ಮನೆಯಲ್ಲೇ ಲವರ್ ಜೊತೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹೆಂಡ್ತಿ; ಅಮೇಲೆ ಆಗಿದ್ದು ಹಣ್ಣುಗಾಯಿ ನೀರು ಗಾಯಿ
ನ್ಯೂಸ್ ಆ್ಯರೋ: ಇತ್ತೀಚಿನ ದಿನಗಳಲ್ಲಿ ವಿವಾಹೇತರ ಅಥವಾ ಅಕ್ರಮ ಸಂಬಂಧಗಳ ಪ್ರಕರಣಗಳು ತೀರಾ ಹೆಚ್ಚಾಗಿವೆ. ಮನೆಯಲ್ಲಿ ಹೆಂಡ್ತಿ ಇದ್ದರೂ ಬೇರೊಬ್ಬ ಮಹಿಳೆಯ ಜೊತೆ ಸುತ್ತಾಡುವ ಗಂಡ, ಪರ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡು ಗಂಡನ ಕೈಲಿ ಸಿಕ್ಕಿಬಿದ್ದ ಮಹಿಳೆಯರ ಕಥೆಗಳಿಗೆ ಸಂಬಂಧಿಸಿದ ವಿಡಿಯೋ, ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ವೈರಲ್ ಆಗುತ್ತಲೇ ಇರುತ್ತವೆ.
ಇದೀಗ ಇಲ್ಲೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮನೆಯ ಟೇರೆಸ್ ಮೇಲೆ ಯುವಕನೊಬ್ಬ ವಿವಾಹಿತ ಮಹಿಳೆಯ ಜೊತೆ ರೊಮ್ಯಾನ್ಸ್ ಮಾಡ್ತಿದ್ದ ವೇಳೆ ಆಕೆಯ ಗಂಡ ಹಾಗೂ ಕುಟುಂಬಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಅನೈತಿಕ ಸಂಬಂಧದ ಆರೋಪದ ಮೇಲೆ ಯುವಕನೊಬ್ಬನಿಗೆ ತೀವ್ರವಾಗಿ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅವ್ರೋಹಾದಲ್ಲಿ ನಡೆದಿದೆ. ಮನೆಯ ಟೆರೇಸ್ ಮೇಲೆ ವಿವಾಹಿತ ಮಹಿಳೆಯೊಂದಿಗೆ ಯುವಕ ರೊಮ್ಯಾನ್ಸ್ ಮಾಡ್ತಿದ್ದ ವೇಳೆ ಈ ಇಬ್ಬರೂ ಆಕೆಯ ಗಂಡ ಮತ್ತು ಕುಟುಂಬಸ್ಥರ ಕೈಲಿ ತಗ್ಲಾಕೊಂಡಿದ್ದು, ಈ ದೃಶ್ಯವನ್ನು ಕಂಡು ಕೋಪಗೊಂಡ ಪತಿರಾಯ ಯುವಕನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ.
ಈ ಕುರಿತ ವಿಡಿಯೋವನ್ನು News1IndiaTweet ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅನೈತಿಕ ಸಂಬಂಧದ ಆರೋಪದ ಮೇರೆಗೆ ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರು ದೃಶ್ಯವನ್ನು ಕಾಣಬಹುದು. ಬೆಲ್ಟ್ ಮತ್ತು ಚಪ್ಪಲಿಯೊಂದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.ಡಿಸೆಂಬರ್ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
Leave a Comment