಕಳೆದುಕೊಂಡ ಲೋಕನಾಥ್ ಮತ್ತು ದಯಾಮಣಿ ಪರಸ್ಪರ ಪರಿಚಿತರಾಗಿದ್ದರು. ಲೋಕನಾಥ್ ಮಗನಿಗೆ ಹೆಣ್ಣು ಹುಡುಕುತ್ತಿದ್ದರು. ಆಗ ದಯಾಮಣಿ ಹೆಣ್ಣು ತೋರಿಸುವುದಾಗಿ ಹೇಳಿದ್ದು ಇಬ್ಬರು ಸ್ನೇಹಿತರಾದರು. ಈ ಸ್ನೇಹ ಪ್ರೀತಿಗೆ ತಿರುಗಿತು. ಬಳಿಕ ಲೋಕನಾಥ್ ಮತ್ತು ದಯಾಮಣಿ ಮದುವೆಯ ನಿರ್ಧಾರಕ್ಕೆ ಬಂದಿದ್ದರು.

ಹೀಗಾಗಿ ಇಬ್ಬರೂ ಜೊತೆಯಾಗಿ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಇತ್ತೀಚೆಗೆ ದಯಾಮಣಿಯನ್ನು ನಿರ್ಲಕ್ಷಿಸಲು ಆರಂಭಿಸಿದ ಏಕನಾಥ್ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರಂತೆ.

ಇದರಿಂದ ಬೇಸತ್ತ ದಯಾಮಣಿ ಪೊಲೀಸ್ ಠಾಣೆಗೆ ಮೊರೆ ಹೋಗಿದ್ದಾರೆ. ಏಕನಾಥ್ ಅದ್ಯಾಕೆ ಹಾಗೆ ಹೇಳಿದರು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *