ಬೀಚ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ-ಸಾರ ಅಲಿ ಖಾನ್; ವೈರಲ್‌ ಫೋಟೊ ಹಿಂದಿನ ಅಸಲಿಯತ್ತೇನು ?

Hardik Pandya And Sara Ali Khan
Spread the love

ನ್ಯೂಸ್ ಆ್ಯರೋ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಒಟ್ಟಿಗೆ ಕಾಣಿಸಿಕೊಂಡಿರುವ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಕ್ರಿಸ್‌ಮಸ್ ಹಬ್ಬವನ್ನು ಇಬ್ಬರೂ ಒಟ್ಟಿಗೆ ಆಚರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಬೀಚ್​ನಲ್ಲಿ ಕುಳಿತು ಕಾಫಿ ಸೇವಿಸುತ್ತಿರುವ ಹಾಗೂ ಫೋಟೋಕ್ಕೆ ಪೋಸ್ ನೀಡುತ್ತಿರುವುದು ಇದರಲ್ಲಿದೆ.

ಫೇಸ್‌ಬುಕ್ ಬಳಕೆದಾರರು ಹಾರ್ದಿಕ್ ಹಾಗೂ ಸಾರಾ ಬೀಚ್​ನಲ್ಲಿರುವ ಮೂರು ಫೋಟೀಗಳನ್ನು ಹಂಚಿಕೊಂಡು, ‘‘ಹಾರ್ದಿಕ್ ಪಾಂಡ್ಯ ಮತ್ತು ಸಾರಾ ಅಲಿ ಖಾನ್ ಕ್ರಿಸ್ಮಸ್ ಆನಂದಿಸುತ್ತಿದ್ದಾರೆ…’’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋಗಳು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ತನಿಖೆಯ ನಂತರ, ಈ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಫೋಟೋದಲ್ಲಿ ಮುಖವು ತುಂಬಾ ಮೃದುವಾಗಿದೆ, ನೆರಳುಗಳು ಸರಿಯಾಗಿ ಕಾಣಿಸುತ್ತಿಲ್ಲ, ಬಟ್ಟೆಗಳು ಕೂಡ ವಿರೂಪಗೊಂಡಿದೆ, ಬೆಳಕು ಕೂಡ ನೈಜ್ಯ ರೀತಿಯಲ್ಲಿಲ್ಲ, ಬ್ಯಾಕ್​ಗ್ರೌಂಡ್ ಕೂಡ ಅಸ್ಪಷ್ಟವಾಗಿದೆ. ಅಲ್ಲದೆ, ಸಾರಾ ಅಲಿ ಖಾನ್ ಅವರ ಮುಖದ ರಚನೆಯು ಗೊಂಬೆಯಂತಿದೆ. ಇದನ್ನೆಲ್ಲ ನೋಡಿದರೆ ಎಐ ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ.

ಇದರಲ್ಲಿ AI ನಿಂದ ಈ ಚಿತ್ರವನ್ನು ರಚಿಸುವ ಸಂಭವನೀಯತೆ 98.9 ಪ್ರತಿಶತ ಎಂದು ಹೇಳಲಾಗಿದೆ. ಎರಡನೇ ಫೋಟೋಕ್ಕೆ 99.8 ಪ್ರತಿಶತ ಮತ್ತು ಮೂರನೇ ಫೋಟೋವನ್ನು AI ಇಮೇಜ್ ಡಿಟೆಕ್ಷನ್ ಟೂಲ್ ಹೈವ್ ಮಾಡರೇಶನ್‌ನೊಂದಿಗೆ ಪರಿಶೀಲಿಸಿದಾಗ ಇದು 99.9 ಪ್ರತಿಶತ ಎಂದು ಹೇಳಲಾಗಿದೆ ಎಂದು ಕಂಡುಬಂದಿದೆ.

https://www.facebook.com/photo.php?fbid=1315241992988204&set=a.110687846776964&type=3&ref=embed_post

Leave a Comment

Leave a Reply

Your email address will not be published. Required fields are marked *

error: Content is protected !!