ರಾಶಿ ರಾಶಿ ಕೂದಲು ಉದುರುತ್ತಿದೆಯೇ? – ಸಂಪೂರ್ಣ ಬೋಳು ತಲೆ ಆಗೋ ಮುಂಚೆ ಈ ವರದಿ ಓದಿ..

ರಾಶಿ ರಾಶಿ ಕೂದಲು ಉದುರುತ್ತಿದೆಯೇ? – ಸಂಪೂರ್ಣ ಬೋಳು ತಲೆ ಆಗೋ ಮುಂಚೆ ಈ ವರದಿ ಓದಿ..

ನ್ಯೂಸ್ ಆ್ಯರೋ‌ : ಇತ್ತೀಚೆಗೆ ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನವರೆಗೂ ಕೂಡ ಕೂದಲು ಉದುರುತ್ತಿವವರ ಸಮಸ್ಯೆ ಹೇಳತೀರದು. ಕೆಲವರಿಗಂತೂ ತುಂಬಾ ಚಿಕ್ಕ ಪ್ರಾಯದಲ್ಲಿಯೇ ಬಕ್ಕ ತಲೆಯ ಸಮಸ್ಯೆ ಕಂಡು ಬರುತ್ತದೆ.

ಕೂದಲು ಉದುರುವಿಕೆಗೆ ಹಲವಾರು ಕಾರಣಗಳಿರಬಹುದು. ಕೂದಲು ಉದುರುವಿಕೆಗೆ ಡಯಾಬಿಟಿಸ್, ಪೌಷ್ಟಿಕಾಂಶದ ಕೊರತೆ, ವಿಟಮಿನ್ ಡಿ ಕೊರತೆ ಅಥವಾ ಹೆರಿಡಿಟರಿ ಕೂಡ ಕಾರಣ ಆಗಿರಬಹುದು.

ನೀವು ಈ ಕೂದಲು ರೀತಿಯ ಸಮಸ್ಯೆಯಿಂದ ಬಳಲುತಿದ್ದೀರಾ.?

ಹಲವಾರು ಎಣ್ಣೆ ಅಥವಾ ಶಾಂಪೂ ಬಳಸಿಯೂ ಸಹ ಕೂದಲ ಉದುರುವಿಕೆ ನಿಯಂತ್ರಣಕ್ಕೆ ಬರುತ್ತಿಲ್ಲವೇ? ಹಾಗಾದರೆ ಚಿಂತೆ ಬೇಡ. ಇದಕ್ಕಾಗಿ ನೀವು ಬಹಳ ಹಣವನ್ನು ಖರ್ಚು ಮಾಡಿ ಯಾವುದೇ ದುಬಾರಿ ಶಾಂಪೂ ಅಥವಾ ಎಣ್ಣೆ ಖರೀದಿಸಬೇಕಾಗಿಲ್ಲ. ಬದಲಿಗೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ದರೆ ಸಾಕು.

ಉತ್ತಮ ಆಹಾರ ಸೇವನೆ:

ನೀವು ಸೇವಿಸುವ ಆಹಾರ ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಆಹಾರದಲ್ಲಿ ತರಕಾರಿಗಳು, ಹಣ್ಣುಗಳು, ಮೊಸರು, ಮಜ್ಜಿಗೆ, ಮೊಳಕೆಯೊಡೆದ ಕಾಳುಗಳನ್ನು ಸೇವಿಸಿ. ಇದು ನಿಮ್ಮ ಆರೋಗ್ಯವನ್ನು ಜತೆಗೆ ಕೂದಲಿನ ಆರೋಗ್ಯವನ್ನೂ ಸುಧಾರಿಸುತ್ತದೆ.

ತಲೆಯ ನೆತ್ತಿಗೆ ಮಸಾಜ್ ಮಾಡುವುದು

ರಕ್ತ ಸಂಚಾರ ಸರಿಯಾದ ಕ್ರಮದಲ್ಲಿ ಆದರೆ ಎಷ್ಟೋ ಸಮಸ್ಯೆಗಳು ಪರಿಹಾರವಾಗಿಬಿಡುತ್ತವೆ. ನೀವು ನಿತ್ಯ ಬಳಸುವ ಯಾವುದೇ ಹೇರ್ ಆಯಿಲ್ ಬಳಸಿ ನಿಧಾನವಾಗಿ ನೆತ್ತಿಯ ಮೇಲೆ ಮಸಾಜ್ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ, ಇದರ ಜೊತೆಗೆ ತಲೆನೋವು, ಟೆನ್ಶನ್ ಇಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

ಬೇವಿನ ಬಳಕೆ:

ಕೂದಲು ಉದುರುವುದು ಹಾಗೂ ತಲೆಹೊಟ್ಟಿನ ಸಮಸ್ಯೆಗೆ ಬೇವು ಅತ್ಯಂತ ಉತ್ತಮ ಆಯುರ್ವೇದ ಔಷಧಿ. ಇದನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ರಕ್ತಸಂಚಲನ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಬಾಲನೆರೆ, ಕೂದಲು ಉದುರಿ ತೆಳ್ಳಗಾಗುವುದನ್ನು ಇದು ತಪ್ಪಿಸುತ್ತದೆ. ನೀರಿನಲ್ಲಿ ಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ಅದರ ನೀರನ್ನು ಕೂದಲ ಬುಡಕ್ಕೆ ಹಚ್ಚಿ ಒಣಗಿದ ಮೇಲೆ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಅಲ್ಲದೇ ಕೂದಲ ಬೆಳವಣಿಗೆಯೂ ಹೆಚ್ಚುತ್ತದೆ.

