ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಯಾರು ಪಾವತಿ ಮಾಡ್ತಾರೆ ಅಂತ ಗೊತ್ತಾ…?
ಅಬ್ಬಬ್ಬಾ ಇಷ್ಟು ಕೋಟಿ ಪಾವತಿ ಮಾಡ್ತಾರಾ….!

20240905 164741
Spread the love

ನ್ಯೂಸ್ ಆ್ಯರೋ : ಮಿತಿಗಿಂತ ಹೆಚ್ಚು ಆದಾಯ ಗಳಿಸುವ ಪ್ರತಿಯೊಬ್ಬ ವ್ಯಕ್ತಿಯು ಆದಾಯ ಇಲಾಖೆಗೆ ತೆರಿಗೆಯನ್ನು ಪಾವತಿ ಮಾಡ್ತಾರೆ. ಇದೀಗ ಕ್ರಿಕೆಟ್ ಲೋಕದ ದಿಗ್ಗಜರಲ್ಲೊಬ್ಬರು ಈ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ಹೌದು, ಫಾರ್ಚೂನ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ 2023-24ನೇ ಸಾಲಿನಲ್ಲಿ ಅತಿಹೆಚ್ಚು ತೆರಿಗೆ ಪಾವತಿಸಿರುವ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.

ಈ ತೆರಿಗೆ ಪಾವತಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವವರು ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ. ಇವರು ಬರೋಬ್ಬರಿ 66 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದ್ದಾರೆ. ಇವರು ದೇಶದಲ್ಲಿ ಅತ್ಯಂತ ಹೆಚ್ಚು ಆದಾಯ ಗಳಿಸುತ್ತಿರುವುದರಲ್ಲೂ ಮುಂಚೂಣಿಯಲ್ಲಿದ್ದಾರೆ.

ಇನ್ನು ಇದರಲ್ಲಿ ಎರಡನೇ ಸ್ಥಾನವನ್ನು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಪಡೆದುಕೊಂಡಿದ್ದಾರೆ. ಇವರು ಕಟ್ಟಿರುವ ಟ್ಯಾಕ್ಸ್ ನ ಮೊತ್ತ 36 ಕೋಟಿ ರೂಪಾಯಿ.

ಇನ್ನು ಮೂರನೇ ಸ್ಥಾನದಲ್ಲಿರುವ ಕ್ರಿಕೆಟ್ ನ ದೇವರು ಸಚಿನ್ ತೆಂಡೂಲ್ಕರ್ 28 ಕೋಟಿ ರೂಪಾಯಿ ಪಾವತಿ ಮಾಡಿದ್ರೆ, ಸೌರವ್ ಗಂಗೂಲಿ 23 ಕೋಟಿ ಮತ್ತು ಹಾರ್ದಿಕ್ ಪಾಂಡ್ಯ 13 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡುವ ಟಾಪ್ 5 ಸೆಲಬ್ರೆಟಿಗಳು.

Leave a Comment

Leave a Reply

Your email address will not be published. Required fields are marked *

error: Content is protected !!