ಮೊದಲ ಪತಿಯಿದ ಮೋಸ, ವಿಚ್ಛೇದನ; ಎರಡನೇ ಮದುವೆಗೆ ರೆಡಿಯಾದ ಕನ್ನಡದ ನಿರೂಪಕಿ

second marriage
Spread the love

ನ್ಯೂಸ್ ಆ್ಯರೋ: 2023 ಜುಲೈನಲ್ಲಿ ವಿಚ್ಛೇದನದ ವಿಷಯ ತಿಳಿಸಿದ್ದ ಖ್ಯಾತ ನಿರೂಪಕಿ, ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಸ್ಪರ್ಧಿ ಚೈತ್ರಾ ವಾಸುದೇವನ್‌ ಅವರು ಈ ವರ್ಷ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಹೌದು, ಚೈತ್ರಾ ವಾಸುದೇವನ್‌ ಅವರು ಮದುವೆಯಾಗುತ್ತಿದ್ದಾರೆ.

ಅಂದಹಾಗೆ ಚೈತ್ರಾ ವಾಸುದೇವನ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು ಎರಡನೇ ಮದುವೆ ಆಗುತ್ತಿರೋದಾಗಿ ಹೇಳಿದ್ದಾರೆ. “ನಾನು ನಿಮ್ಮೊಂದಿಗೆ ಹೃದಯಪೂರ್ವಕವಾದ ಒಂದು ಸಂತೋಷದ ಸುದ್ದಿ ಹಂಚಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆಗೆ ಕಾಲಿಡುತ್ತೇನೆ — ನನ್ನ ವಿವಾಹದ ಸುಂದರ ಪ್ರಯಾಣ. ಈ ಮುಂದಿನ ಹೆಜ್ಜೆ ಹಾಕುವಾಗ, ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯು, ಆಶೀರ್ವಾದಗಳು ಮತ್ತು ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ” ಎಂದು ಚೈತ್ರಾ ವಾಸುದೇವನ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಚೈತ್ರಾ ವಾಸುದೇವನ್‌ ಅವರು ಯಾರನ್ನು ಮದುವೆ ಆಗುತ್ತಿದ್ದಾರೆ, ಆ ಹುಡುಗನ ವೃತ್ತಿ ಏನು ಎಂಬುದು ಇನ್ನೂ ರಿವೀಲ್‌ ಮಾಡಿಲ್ಲ. ಅಂದಹಾಗೆ ಮಾರ್ಚ್‌ನಲ್ಲಿ ಮದುವೆ ಎಂದಿದ್ದು, ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ.

ಡಿಗ್ರಿ ಮುಗಿಯುತ್ತಿದ್ದಂತೆ ಚೈತ್ರಾ ವಾಸುದೇವನ್‌ ಅವರು ಸತ್ಯ ನಾಯ್ಡು ಎನ್ನುವ ಉದ್ಯಮಿಯನ್ನು ಮದುವೆಯಾಗಿದ್ದರು. ಐದು ವರ್ಷಗಳ ಕಾಲ ಅವರು ಪತಿಯ ಜೊತೆಗೆ ಜೀವನ ನಡೆಸಿ, ಆಮೇಲೆ ವಿಚ್ಛೇದನಕ್ಕೆ ಮುಂದಾಗಿದ್ದರು. ಚೈತ್ರಾ ವಾಸುದೇವನ್‌ ಅವರು ಸಂಸಾರವನ್ನು ಉಳಿಸಿಕೊಳ್ಳಲು ತುಂಬ ಕಷ್ಟಪಟ್ಟಿರೋದಾಗಿ ಅವರು ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.

“ನನ್ನ ಜೀವನ ಹೀಗಾಯ್ತು ಅಂತ ನನ್ನ ಅಪ್ಪ-ಅಮ್ಮ ತುಂಬ ಕುಗ್ಗಿ ಹೋಗಿದ್ದರು, ಮತ್ತೆ ನಾನು ನಗೋದು, ಅವರು ಸಮಾಧಾನವಾಗಿರೋದು ತುಂಬ ಸವಾಲಿನ ಕೆಲಸ ಆಗಿತ್ತು. ಡಿಗ್ರಿಯಾದಕೂಡಲೇ ಅರೇಂಜ್‌ ಮ್ಯಾರೇಜ್‌ ಆದ ನನಗೆ ಈ ರೀತಿ ಮೋಸ ಆಗತ್ತೆ ಅಂತ ಅಂದುಕೊಂಡಿರಲಿಲ್ಲ” ಎಂದು ಚೈತ್ರಾ ವಾಸುದೇವನ್‌ ಅವರು ಹೇಳಿದ್ದರು.

Leave a Comment

Leave a Reply

Your email address will not be published. Required fields are marked *