ಕುತ್ತಿಗೆಯ ಎಕ್ಸಸೈಸ್ ಗಳು

ಕುತ್ತಿಗೆಯ ಎಕ್ಸಸೈಸ್ ಮಾಡುವುದು ಬಹಳ ಕಷ್ಟದ ಕೆಲಸವೇನಲ್ಲ. ಇದರಿಂದ ಆರೋಗ್ಯಯುತವಾದ ಕೂದಲಿನ ಬೆಳವಣಿಗೆ ಆಗುತ್ತದೆ. ಇದಕ್ಕಾಗಿ ನೀವು ಕುತ್ತಿಗೆಯನ್ನು ಹಿಂದೆ-ಮುಂದೆ ಮಾಡುವುದು ಆಚೆ-ಈಚೆ ಮಾಡುವುದು ಸುತ್ತ ತಿರುಗಿಸುವುದು ಮತ್ತು ತಲೆಯನ್ನು ಎಡಕ್ಕೊಮ್ಮೆ ಹಾಗೂ ಬಲಕ್ಕೊಮ್ಮೆ ಸ್ಟ್ರೆಚ್ ಮಾಡುವುದು ಹೀಗೆ ಆಗಾಗ ಈ ಕುತ್ತಿಗೆಯ ಎಕ್ಸಸೈಸ್ ಮಾಡುವುದರಿಂದ ಒಳ್ಳೆಯ ಪರಿಣಾಮ ಕಾಣುತ್ತೀರಿ.

ಒದ್ದೆ ಕೂದಲು ಬಾಚಬೇಡಿ

ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಸ್ನಾನ ಮಾಡಿದ ಮೇಲೆ ಸ್ವಚ್ಛ ಬಟ್ಟೆಯಲ್ಲಿ ತಲೆಕೂದಲನ್ನು ಕಟ್ಟಿ ಸ್ವಲ್ಪ ಹೊತ್ತಿನ ಮೇಲೆ ಅದನ್ನು ಬಿಚ್ಚಿ, ಸಹಜವಾಗಿಯೇ ಅದು ಒಣಗಲಿ.

ತಲೆಗೆ ಎಣ್ಣೆ ಹಚ್ಚುವುದು

ತಲೆಗೆ ಎಣ್ಣೆ ಹಚ್ಚುವುದು ತುಂಬ ಅಗತ್ಯ. ಕೂದಲು ಉದುರುವುದಕ್ಕೆ ತಲೆಗೆ ಎಣ್ಣೆ ಹಚ್ಚದಿರುವುದೂ ಪ್ರಮುಖ ಕಾರಣ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ತಲೆಕೂದಲ ಬುಡಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ. ಇದಲ್ಲದೆ ಕೆಲವು ಆಯುರ್ವೇದದ ಎಣ್ಣೆಗಳಾದ ಮಹಾಭೃಂಗರಾಜ ತೈಲ, ಆಮ್ಲಾ ಆಯಿಲ್ ಅಥವಾ ಅರ್ನಿಕಾ ಆಯಿಲ್‌ಗಳನ್ನೂ ಬಳಸಿದರೆ ಉತ್ತಮ. ಎಣ್ಣೆ ತಲೆಕೂದಲ ಬೇರುಗಳಿಗೆ ಇಳಿಯುವಂತೆ ಬುಡಕ್ಕೆ ಹಚ್ಚಬೇಕು.

ಯೋಗ ಮಾಡುವುದು

ಪ್ರತಿನಿತ್ಯ ಯೋಗ ಮಾಡುವುದರಿಂದ ಕೂದಲು ಹೆಚ್ಚು ಸೊಂಪಾಗಿ ಬೆಳೆಯುತ್ತದೆ ಜೊತೆಗೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಇದಕ್ಕಾಗಿ ನೀವು ಉತ್ತನಾಸನ ಮಾಡಬೇಕು ಇದರಿಂದಾಗಿ ನೆತ್ತಿಯಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ ಹೆಚ್ಚು ಸ್ಟ್ರೆಸ್ ನಿಂದ ಕೂದಲು ಉದುರುತ್ತಿದ್ದರೆ ಯೋಗ ಮಾಡುವುದರಿಂದ ಈ ಸಮಸ್ಯೆಯು ಪರಿಹಾರವಾಗುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *