ಭಾರತೀಯ ಸೇನೆಯಿಂದ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ; ವಿವಾದ, ತೀವ್ರ ಚರ್ಚೆಗೆ ಗ್ರಾಸ

statue in Eastern Ladakh
Spread the love

ನ್ಯೂಸ್ ಆ್ಯರೋ: ಭಾರತದ ಗಡಿಭಾಗವಾದ ಪೂರ್ವ ಲಡಾಖ್‌ನಲ್ಲಿ ಸ್ಥಳೀಯ ಭಾರತೀಯ ಸೇನಾ ಘಟಕದಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದಾರೆ. ಆದರೆ ಇದನ್ನು ಕೆಲವರು ಹೊಗಳುತ್ತಿದ್ದರೇ ಮತ್ತೆ ಕೆಲ ಅನುಭವಿಗಳು ಮತ್ತು ಸ್ಥಳೀಯರು ಇದರ ಅಗತ್ಯತೆ ಏನಿತ್ತು ಎಂದು ಪ್ರಶ್ನೇ ಮಾಡುತ್ತೀದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಪ್ರತಿಮೆಯನ್ನು 14,300 ಅಡಿ ಎತ್ತರದಲ್ಲಿ ಪ್ಯಾಂಗೊಂಗ್ ತ್ಸೋ ತೀರದಲ್ಲಿ ಅನಾವರಣಗೊಳಿಸಲಾಗಿದೆ ಎಂದು ಭಾರತೀಯ ಸೇನೆಯ ಲೇಹ್ ಮೂಲದ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಈ ಒಂದು ಪೋಸ್ಟ್‌ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಶೌರ್ಯ, ದೂರದೃಷ್ಟಿ ಮತ್ತು ಅಚಲ ನ್ಯಾಯದ ಅತ್ಯುನ್ನತ ಸಂಕೇತದ ಪ್ರತಿಮೆಯನ್ನು GOC ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಮತ್ತು ದಿ ಮರಾಠ ಲೈಟ್ ಇನ್ ಫಾಂಟ್ರಿಲ್ ಕರ್ನಲ್ ಲೆಫ್ಟಿನೆಂಟ್ ಜನರಲ್ ಹಿತೇಶ್ ಭಲ್ಲಾ ಅನಾವರಣಗೊಳಿಸಿದ್ದಾರೆ. ಇದು ಭಾರತೀಯ ಪ್ರಸಿದ್ದ ಆಡಳಿತಗಾರನ ಅಚಲ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಈ ಒಂದು ಪ್ರತಿಮೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುತ್ತದೆ ಎಂದು ಕಾರ್ಪ್ಸ್ ಹೇಳಿಕೆ ನೀಡಿದ್ದಾರೆ.

ಸೇನೆಯ ಕ್ರಮಕ್ಕೆ ಸ್ಥಳೀಯ ನಿವಾಸಿಯಾಗಿರುವ ಚುಶುಲ್ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ಅನನ್ಯ ಪರಿಸರ ಮತ್ತು ವನ್ಯಜೀವಿಗಳು ನಮ್ಮ ಸಮುದಾಯ ಮತ್ತು ಪ್ರಕೃತಿಯನ್ನು ನಿಜವಾಗಿಯೂ ಪ್ರತಿಬಿಂಬಿಸುವ ಮತ್ತು ಗೌರವಿಸುವ ಯೋಜನೆಗಳಿಗೆ ಆದ್ಯತೆ ನೀಡೋಣ ಎಂದಿದ್ದಾರೆ. ಇಂದಹ ವಿವಾದಗಳಿಂದ ಭಾರತೀಯ ಸೇನೆ ಹೊರಗಿದ್ದರೇ ಉಳಿತು ಎಂದು ಹಲವಾರು ಜನ ಅಭಿಪ್ರಾಯ ಪಟ್ಟಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!