ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಹಿನ್ನಡೆ; ಸಹಿ ಹಾಕದೇ ವಾಪಸ್ ಕಳುಹಿಸಿದ ರಾಜ್ಯಪಾಲರು

Gvt
Spread the love

ನ್ಯೂಸ್ ಆ್ಯರೋ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿ ರಾಜ್ಯಪಾಲರಿಗೆ ಕಳುಹಿಸಿತ್ತು. ಇದೀಗ ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಿದೆ.

ಸರ್ಕಾರ ಕಳುಹಿಸಿರುವ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಮಾಡದೇ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಸುಗ್ರಿವಾಜ್ಞೆಯಲ್ಲಿ ಕೆಲವು ದೋಷಗಳು ರಾಜ್ಯಪಾಲರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಾಪಸ್ ಕಳುಹಿಸಿ, ಸ್ಪಷ್ಟನೆ ಕೇಳಿದ್ದಾರೆ.

ದಂಡ ಮತ್ತು ಶಿಕ್ಷೆಯ ಪ್ರಮಾಣದ ವಿಚಾರದಲ್ಲಿ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟನೆಯನ್ನು ಕೇಳಿದ್ದಾರೆ. ಸುಗ್ರಿವಾಜ್ಞೆಯಲ್ಲಿ ಸಾಲ ಪಡೆದವರ ಬಗ್ಗೆ ಮಾತ್ರ ಗಮನ ನೀಡಲಾಗಿದೆ. ಹಾಗಾದರೆ ಸಾಲ ನೀಡಿದವರ ಕತೆ ಏನು? ಸಾಲ ಕೊಟ್ಟವರಿಗೂ ನ್ಯಾಯ ಸಿಗಬೇಕಲ್ವವೇ? ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದೆ ರಾಜ್ಯಪಾಲರು ಇಟ್ಟಿದ್ದಾರೆ.

ಮೈಕ್ರೋ ಫೈನಾನ್ಸ್​ಗಳು ಮೂರು ಲಕ್ಷಕ್ಕಿಂತ ಹೆಚ್ಚು ಸಾಲವನ್ನು ಕೊಡೋದಿಲ್ಲ ಅನ್ನೋದು ಸರ್ಕಾರ ಗಮನಿಸಿರುವ ಅಂಶ. ಹೀಗಿರುವಾಗ ಮೂರು ಲಕ್ಷಕ್ಕೆ ಕಿರುಕುಳ ನೀಡಿದವರಿಗೆ ಐದು ಲಕ್ಷದವರೆಗೆ ಹೇಗೆ ದಂಡ ವಿಧಿಸುತ್ತೀರಿ ಅನ್ನೋದ್ರ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ.

Leave a Comment

Leave a Reply

Your email address will not be published. Required fields are marked *