ನಿಂತಿದ್ದ ಮಾಸಿಕ ವೃದ್ಧಾಪ್ಯ ವೇತನ ಪುನಾರಂಭ; ಸರ್ಕಾರದಿಂದ ಹಿರಿಯರಿಗೆ ₹2500 ಬಂಪರ್​

Scheme
Spread the love

ನ್ಯೂಸ್ ಆ್ಯರೋ: ದೆಹಲಿ ವಿಧಾನಸಭೆ ಚುನಾವಣೆಗೂ ಮೊದಲೇ ಆಡಳಿತಾರೂಢ ಆಮ್​ ಆದ್ಮಿ ಪಕ್ಷ (ಆಪ್​) ಭರ್ಜರಿಯಾಗಿ ತಯಾರಿ ನಡೆಸಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಇಂದು ಮಹತ್ವದ ಮತ್ತೊಂದು ಘೋಷಣೆ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯ ವೃದ್ಧರಿಗೆ ಮಾಸಿಕ 2500 ರೂಪಾಯಿ ವೃದ್ಧಾಪ್ಯ ವೇತನ ನೀಡಲಾಗುವುದು ಎಂದು ಘೋಷಣೆ ಮಾಡಿದೆ. ದೆಹಲಿ ಸರ್ಕಾರವು ಈಗಾಗಲೇ 5.3 ಲಕ್ಷ ವೃದ್ಧರಿಗೆ ಪಿಂಚಣಿ ನೀಡಲಾಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕೇಜ್ರಿವಾಲ್ ಅವರು, ಇಂದು ಪಕ್ಷವು ದೆಹಲಿಯ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿಯೊಂದನ್ನು ತಂದಿದೆ. ವೃದ್ಧಾಪ್ಯ ಯೋಜನೆಯಲ್ಲಿ 2500 ರೂಪಾಯಿ ನೀಡಲಾಗುತ್ತದೆ. ಇದು ವೃದ್ಧರಿಗೆ ಆರ್ಥಿಕ ಭದ್ರತೆ ನೀಡುತ್ತದೆ ಇದರಿಂದ ಅವರು ತಮ್ಮ ಜೀವನವನ್ನು ಘನತೆಯಿಂದ ಬದುಕಬಹುದು” ಎಂದು ಹೇಳಿದರು.

ಈ ಯೋಜನೆಗೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಇದೀಗ ಪರಿಣಾಮಕಾರಿಯಾಗಿ ಜಾರಿಯಾಗಲಿವೆ. ಈ ಹೊಸ ಪಿಂಚಣಿ ಯೋಜನೆಯಡಿ ಕಳೆದ 24 ಗಂಟೆಗಳಲ್ಲಿ 10,000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇದು ವೃದ್ಧರಲ್ಲಿ ಈ ಯೋಜನೆಗೆ ಹೆಚ್ಚಿನ ಉತ್ಸಾಹವಿದೆ ಎಂಬುದನ್ನು ಸೂಚಿಸುತ್ತಿದೆ. ಅರ್ಜಿಯ ಪ್ರಕ್ರಿಯೆಯು ಸರಳ ಮತ್ತು ಸುಲಭವಾಗಿದೆ ಎಂದು ಸರ್ಕಾರ ಖಚಿತಪಡಿಸಿದೆ. ಇದರಿಂದಾಗಿ ಎಲ್ಲ ಅರ್ಹ ಹಿರಿಯ ನಾಗರಿಕರು ಯಾವುದೇ ತೊಂದರೆಯಿಲ್ಲದೆ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.

ವೃದ್ಧಾಪ್ಯ ಪಿಂಚಣಿ ಯೋಜನೆಯ ಮುಖ್ಯ ಉದ್ದೇಶ ಎಂದರೆ ವೃದ್ಧರಿಗೆ ಆರ್ಥಿಕ ನೆರವು ನೀಡುವುದು, ಅವರ ದೈನಂದಿನ ಖರ್ಚುಗಳನ್ನು ಪೂರೈಸಲು ಸಹಾಯ ಮಾಡುವುದು. ಈ ಪಿಂಚಣಿಯು ಅವರಿಗೆ ಆರ್ಥಿಕ ಭದ್ರತೆಯನ್ನು ನೀಡುವುದಲ್ಲದೇ ಮಾನಸಿಕ ಶಾಂತಿಯನ್ನು ನೀಡುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!