ವಿದುರರ ಈ 4 ತತ್ವಗಳಿಂದ ನಿಮ್ಮ ಬಳಿ ಹಣವೇ ಖಾಲಿಯಾಗದು; ಹಣವನ್ನು ಹೆಚ್ಚಿಸಿಕೊಳ್ಳಲು ವಿದುರರ ಸಲಹೆ ಏನು ?

Vidur Neeti
Spread the love

ನ್ಯೂಸ್ ಆ್ಯರೋ: ಜೀವನದಲ್ಲಿ ಅಭಿವೃದ್ಧಿ ಹೊಂದಲು ನಾವು ಹಣವನ್ನು ಸಂಪಾದಿಸುವುದು, ಇರುವ ಹಣವನ್ನು ಹೆಚ್ಚಾಗುವಂತೆ ಮಾಡುವುದು ಮತ್ತು ಹಣವನ್ನು ಸದುಪಯೋಗ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಆದರೆ, ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರೂ ಕೈಯಲ್ಲಿ ಹಣ ಉಳಿಯುವುದಿಲ್ಲ. ದುಡಿದ ಹಣವೆಲ್ಲಾ ನಮಗೆ ಗೊತ್ತಿಲ್ಲದಂತೆ ನೋಡು ನೋಡುತ್ತಲೇ ಖಾಲಿಯಾಗುತ್ತದೆ.

ಲೌಕಿಕ ಜೀವನದಲ್ಲಿ ಅರ್ಥವೆನ್ನುವ ಹಣವಿಲ್ಲದಿದ್ದರೆ ಎಲ್ಲವೂ ಅರ್ಥಹೀನ. ಅದಕ್ಕಾಗಿಯೇ ಹಣವು ಸುರಕ್ಷಿತವಾಗಿರಲು ಆ ನಾಲ್ಕು ಮಾರ್ಗಗಳನ್ನು ಮಹಾತ್ಮ ವಿದುರರು ತಮ್ಮ ವಿದುರ ನೀತಿಯಲ್ಲಿ ಹೇಳಿದ್ದಾರೆ. ನೀವೂ ಈ 4 ವಿಧಾನಗಳ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು.

ನಾವು ಒಳ್ಳೆಯ ಕಾರ್ಯಗಳನ್ನು ಅಥವಾ ಶುಭ ಕಾರ್ಯಗಳನ್ನು ಮಾಡುವ ಮೂಲಕ ಲಕ್ಷ್ಮಿ ದೇವಿಯ ಶಾಶ್ವತ ನೆಲೆಯನ್ನು ಪಡೆದುಕೊಳ್ಳಬಹುದು. ಇದರರ್ಥ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಕೆಲಸದಿಂದ ಹಣವನ್ನು ಸಂಪಾದಿಸಲಾಗುತ್ತದೆ. ನಾವು ಈ ಮಾರ್ಗವನ್ನು ಅನುಸರಿಸಿದಾಗ ಮಾತ್ರ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆದುಕೊಳ್ಳಲು ಸಾಧ್ಯ.

ನಮ್ಮಲ್ಲಿನ ಹಣವನ್ನು ಹೂಡಿಕೆ ಮಾಡುವುದರಿಂದ ಹಾಗೂ ಸರಿಯಾದ ನಿರ್ವಹಣೆಯ ಮೂಲಕ ಹಣವನ್ನು ಉಳಿತಾಯ ಮಾಡುವುದರಿಂದ ನಮ್ಮಲ್ಲಿನ ಹಣವು ಹೆಚ್ಚಾಗತೊಡಗುತ್ತದೆ. ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುವ ಉದ್ದೇಶದಿಂದ ಸರಿಯಾದ ಮಾರ್ಗದಲ್ಲಿ ಹೂಡಿಕೆಯನ್ನು ಮಾಡುವುದು ಉತ್ತಮ. ಇದರಿಂದ ನಾವು ಖಂಡಿತವಾಗಿಯೂ ಲಾಭವನ್ನು ಪಡೆಯುತ್ತೇವೆ.

ನಮ್ಮಲ್ಲಿರುವ ಹಣವನ್ನು ನಾವು ಬುದ್ಧಿವಂತಿಕೆಯಿಂದ ಬಳಸಿದರೆ ಹಾಗೂ ಖರ್ಚು ಮತ್ತು ವೆಚ್ಚಗಳ ಕುರಿತು ವಿಶೇಷವಾದ ಕಾಳಜಿಯನ್ನು ತೆಗೆದುಕೊಂಡರೆ ಖಂಡಿತ ನಮ್ಮಲ್ಲಿ ಹಣದ ಉಳಿತಾಯವಾಗುತ್ತದೆ. ಮತ್ತು ಅದು ಅಭಿವೃದ್ಧಿಯಾಗುತ್ತದೆ. ಬುದ್ಧಿವಂತಿಕೆಯಿಂದ ನಾವು ಉಳಿಸಿದ ಹಣವು ಮುಂದೊಂದು ದಿನ ನಮ್ಮ ಸಹಾಯಕ್ಕೆ ಬರಬಹುದು.

ಕೊನೆಯ ಸೂತ್ರವೆಂದರೆ ಸಂಯಮ. ಅಂದರೆ, ಮಾನಸಿಕ, ದೈಹಿಕ ಮತ್ತು ಸೈದ್ಧಾಂತಿಕ ಸಂಯಮವನ್ನು ಕಾಪಾಡಿಕೊಳ್ಳುವುದರಿಂದ ಹಣವನ್ನು ಹೊಂದಬಹುದು. ಇದರರ್ಥ ಸಂತೋಷವನ್ನು ಪಡೆಯುವ ತರಾತುರಿಯಲ್ಲಿ ಮತ್ತು ಹವ್ಯಾಸಗಳನ್ನು ಪೂರೈಸುವ ಬಯಕೆಯಲ್ಲಿ ಹಣವನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಮನೆ ಮತ್ತು ಕುಟುಂಬದ ಅಗತ್ಯಗಳಿಗೆ ಮಾತ್ರ ಹಣವನ್ನು ಖರ್ಚು ಮಾಡಿ ಎಂದು ವಿದುರರು ಹೇಳುತ್ತಾರೆ.

ವಿದುರ ನೀತಿಯ ಪ್ರಕಾರ ಸಂಪತ್ತನ್ನು ಸಂಪಾದಿಸಲು, ಹೆಚ್ಚಿಸಲು ಮತ್ತು ಉಳಿಸಲು ಈ ಮೇಲಿನ 4 ಮಾರ್ಗಗಳು ಉತ್ತಮ ಮಾರ್ಗಗಳಾಗಿವೆ. ವಾಸ್ತವವಾಗಿ, ನಾವು ಅದನ್ನು ಉಳಿಸುವುದಕ್ಕಿಂತ ಹಣವನ್ನು ಹೆಚ್ಚಿಸುವ ಕಡೆಗೆ ಹೆಚ್ಚು ಯೋಚಿಸಬೇಕು. ಎಲ್ಲಿ ಸುಖ, ಪ್ರೀತಿ, ಭ್ರಾತೃತ್ವ ಮತ್ತು ಸ್ವಚ್ಛತೆ ಇರುತ್ತದೋ ಆ ಕುಟುಂಬದಲ್ಲಿ ಸಂಪತ್ತು ಉಳಿಯುತ್ತದೆ ಎಂಬುದನ್ನೂ ನಾವು ಅರ್ಥಮಾಡಿಕೊಳ್ಳಬೇಕು.

Leave a Comment

Leave a Reply

Your email address will not be published. Required fields are marked *