ಬಾಲಿವುಡ್ ನಟ ಸೈಫ್ ಅಲಿಖಾನ್​ಗೆ ಚಾಕು ಇರಿತ; ಆರೋಪಿ ಸುಳಿವು ಪತ್ತೆ,ಕಾರಣ ಬಹಿರಂಗ

Saif Ali Khan stabbed
Spread the love

ನ್ಯೂಸ್ ಆ್ಯರೋ: ಬಾಲಿವುಡ್ ನಟ ಸೈಫ್ ಅಲಿಖಾನ್ ಚಾಕು ಇರಿತ ಪ್ರಕರಣ ಸದ್ಯ ಇಡೀ ಚಿತ್ರರಂಗದಲ್ಲಿ ದೊಡ್ಡ ಆತಂಕವನ್ನು ಸೃಷ್ಟಿ ಮಾಡಿದೆ. ಇಲ್ಲಿಯವರೆಗೆ ಯಾರು ಸೈಫ್ ಮೇಳೆ ಅಟ್ಯಾಕ್ ಮಾಡಿದ್ದು. ಕಾರಣವೇನು ಎಂಬ ಯಕ್ಷ ಪ್ರಶ್ನೆಯೊಂದು ಎಲ್ಲರನ್ನು ಕಾಡುತ್ತಿತ್ತು. ಸದ್ಯ ಈಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಸೈಫ್ ಮನೆಕೆಲಸದಾಕೆಯ ಜೊತೆ ವಾಗ್ವಾದ ಮಾಡುತ್ತಿದ್ದ ಖದೀಮನೇ ಸೈಫ್​ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂಬ ಸತ್ಯ ಬಹಿರಂಗವಾಗಿದೆ.

ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಮನೆಗೆ ಅಪರಿಚಿತ ವ್ಯಕ್ತಿ ಎಂಟ್ರಿ ಕೊಟ್ಟಿದ್ದಾನೆ. ಸೈಫ್ ಮನೆಕೆಲಸದಾಕೆ ಲಿಮಾ ಜೊತೆ ಆ ಖದೀಮ ವಾಗ್ವಾದ ನಡೆಸಿದ್ದಾನೆ. ಜಗಳ ಕೇಳಿಸಿಕೊಂಡ ಸೈಫ್​ ಅಲಿಖಾನ್ ಏನಾಯ್ತು ಎಂದು ನೋಡಲು ರೂಮ್​​ನಿಂದ ಹೊರಬಂದಿದ್ದಾರೆ. ಈ ವೇಳೆ ಖದೀಮನಿಗೂ ಹಾಗೂ ಸೈಫ್​ಗೂ ಮಾತಿಗೆ ಮಾತು ಬೆಳೆದಿದೆ. ರೊಚ್ಚಿಗೆದ್ದ ಖದೀಮ ಸೈಫ್ ಅಲಿಖಾನ್​ಗೆ ಚಾಕುವಿನಿಂದ ಇರಿದಿದ್ದಾನೆ.

ಸೈಫ್​ಗೆ ಈ ಕಿರಾತಕ ಮನಸೋಇಚ್ಛೇ 6 ಕಡೆ ಚಾಕುವುನಿಂದ ಇರಿದಿದ್ದಾನೆ. ಕತ್ತು. ಬೆನ್ನು ಮತ್ತು ಹೊಟ್ಟೆ ಭಾಗ ಸೇರಿ ಆರು ಕಡೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡು ರಕ್ತಸಿಕ್ತವಾಗಿ ಬಿದ್ದಿದ್ದ ಸೈಫ್ ಅಲಿಖಾನ್​ರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಸೈಫ್​ಗೆ ಎರಡು ಶಸ್ತ್ರ ಚಿಕಿತ್ಸೆಯಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಇತ್ತ ಪೊಲೀಸರು ಆರೋಪಿಯ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಸೈಫ್ ಮನೆಯಲ್ಲಿ ಮೆಟ್ಟಿಲು ಇಳಿಯುತ್ತಿದ್ದ ಆರೋಪಿಯ ಫೋಟೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave a Comment

Leave a Reply

Your email address will not be published. Required fields are marked *