ಮಂಗಳೂರು ಫಿಲ್ಮ್ ಫೆಸ್ಟಿವಲ್: ಮಲ್ಟಿಫ್ಲೆಕ್ಸ್​​ನಲ್ಲಿ ಉಚಿತವಾಗಿ ನೋಡಿ 10 ಸಿನಿಮಾ

MANGALURU FILM FESTIVAL
Spread the love

ನ್ಯೂಸ್ ಆ್ಯರೋ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್​ ಬಳಿಕ ಇದೇ ಮೊದಲ ಬಾರಿಗೆ ‘ಕರಾವಳಿ ಉತ್ಸವ’ ನಡೆಯುತ್ತಿದೆ. ಉತ್ಸವವನ್ನು ಸ್ಮರಣೀಯವಾಗಿಸಲು ವಿವಿಧ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಲಾಗುತ್ತಿದೆ. ಇವುಗಳಲ್ಲಿ ಫಿಲ್ಮ್ ಫೆಸ್ಟಿವಲ್ ಕೂಡಾ ಒಂದು.

ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಜನವರಿ 2 ಮತ್ತು 3ರಂದು ಮಂಗಳೂರಿನಲ್ಲಿ ಫಿಲ್ಮ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಇದರಲ್ಲಿ ಹಲವು ಸಿನಿಮಾಗಳನ್ನು ನೋಡುವ ಅವಕಾಶವಿದೆ.

ಜನವರಿ 2ರಂದು 10 ಗಂಟೆಗೆ ಅರಿಷಡ್ವರ್ಗ ಕನ್ನಡ ಸಿನಿಮಾ, 12.30ಕ್ಕೆ 19,20,21 ಕನ್ನಡ ಸಿನಿಮಾ, 3.30ಕ್ಕೆ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ, 6.30ಕ್ಕೆ ಮಧ್ಯಂತರ ಕನ್ನಡ ಶಾರ್ಟ್ ಫಿಲ್ಮ್, 8 ಗಂಟೆಗೆ ಕಾಂತಾರ ಕನ್ನಡ ಸಿನಿಮಾ ಪ್ರದರ್ಶನವಾಗಲಿದೆ.

ಜನವರಿ 3ರಂದು 10.15ಕ್ಕೆ ಸಾರಾಂಶ ಕನ್ನಡ ಸಿನಿಮಾ, 12.45ಕ್ಕೆ ತರ್ಪಣ ಕೊಂಕಣಿ ಸಿನಿಮಾ, 3.15ಕ್ಕೆ ಶುದ್ದಿ ಕನ್ನಡ ಸಿನಿಮಾ, 5.45ಕ್ಕೆ ಕುಬಿ ಮತ್ತು ಐಲಾ ಕನ್ನಡ ಸಿನಿಮಾ ರಾತ್ರಿ 8 ಗಂಟೆಗೆ ಗರುಡ ಗಮನ ವೃಷಭ ವಾಹನ ಕನ್ನಡ ಸಿನಿಮಾ ಪ್ರಸಾರವಾಗಲಿದೆ.

ಎರಡು ದಿನಗಳ ಕಾಲ ಒಟ್ಟು 10 ಸಿನಿಮಾ ಪ್ರಸಾರವಾಗಲಿದ್ದು, ಇದರಲ್ಲಿ 8 ಕನ್ನಡ ಸಿನಿಮಾ ಗಳು, 1 ತುಳು ಸಿನಿಮಾ ಮತ್ತು 1 ಕೊಂಕಣಿ ಸಿನಿಮಾ ಆಗಿದೆ.

23228691 Sdfgsehf

ಜನವರಿ 2 ಮತ್ತು 3ರಂದು ಭಾರತ್ ಸಿನಿಮಾ ಮಲ್ಟಿಫ್ಲೆಕ್ಸ್​​ನಲ್ಲಿ ಪ್ರಸಾರವಾಗುವ ಸಿನಿಮಾಗಳು ವೀಕ್ಷಕರಿಗೆ ಸಂಪೂರ್ಣ ಉಚಿತವಾಗಿದೆ. ಈ ಸಿನಿಮಾಗಳಿಗೆ ಆನ್​​ಲೈನ್ ಬುಕಿಂಗ್ ಇರುವುದಿಲ್ಲ. ವೀಕ್ಷಕರು ಭಾರತ್ ಸಿನಿಮಾ ಮಲ್ಟಿಫ್ಲೆಕ್ಸ್​ನಲ್ಲಿ ಸಿನಿಮಾದ ಟಿಕೆಟ್ ಅನ್ನು ಖುದ್ದಾಗಿ ತೆರಳಿ ಪಡೆಯಬಹುದು. ಚಿತ್ರಮಂದಿರದ ಸಾಮರ್ಥ್ಯದ ಟಿಕೆಟ್​ಗಳನ್ನು ಮೊದಲು ಬಂದವರಿಗೆ ಆದ್ಯತೆಯ ಮೇಲೆ ನೀಡಲಾಗುತ್ತದೆ. ಒಬ್ಬರಿಗೆ ಎರಡು ಟಿಕೆಟ್ ಪಡೆಯುವ ಅವಕಾಶ ನೀಡಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!