ಪ್ರೊಟೀನ್ ಪೌಡರ್​ಗಳಲ್ಲಿ ಹೆವಿ ಮೆಟಲ್‌ ಪತ್ತೆ; ವರದಿಯಲ್ಲಿ ಆಘಾತಕಾರಿ ಅಂಶ ಬಯಲು

Protein Powder
Spread the love

ನ್ಯೂಸ್ ಆ್ಯರೋ: ಪ್ರೊಟೀನ್ ಪೌಡರ್ ನಮ್ಮ ದೈನಂದಿನ ಪ್ರೊಟೀನ್ ಅಗತ್ಯಗಳನ್ನು ಪೂರೈಸುವ ಒಂದು ಆಹಾರವಾಗಿದೆ, ಸಾಕಷ್ಟು ಜನರು ಇದನ್ನು ತೆಗೆದುಕೊಳ್ಳುತ್ತಿದ್ದಾರೆ. ತಜ್ಞರ ಪ್ರಕಾರ ಆರೋಗ್ಯವಂತ ತೂಕ ನಿರ್ವಹಣೆ ಹಾಗೂ ತೂಕ ನಷ್ಟಕ್ಕೆ ಕೂಡ ನಮ್ಮ ದೇಹದ ತೂಕಕ್ಕೆ ಬೇಕಾಗಿರುವಷ್ಟು ಪ್ರಮಾಣದಲ್ಲಿ ಪ್ರೊಟೀನ್ ಸೇವನೆ ಮುಖ್ಯವಾಗಿದೆ.

ಆದರೆ ಪ್ರೊಟೀನ್ ಪೌಡರ್‌ಗಳು ಕೂಡ ಅನಾರೋಗ್ಯ ತಂದೊಡ್ಡುತ್ತಿವೆ ಎಂದು ವರದಿಯೊಂದು ಉಲ್ಲೇಖಿಸಿದ್ದು, ಯುಎಸ್‌ಎ ನಲ್ಲಿ ಅಧಿಕವಾಗಿ ಮಾರಾಟವಾಗುವ ಓವರ್-ದಿ-ಕೌಂಟರ್ ಹೆಸರಿನ ಪ್ರೋಟೀನ್ ಪೌಡರ್‌ಗಳಲ್ಲಿ ಮಾಲಿನ್ಯಕಾರಕಗಳನ್ನು ಪತ್ತೆಹಚ್ಚಲಾಗಿದೆ ಎಂಬುದು ತಿಳಿದು ಬಂದಿದೆ. ಅಮೆರಿಕಾದ ಪಾರದರ್ಶಕ ಆಹಾರ ಲೇಬಲಿಂಗ್ ಮತ್ತು ಆಹಾರ ಸುರಕ್ಷತಾ ಅಭ್ಯಾಸಗಳನ್ನು ಉತ್ತೇಜಿಸಲು ಮೀಸಲಾಗಿರುವ ಲಾಭರಹಿತ ಸಂಸ್ಥೆಯಾದ ಕ್ಲೀನ್ ಲೇಬಲ್ ಪ್ರಾಜೆಕ್ಟ್ ಈ ಪರೀಕ್ಷೆಯನ್ನು ನಡೆಸಿದೆ.

ಅಮೆರಿಕಾದಲ್ಲಿ ಹೆಚ್ಚು ಮಾರಾಟವಾಗುವ ಸುಮಾರು 70 ಬ್ರ್ಯಾಂಡ್‌ಗಳಿಂದ 160 ಉತ್ಪನ್ನಗಳನ್ನು ಪರೀಕ್ಷಿಸಲಾಯಿತು. ಅವು ಆರ್ಸೆನಿಕ್, ಕ್ಯಾಡ್ಮಿಯಮ್, ಸೀಸ ಮತ್ತು ಪಾದರಸದ ಮಟ್ಟಗಳಿಗೆ ಪಾಸಿಟಿವ್ ಫಲಿತಾಂಶಗಳನ್ನು ಸೂಚಿಸಿವೆ. ಇವು ಹೆವಿ ಮೆಟಲ್‌ಗಳ ಕ್ಯಾಟಗರಿಗೆ ಒಳಪಡುತ್ತಿದ್ದು ಇವುಗಳ ಸೇವನೆ ಆರೋಗ್ಯ ಸಮಸ್ಯೆಗಳೊಂದಿಗೆ ದೇಹಕ್ಕೆ ಅಪಾಯವನ್ನು ತಂದಿಡಲಿದೆ ಎಂದು ವರದಿ ಹೇಳಿದೆ. ಇನ್ನು ಸಾವಯವವಲ್ಲದ ಉತ್ಪನ್ನಗಳಿಗೆ ಹೋಲಿಸಿದಾಗ ಈ ಸಾವಯವ ಉತ್ಪನ್ನಗಳು ಹೆಚ್ಚಿನ ಮಟ್ಟದ ಅನಾರೋಗ್ಯ ಅಂಶಗಳನ್ನು ಪ್ರದರ್ಶಿಸಿವೆ ಎಂಬುದು ವರದಿಯಲ್ಲಿ ಪ್ರಮುಖ ಮಹತ್ವದ್ದಾಗಿದೆ.

