ದೀಪಾವಳಿಗೆ 7,000 ವಿಶೇಷ ರೈಲು; ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ

special trains are being run for Deepawali
Spread the love

ನ್ಯೂಸ್ ಆ್ಯರೋ: ಕೇಂದ್ರ ಸರ್ಕಾರ ರೈಲು ಪ್ರಯಾಣಿಕರಿಗೆ ಬಂಪರ್​​​​​ ದೀಪಾವಳಿ ಆಫರ್​​ ನೀಡಿದೆ. ಪ್ರತಿದಿನ ಎರಡು ಲಕ್ಷ ಹೆಚ್ಚುವರಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೇ ಈ ವರ್ಷ ದೀಪಾವಳಿ ಮತ್ತು ಛತ್ ಪೂಜೆಗೆ 7,000 ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರೈಲ್ವೇ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ದೀಪಾವಳಿ ಮತ್ತು ಛಾತ್ ಪೂಜೆ ಸಂದರ್ಭದಲ್ಲಿ 4,500 ವಿಶೇಷ ರೈಲುಗಳನ್ನು ಓಡಿಸಲಾಗಿತ್ತು. ಈ ಬಾರಿಯೂ ಪ್ರಯಾಣಿಕರು ಹೆಚ್ಚಾಗುವ ನಿಟ್ಟಿನಲ್ಲಿ 7 ಸಾವಿರ ರೈಲುಗಳನ್ನು ಓಡಿಸಲು ಮುಂದಾಗಿದೆ.

Train 2 1

ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರು ಹೆಚ್ಚು ರೈಲಿನಲ್ಲಿ ಓಡಾಡುತ್ತಾರೆ. ಈಗಾಗಲೇ ಉತ್ತರ ರೈಲ್ವೆ (NR) ಗಣನೀಯ ಸಂಖ್ಯೆಯ ರೈಲುಗಳನ್ನು ನಿರ್ವಹಿಸುತ್ತದೆ. ಉತ್ತರ ರೈಲ್ವೆ ಇಲಾಖೆಯ ಇತ್ತೀಚಿನ ಪತ್ರಿಕಾ ಹೇಳಿಕೆ ಪ್ರಕಾರ, ಜನರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಸಹಾಯ ಮಾಡಲು ಸುಮಾರು 3,050 ವಿಶೇಷ ರೈಲುಗಳ ಉಪಯೋಗವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

2023ರಲ್ಲಿ, ಭಾರತೀಯ ರೈಲ್ವೇ ವಿಶೇಷ ರೈಲು ಉತ್ಸವವನ್ನು ನಡೆಸಿತ್ತು. ಈ ಬಾರಿ ಇದಕ್ಕೆ ಅನುಗುಣವಾಗಿ ಉತ್ತರ ರೈಲ್ವೆ 1,082 ವಿಶೇಷ ರೈಲು ಓಡಿಸುವ ಮೂಲಕ ದೇಶದಲ್ಲಿ ಒಟ್ಟು 3,050 ರೈಲ್ವೆಗಳು ಓಡಾಟ ನಡೆಸಿದೆ. ಇದೀಗ ಇದು ಇದು ಶೇಕಡಾ 181 ರಷ್ಟು ಹೆಚ್ಚಳವಾಗಿದೆ. ವಿಶೇಷ ರೈಲುಗಳ ಹೊರತಾಗಿ, ಪ್ರಯಾಣಕ್ಕಾಗಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಲು ರೈಲುಗಳಲ್ಲಿ ಹೆಚ್ಚುವರಿ ಕೋಚ್‌ಗಳನ್ನು ಹೆಚ್ಚಿಸಲಾಗುತ್ತಿದೆ.

Leave a Comment

Leave a Reply

Your email address will not be published. Required fields are marked *

error: Content is protected !!