ಅಲ್ಲು ಅರ್ಜುನ್ ವಿರುದ್ಧ ಎಫ್ಐಆರ್; ಅರೆಸ್ಟ್ ಮಾಡುವಂತೆ ಆಗ್ರಹ !
ನ್ಯೂಸ್ ಆ್ಯರೋ: ಪುಷ್ಪ-2.. ಇದುವರೆಗೆ ಯಾವ ಚಿತ್ರವೂ ಇಂತಹ ದಾಖಲೆ ನಿರ್ಮಿಸಿಲ್ಲ. ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ 12,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ತೆಲಂಗಾಣದ ಹೈದರಾಬಾದ್ನಲ್ಲಿರೋ ಸಂಧ್ಯಾ ಚಿತ್ರಮಂದಿರದಲ್ಲಿ ಪ್ರೀಮಿಯರ್ ಶೋಗೆ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಅಲ್ಲಿ ನಡೆದಿದ್ದು ದುರಂತವೇ ಸರಿ.
ಫ್ಯಾನ್ಸ್ ಜೊತೆ ಸಿನಿಮಾ ವೀಕ್ಷಣೆಗೆ ನಟ ಅಲ್ಲು ಅರ್ಜುನ್, ಪತ್ನಿ-ಮಕ್ಕಳೊಂದಿಗೆ ಬಂದಿದ್ದಾರೆ ತಮ್ಮ ನೆಚ್ಚಿನ ನಟನನ್ನು ನೋಡಲು ಫ್ಯಾನ್ಸ್ ಕಿಕ್ಕಿರಿದು ತುಂಬಿತ್ತು. ಈ ವೇಳೆ ಥಿಯೇಟರ್ನ ಆವರಣದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಜೀವಕಳೆದುಕೊಂಡಿದ್ದಾಳೆ. ಈ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರೀಮಿಯರ್ ಶೋ ವೀಕ್ಷಣೆಗೆ ಅಂತಾ ದಿಲ್‌ಸುಖ್‌ನಗರದ ನಿವಾಸಿ ರೇವತಿ, ಪತಿ ಭಾಸ್ಕರ್, ಮತ್ತು ಇಬ್ಬರು ಮಕ್ಕಳಾದ ತೇಜ್, ಸಾನ್ವಿಕಾ ಸಂಧ್ಯಾ ಥಿಯೇಟರ್‌ಗೆ ಬಂದಿದ್ದರು. ನೂಕು ನುಗ್ಗಲು ಕಾರಣ ರೇವತಿ ಮತ್ತು ಅವರ ಮಕ್ಕಳು ಪ್ರಜ್ಞಾಹೀನರಾಗಿದ್ದು, ಅವರನ್ನ ದುರ್ಗಾಭಾಯ್ ದೇಶಮುಖ ಆಸ್ಪತ್ರೆಗೆ ಸ್ಥಳಾಂತರಿಸಲಾಯ್ತು. ಚಿಕಿತ್ಸೆ ಫಲಕಾರಿಯಾಗದೆ ರೇವತಿ ಜೀವ ಕಳೆದುಕೊಂಡಿದ್ದಾಳೆ. ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರೆದಿದ್ರೂ ಅದರಲ್ಲಿ ಓರ್ವ ಮಗು ಸಾವನ್ನಪ್ಪಿದೆ. ಘಟನೆಯ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಲ್ಲು ಅರ್ಜುನ್ ಆಗಮನದ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಅಲ್ಲು ಅರ್ಜುನ್ ತಮ್ಮ ಖಾಸಗಿ ಭದ್ರತೆಯೊಂದಿಗೆ ಥಿಯೇಟರ್ ಆವರಣವನ್ನ ಪ್ರವೇಶಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ. ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ತಳ್ಳಾಟದಿಂದ ನೂಕು ನುಗ್ಗಲು ಇನ್ನಷ್ಟು ಉಲ್ಬಣವಾಗಿದೆ. ಘಟನೆಗೆ ಕಾರಣರಾದವರು ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಾಗುತ್ತೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಅಲ್ಲು ಅರ್ಜುನ್ ವಿರುದ್ಧ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ಅವರನ್ನ ಬಂಧಿಸಬೇಕೆಂದು ಹಲವು ಸಂಘಟನೆಗಳು ಒತ್ತಾಯಿಸ್ತಿವೆ. ಅಲ್ಲು ಅರ್ಜುನ್ 10 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂಬ ಬೇಡಿಕೆಯೂ ಇದೆ.
Leave a Comment