ಈ ಆರ್ಗ್ಯಾನಿಕ್ ಬ್ರ್ಯಾಂಡ್‌ಗಳ ಪ್ರೊಟೀನ್ ಪೌಡರ್‌ಗಳಲ್ಲಿ ಮೂರು ಪಟ್ಟು ಹೆಚ್ಚು ಸೀಸ ಮತ್ತು ಎರಡು ಪಟ್ಟು ಕ್ಯಾಡ್ಮಿಯಂ ಪತ್ತೆಯಾಗಿವೆ. ಸಸ್ಯ ಆಧಾರಿತ ಪ್ರೊಟೀನ್ ಪೌಡರ್‌ಗಳಲ್ಲಿ ಕೂಡ ವೇ ಆಧಾರಿತ ಪರ್ಯಾಯಗಳಿಗಿಂತ ಮೂರು ಪಟ್ಟು ಹೆಚ್ಚು ಸೀಸ ಮತ್ತು ಐದು ಪಟ್ಟು ಹೆಚ್ಚು ಕ್ಯಾಡ್ಮಿಯಂ ಅನ್ನು ಗುರುತಿಸಲಾಗಿದೆ.

ಚಾಕೊಲೇಟ್-ರುಚಿಯ ಪ್ರೊಟೀನ್ ಪೌಡರ್‌ಗಳು ವೆನಿಲ್ಲಾ ರುಚಿಯ ಪೌಡರ್‌ಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಸೀಸ ಮತ್ತು 110 ಪಟ್ಟು ಹೆಚ್ಚು ಕ್ಯಾಡ್ಮಿಯಂ ಅನ್ನು ಒಳಗೊಂಡಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಸಂಶೋಧನೆಗಳು ಹೊರಹಾಕಿವೆ.

ಆರ್ಸೆನಿಕ್, ಸೀಸ, ಪಾದರಸ ಮತ್ತು ಕ್ಯಾಡ್ಮಿಯಂ ಮೊದಲಾದ ಹೆವಿ ಮೆಟಲ್‌ಗಳು ಜ್ವಾಲಾಮುಖಿ ಸ್ಫೋಟಗಳು, ಬಂಡೆಗಳ ಹವಾಮಾನ ಮತ್ತು ಮಣ್ಣಿನ ಸವೆತದಂತಹ ನೈಸರ್ಗಿಕ ವಿದ್ಯಮಾನಗಳ ಮೂಲಕ ಪರಿಸರವನ್ನು ಪ್ರವೇಶಿಸುವ ನೈಸರ್ಗಿಕ ಅಂಶಗಳು ಎಂದೆನಿಸಿವೆ.

ಈ ಲೋಹಗಳು ಗಾಳಿ, ಮಣ್ಣು, ನೀರಿನಲ್ಲಿ ಸಂಗ್ರಹವಾಗುತ್ತವೆ ಕೊನೆಗೆ ಸಸ್ಯಗಳು, ಪ್ರಾಣಿಗಳು ಮತ್ತು ಮಾನವ ಆಹಾರ ಸರಪಳಿಗಳನ್ನು ಪ್ರವೇಶಿಸುತ್ತವೆ ಎಂದು ವರದಿ ಉಲ್ಲೇಖಿಸಿದೆ.

Leave a Comment

Leave a Reply

Your email address will not be published. Required fields are marked *