Mangalore : ರಾಹುಲ್ ಗಾಂಧಿ ಹುಚ್ಚ, ಅವನ ಕಪಾಳಕ್ಕೆ ಹೊಡೆಯಬೇಕು : ಶಾಸಕ ಭರತ್ ಶೆಟ್ಟಿ – ಆಕ್ರೋಶದ ಭಾಷಣಗೈದ ಭರತ್ ಶೆಟ್ಟಿ ವಿರುದ್ಧ FIR ದಾಖಲು
ನ್ಯೂಸ್ ಆ್ಯರೋ : ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹಿಂದೂಬಳ ಹಿಂದೂಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಅವನೊಬ್ಬ ಹುಚ್ಚ, ಪಾರ್ಲಿಮೆಂಟ್‌ಗೆ ಹೋಗಿ ಕಪಾಳಕ್ಕೆ ಬಾರಿಸಬೇಕು ಅನಿಸ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಡಾ.ವೈ ಭರತ್ ಶೆಟ್ಟಿ ಅವರ ವಿರುದ್ಧ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ಅನಿಲ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಭರತ್ ಶೆಟ್ಟಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 353 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಸೋಮವಾರ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ್ದ ಶಾಸಕ ಭರತ್ ಶೆಟ್ಟಿ, ಅವನು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾನೆ. ನಾವು ಅವನಿಗೆ ಯಾವ ಶಬ್ದ ಪ್ರಯೋಗಿಸಬಹುದು ಅಂತಾ ನೋಡಿ. ಅವನ ಹೇಳಿಕೆಗಳನ್ನ ಗಮಿಸಿದರೆ ಅವನೊಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಹಿಂದೂಗಳನ್ನು ಹಿಂಸಾವಾದಿಗಳೆನ್ನುತ್ತಾನೆ. ಶಿವನ ಫೋಟೊ ಬೇರೆ ಹಿಡಿದು ನಿಂತಿದ್ದ. ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಅಂತಾ ಈ ಹುಚ್ಚನಿಗೆ ಗೊತ್ತಿಲ್ಲ. ಹಿಂದೂಗಳ ಬಗ್ಗೆ ಏನೂ ಮಾತಾಡಿದರೂ ಸುಮ್ಮನಿರ್ತಾರೆ ಅನ್ನೋ ಭಾವನೆ ರಾಹುಲ್ ಗಾಂಧಿಗೆ ಬಂದಿರಬಹುದು. ಅವನು ಪಾರ್ಲಿಮೆಂಟ್‌ನಲ್ಲಿ ಬೊಗಳುವ ಸಂದರ್ಭ ಇಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರು ಬಾಲ ಬಿಚ್ಚಲು ಶುರು ಮಾಡಿದ್ದಾರೆ ಎಂದು ಭರತ್ ಶೆಟ್ಟಿ ತೀವ್ರ ಆಕ್ರೋಶ ಹೊರಹಾಕಿದ್ದರು.
Leave a Comment