ಲೋ ಬಿಪಿ ಲಕ್ಷಣಗಳು ಇವೇ ನೋಡಿ; ಎಂದಿಗೂ ನೆಗ್ಲೆಕ್ಟ್ ಮಾಡ್ಬೇಡಿ
ನ್ಯೂಸ್ ಆ್ಯರೋ: ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯವಾಗಿ ರಕ್ತದೊತ್ತಡವು 120/90 mm Hg ಇರಬೇಕು. ಆದರೆ ಅದಕ್ಕಿಂತ ಕಡಿಮೆ ಹಾಗು ಹೆಚ್ಚಿನ ರಕ್ತದೊತ್ತಡ ಹೊಂದಿರುವವರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಅಂದರೆ ರಕ್ತದೊತ್ತಡವು 90/60 mm Hgಗಿಂತ ಕಡಿಮೆ ಇರುವುದನ್ನು ಲೋ ಬಿಪಿ ಎಂದು ಕರೆಯುತ್ತಾರೆ. ಕೆಲವೊಮ್ಮೆ ನಿಮ್ಮ ರಕ್ತದೊತ್ತಡವನ್ನು ತೀರಾ ಕಡಿಮೆಯಾಗಿ ಮೂರ್ಛೆ ಹೋಗುವುದು, ದೃಷ್ಟಿ ಮಂದವಾಗುವುದು ಮತ್ತು ತಲೆ ತಿರುಗುವಿಕೆ ಹೀಗೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.
ಚಿಕಿತ್ಸೆ ನೀಡದೆ ಇದನ್ನು ಹೀಗೆ ಬಿಟ್ಟರೆ, ಕಡಿಮೆ ರಕ್ತದೊತ್ತಡವು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು, ಹೃದಯ ಮತ್ತು ಮೆದುಳಿಗೆ ದೀರ್ಘಕಾಲದ ಹಾನಿ ಉಂಟುಮಾಡಬಹುದು ಅಥವಾ ಇದು ಕೆಲವೊಮ್ಮೆ ಸಾವಿಗೆ ಕಾರಣವಾಗಬಹುದು. ಆದ್ದರಿಂದ ಕಡಿಮೆ ರಕ್ತದೊತ್ತಡವು ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಬಹಳ ಅಪಾಯಕಾರಿ ಪರಿಣಾಮಗಳನ್ನು ಉಂಟು ಮಾಡಬಹುದು.
ಲೋ ಬಿಪಿ ಲಕ್ಷಣಗಳು:
ತಲೆತಿರುಗುವಿಕೆ, ತ್ವರಿತ ಹೃದಯ ಬಡಿತ, ಅತಿಯಾದ ನಿದ್ರಾಹೀನತೆ, ಆಲಸ್ಯ, ಆಯಾಸ, ವಾಕರಿಕೆ, ವಾಂತಿ, ಅತಿಯಾದ ಬೆವರುವಿಕೆ, ಶೀತ ಚರ್ಮ ಮತ್ತು ಉಸಿರಾಟದ ಸಮಸ್ಯೆ ಇವು ಕಡಿಮೆ ರಕ್ತದೊತ್ತಡದ ಲಕ್ಷಣಗಲಾಗಿವೆ.
ಲೋ ಬಿಪಿ ತಡೆಗಟ್ಟಲು ಟಿಪ್ಸ್:
ಕಡಿಮೆ ರಕ್ತದೊತ್ತಡವನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ. ದಿನಕ್ಕೆ ಕನಿಷ್ಠ 10 ಗ್ಲಾಸ್ ನೀರು ಕುಡಿಯಿರಿ. ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಸೋಡಿಯಂನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಬಿಸಿ ಚಹಾ ಮತ್ತು ಕಾಫಿ ಕುಡಿಯಿರಿ.
ಯೋಗ ಮತ್ತು ವ್ಯಾಯಾಮದ ನಿಯಮಿತ ಅಭ್ಯಾಸವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವ್ಯಾಯಾಮ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು. ಒಂದೇ ಬಾರಿಗೆ ಹೆಚ್ಚು ತಿನ್ನಬೇಡಿ. ಆದರೆ ಆಗಾಗ್ಗೆ ಸ್ವಲ್ಪ ಪ್ರಮಾಣದಲ್ಲಿ ತಿನ್ನಿ.
ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಡ್ರೈ ಫ್ರೂಟ್ಸ್ ಸೇರಿಸಬಹುದು. ದೈನಂದಿನ ಆಹಾರದಲ್ಲಿ ಮೊಟ್ಟೆ, ಹಾಲು, ಮೀನು, ದ್ರಾಕ್ಷಿ, ಬಾಳೆಹಣ್ಣು, ಕಿವಿ, ಸೂಪ್, ಧಾನ್ಯಗಳು, ಸೋಡಿಯಂ ಭರಿತ ಆಹಾರಗಳನ್ನು ಸೇವಿಸಬಹುದು. ಇವುಗಳ ಜೊತೆಗೆ ಆಗಾಗ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು.
ಹೆಚ್ಚಿನ ಉಪ್ಪಿನಂಶವಿರುವ ಆಹಾರಗಳು ನಿಮ್ಮ ರಕ್ತದೊತ್ತಡ ಹೆಚ್ಚಿಸಬಹುದು. ಉಪ್ಪಿನ ಉತ್ತಮ ಮೂಲಗಳಲ್ಲಿ ಆಲಿವ್‌ಗಳು, ಕಾಟೇಜ್ ಚೀಸ್ ಮತ್ತು ಪೂರ್ವ ಸಿದ್ಧ ಸೂಪ್ ಅಥವಾ ಮೀನುಗಳು ಸೇರಿವೆ. ನಿಮ್ಮ ಆದ್ಯತೆಗೆ ಅನುಗುಣವಾಗಿ ನಿಮ್ಮ ಊಟಕ್ಕೆ ನೀವು ಉಪ್ಪನ್ನು ಸೇರಿಸಿಕೊಳ್ಳಬಹುದು.
ಅತಿಯಾಗಿ ಆಲ್ಕೋಹಾಲ್ ಕುಡಿಯುವುದರಿಂದ ಅದು ನಿಮ್ಮನ್ನು ನಿರ್ಜಲೀಕರಣಗೊಳಿಸುತ್ತದೆ, ಇದು ನಿಮ್ಮ ರಕ್ತದ ಪ್ರಮಾಣ ಕಡಿಮೆ ಮಾಡುವ ಮೂಲಕ ನಿಮ್ಮ ರಕ್ತದೊತ್ತಡ ಕಡಿಮೆ ಮಾಡುತ್ತದೆ. ನೀವು ಕುಡಿಯುವಾಗ ಜವಾಬ್ದಾರಿಯುತವಾಗಿ ಕುಡಿಯಿರಿ. ನಿರ್ಜಲೀಕರಣ ತಪ್ಪಿಸಲು ಪ್ರತಿ ಗ್ಲಾಸ್ ಮದ್ಯ ಕುಡಿದ ನಂತರ 1 ಲೋಟ ನೀರು ಕುಡಿಯಲು ಪ್ರಯತ್ನಿಸಿ.
Leave a Comment