Oumair aejaz : 13 ಸಾವಿರಕ್ಕೂ ಅಧಿಕ ಮಹಿಳೆಯರ ಅಶ್ಲೀಲ ವಿಡಿಯೋ ರೆಕಾರ್ಡ್ – ಪತ್ನಿ, ಎರಡು ವರ್ಷದ ಮಗಳನ್ನೂ ಬಿಟ್ಟಿಲ್ಲ ಈ ಕಾಮುಕ ವೈದ್ಯ..!!

Spread the love

ನ್ಯೂಸ್ ಆ್ಯರೋ : ತನ್ನದೇ ಪತ್ನಿ, ಎರಡು ವರ್ಷದ ಮಗಳು, ಕುಟುಂಬದ ಹೆಣ್ಣುಮಕ್ಕಳು, ಮಹಿಳೆಯರು ಮತ್ತು ಮಕ್ಕಳ ನೂರಾರು ಬೆತ್ತಲೆ ವಿಡಿಯೋಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ ಆರೋಪದ ಮೇರೆಗೆ ಭಾರತೀಯ ಮೂಲದ ಕಾಮುಕ ವೈದ್ಯನನ್ನು ಅಮೆರಿಕ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

2011 ರಿಂದ ಅಮೇರಿಕಾದಲ್ಲೇ ವಾಸವಿದ್ದ ಭಾರತೀಯ ಮೂಲದ ಒಮೈರ್​ ಐಜಾಜ್ ಬಂಧಿತ ವೈದ್ಯನಾಗಿದ್ದು, ಕಳೆದ ಆಗಸ್ಟ್​ 8ರಂದೇ ಈತನನ್ನು ಬಂಧಿಸಲಾಗಿದೆ. ಆಸ್ಪತ್ರೆಯ ವಿವಿಧ ಭಾಗಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟು ಬೆತ್ತಲೆ ವಿಡಿಯೋ ರೆಕಾರ್ಡ್​ ಮಾಡಿರುವ ಗಂಭೀರ ಆರೋಪ ಓಮೈರ್​ ಮೇಲಿದೆ.

ಖರೀದಿಸಿದ ಬಳಿಕ ಕ್ಯಾಮೆರಾಗಳನ್ನು ಮುಖ್ಯವಾಗಿ ಶೌಚಾಲಯಗಳು, ಆಸ್ಪತ್ರೆ ಕೊಠಡಿಗಳು ಮತ್ತು ಬಟ್ಟೆ ಬದಲಾಯಿಸುವ ಪ್ರದೇಶಗಳಲ್ಲಿ ಮುಚ್ಚಿಡುತ್ತಿದ್ದ. ಓಮೈರ್​ ಮನಸ್ಥಿತಿ ಯಾವ ರೀತಿ ಇತ್ತೆಂದರೆ, ತನ್ನ ಸ್ವಂತ ಮನೆಯಲ್ಲೇ ಕ್ಯಾಮೆರಾಗಳನ್ನು ಅಳವಡಿಸಿ, ಕುಟುಂಬದ ಮಹಿಳಾ ಸದಸ್ಯರ ಖಾಸಗಿ ಕ್ಷಣಗಳನ್ನು ಸೆರೆಹಿಡಿದಿದ್ದ ಎನ್ನಲಾಗಿದೆ.

ಆತನ ಮನಸ್ಸು ಎಷ್ಟು ವಿಕೃತವಾಗಿತ್ತು ಅಂದರೆ, ಪತ್ನಿ ಹಾಗೂ ತನ್ನ ಎರಡು ವರ್ಷದ ಮಗುವಿನ ಬೆತ್ತಲೆ ವಿಡಿಯೋವನ್ನು ಸಹ ರೆಕಾರ್ಡ್ ಮಾಡಿದ್ದ. ಓಮೈರ್​ ದುರ್ಬುದ್ಧಿ ಗೊತ್ತಾದ ಬಳಿಕ ಆತನ ಪತ್ನಿ ಎಲ್ಲ ಸಾಕ್ಷ್ಯಗಳೊಂದಿಗೆ ಪೊಲೀಸರನ್ನು ಸಂಪರ್ಕಿಸಿದಳು.

ಓಮೈರ್​​​ ಪತ್ನಿ ದಾಖಲಿಸಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ತೀವ್ರ ತನಿಖೆ ನಡೆಸಿ, ಮಿಚಿಗನ್‌ನ ರೋಚೆಸ್ಟರ್ ಹಿಲ್ಸ್‌ನಲ್ಲಿರುವ ಆರೋಪಿ ಮನೆಯಿಂದ ಸಾವಿರಕ್ಕೂ ಹೆಚ್ಚು ಬೆತ್ತಲೆ ವಿಡಿಯೋಗಳ ಸಂಗ್ರಹವನ್ನು ಮರುಪಡೆದಿದ್ದಾರೆ. ಸಾಕಷ್ಟು ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದು, ಸಂತ್ರಸ್ತೆಯನ್ನು ಪತ್ತೆಹಚ್ಚುವುದೇ ಇದೀಗ ದೊಡ್ಡ ಸವಾಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಬಳಿಯಿದ್ದ ಕಂಪ್ಯೂಟರ್, ಫೋನ್ ಸೇರಿದಂತೆ ಸುಮಾರು 15 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಹಾರ್ಡ್ ಡ್ರೈವ್‌ನಲ್ಲಿಯೇ 13,000 ವಿಡಿಯೋಗಳಿದ್ದವು. ಕ್ಲೌಡ್ ಸ್ಟೋರೇಜ್‌ನಲ್ಲಿಯೂ ವಿಡಿಯೋಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪರಾಧಿಯು ಪ್ರಜ್ಞಾಹೀನ ಮತ್ತು ಮಲಗಿರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೋಗಳನ್ನು ಸಹ ತೆಗೆದುಕೊಂಡಿದ್ದಾನೆ.

Leave a Comment

Leave a Reply

Your email address will not be published. Required fields are marked *

error: Content is protected !!