ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಿಂಹ ಪ್ರಿಯಾ ಜೋಡಿ; ರಾಜ್ಯೋತ್ಸವದಂದು ಸಿಹಿ ಸುದ್ದಿ ಹಂಚಿಕೊಂಡ ವಸಿಷ್ಠ-ಹರಿಪ್ರಿಯಾ

Haripriya
Spread the love

ನ್ಯೂಸ್ ಆ್ಯರೋ: ಕನ್ನಡದ ಸ್ಟಾರ್ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿಯಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪೋಷಕರಾಗುತ್ತಿರುವ ಸಿಹಿಸುದ್ದಿಯನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಈ ಶುಭ ದಿನದಂದು ನಿಮ್ಮೆಲ್ಲರೊಡನೆ ಶುಭ ಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ ‘ಕುಡಿ’ಗಾಗಿ ಎದುರು ನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ, ಆರ್ಶಿವಾದಗಳ ನಿರೀಕ್ಷೆಯಲ್ಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವಸಿಷ್ಠ ಸಿಂಹ ದಂಪತಿ ಅಧಿಕೃತವಾಗಿ ತಿಳಿಸಿದ್ದಾರೆ. ಈ ಜೋಡಿಗೆ ಸೆಲೆಬ್ರಿಟಿಗಳಿಂದ, ಅಭಿಮಾನಿಗಳಿಂದ ಗುಡ್ ನ್ಯೂಸ್ ಸಿಕ್ಕಿದೆ.

ಇನ್ನೂ ಡಾಲಿ ಮತ್ತು ವಸಿಷ್ಠ ಸಿಂಹ ಹಲವು ವರ್ಷಗಳಿಂದ ಸ್ನೇಹಿತರು. ಇಂದು (ನ.1) ಡಾಲಿ ಅವರು ಭಾವಿ ಪತ್ನಿಯನ್ನು ಪರಿಚಯಿಸಿ ಮದುವೆ ಡೇಟ್ ಅನೌನ್ಸ್ ಮಾಡಿದ್ದಾರೆ. ಈ ಬೆನ್ನಲ್ಲೇ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗುಡ್ ನ್ಯೂಸ್ ನೀಡಿದ್ದಾರೆ ವಸಿಷ್ಠ ಸಿಂಹ ದಂಪತಿ.

ಅಂದಹಾಗೆ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ವರ್ಷ ಜನವರಿ 26ರಂದು ಮೈಸೂರಿನಲ್ಲಿ ಹಸೆಮಣೆ ಏರಿದ್ದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

https://www.instagram.com/iamhariprriya/?utm_source=ig_embed&ig_rid=26b87a3a-3d73-4af6-8fc2-71ac3a118198

Leave a Comment

Leave a Reply

Your email address will not be published. Required fields are marked *

error: Content is protected !!