ಸ್ವರ್ಗ- ನರಕದಲ್ಲಿ ಹೆಚ್ಚಿದ ಕಲಹ: ಬಿಗ್ ಬಾಸ್ ತೊರೆಯಲು ಮುಂದಾದ ಲಾಯರ್ ಜಗದೀಶ್

ನ್ಯೂಸ್ ಆ್ಯರೋ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ 17 ಸ್ಪರ್ಧಿಗಳಿದ್ದಾರೆ. ಈ ಪೈಕಿ ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಇದಕ್ಕೂ ಮೊದಲೇ ಬಿಗ್ ಬಾಸ್ನ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಜಗದೀಶ್ ಅವರಿಗೆ ಕಪ್ ಗೆಲ್ಲಬೇಕು ಎನ್ನುವ ಯಾವುದೇ ಉದ್ದೇಶ ಇಲ್ಲ. ಈ ಬಗ್ಗೆ ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ. ಮಾನವೀಯತೆ ಇಲ್ಲದ ಜಾಗದಲ್ಲಿ ತಾವು ನಿಲ್ಲೋದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ವಿಭಾಗ ಮಾಡಲಾಗಿದೆ. ಏಳು ಜನರು ನರಕದಲ್ಲಿ ಇದ್ದರೆ, 10 ಜನರು ಸ್ವರ್ಗದಲ್ಲಿ ಇದ್ದಾರೆ. ಸ್ವರ್ಗವನ್ನು ಸ್ವಚ್ಛ ಮಾಡುವ ಕೆಲಸ ನರಕವಾಸಿಗಳು ಮಾಡಬೇಕು. ಇದನ್ನು ಜಗದೀಶ್ ಖಂಡಿಸಿದ್ದಾರೆ. ಟಾಸ್ಕ್ ಮುಗಿದ ಬಳಿಕ ಈ ರೀತಿ ಕೆಲಸ ಮಾಡಿಸೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
‘ಮಾನವೀಯತೆ ಮುಖ್ಯ. ಮಾನವೀಯತೆ ಇಲ್ಲದೆ ಹೋದಲ್ಲಿ ನಾನು ಇಲ್ಲಿ ಇರೋದಿಲ್ಲ. ಐಸ್ ಟಾಸ್ಕ್ ಆಡಿ ಬಂದ ಬಳಿಕ ಅವರ ಬಳಿ ಕೆಲಸ ಮಾಡಿಸಬೇಕು ಎಂದರೆ ಎಷ್ಟು ಸರಿ? ಅವರಿಗೆ ಸರಿಯಾದ ಊಟ ಇಲ್ಲದೆ ಶಕ್ತಿ ಬೇರೆ ಇಲ್ಲ. ಹೀಗಾಗಿ ನಾನೇ ಪಾತ್ರೆ ತೊಳೆದೆ. ತಪ್ಪಾ? ನಾನು ಈಗಲೇ ಬಿಗ್ ಬಾಸ್ನಿಂದ ಹೊರಕ್ಕೆ ಹೋಗೋಕೂ ರೆಡಿ’ ಎಂದಿದ್ದಾರೆ ಅವರು. ಬಿಗ್ ಬಾಸ್ನಲ್ಲಿ ಕಪ್ ಗೆಲ್ಲಬೇಕು ಎನ್ನುವ ಯಾವುದೇ ಉದ್ದೇಶ ಜಗದೀಶ್ ಅವರಿಗೆ ಇಲ್ಲವಂತೆ. ಇದನ್ನು ಅವರು ಒತ್ತಿ ಒತ್ತಿ ಹೇಳಿದ್ದಾರೆ. ಈ ಕಾರಣದಿಂದಲೇ ಯಾವಾಗ ಬೇಕಿದ್ದರೂ ಬಿಗ್ ಬಾಸ್ ತೊರೆಯೋದಾಗಿ ಅವರು ಹೇಳಿಕೊಂಡಿದ್ದಾರೆ.
ಇನ್ನು ತುಕಾಲಿ ಮಾನಸಾಗೆ ಯೋಗ್ಯತೆ ನೋಡಿ ಮಾತನಾಡು ಎಂದು ಕೂಗಿದ್ದಾರೆ. ಮಾತ್ರವಲ್ಲ ಏಕವಚನದಲ್ಲಿ ಮಾತನಾಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಅವರು ಬಿಗ್ ಬಾಸ್‌ಗೆ ಚಾಲೆಂಜ್ ಹಾಕಿದ್ದಾರೆ. ನಿಮ್ಮನ್ನು ಮುಳುಗಿಸದೇ ಬಿಡಲ್ಲ. ಹೊರಗಡೆ ನಾನು ಹೋದ ಮೇಲೆ ಬಿಗ್ ಬಾಸ್ ಬಗ್ಗೆ ಹೇಳದೇ ಬಿಡಲ್ಲ. ನಿಮಗೆ ಗತಿ ಕಾಣಿಸುತ್ತೇನೆ ಎಂದು ಬಿಗ್ ಬಾಸ್‌ಗೆ ನೇರಾ ನೇರಾ ಚಾಲೆಂಜ್ ಹಾಕಿದ್ದಾರೆ ಜಗದೀಶ್.
Leave a Comment