ಬಿಗ್ಬಾಸ್ ಖ್ಯಾತಿಯ ಹಂಸ ಮೇಲೆ ದೂರು ದಾಖಲು; ನಟನೆಗೆ ಕುತ್ತು ತಂದು ಕೊಳ್ತಾರ ರಾಜಿ ?
ನ್ಯೂಸ್ ಆ್ಯರೋ: ಪುಟ್ಟಕ್ಕನ ಮಕ್ಕಳು ಕಿರುತೆರೆಯ ನಂಬರ್ ಒನ್ ಧಾರಾವಾಹಿ. ದೊಡ್ಡ ತಾರಾಬಳಗ ಹೊಂದಿದ್ದ ಅಪರೂಪದ ಕತೆ. ಈ ಧಾರಾವಾಹಿಯ ವಿಶೇಷ ಅಂದ್ರೇ ನಾಯಕ ನಾಯಕಿಯನ್ನ ಮಾತ್ರ ಹೈಲೈಟ್ ಮಾಡದೇ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಹಾಗೇ ಕತೆನೇ ಹೀರೋ ಅಂದ್ರು ತಪ್ಪಾಗೋದಿಲ್ಲ. ಇಂತಹ ಅದ್ಭುತ ಧಾರಾವಾಹಿ ಕಲಾವಿದರ ಕಾರಣಕ್ಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪುಟ್ಟಕ್ಕನ ಮಕ್ಕಳು ನಿರ್ಮಾಪಕ, ನಿರ್ದೇಶಕರಾದ ಆರೂರು ಜಗದೀಶ್ ಅವರು ರಾಜಿ ಪಾತ್ರ ಮಾಡುತ್ತಿದ್ದ ಹಂಸ ಅವರ ಬಗ್ಗೆ ಕೊಂಚ ಬೇಸರದಲ್ಲಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿರೋ ಸಂದರ್ಶನದಲ್ಲಿ ರಾಜೇಶ್ವರಿ ಪಾತ್ರದಲ್ಲಿ ಅಭಿನಯಿಸ್ತಿದ್ದ ಹಂಸ ಅವರು ನಡೆದುಕೊಂಡ ರೀತಿ ಬಗ್ಗೆ ಮಾತ್ನಾಡಿದ್ದಾರೆ. ಹಂಸ ಅವರು ರಾಜಿ ಪಾತ್ರ ಮಾಡುತ್ತಿದ್ದಾಗಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಹಂಸ ಇಲ್ಲಿಗೆ ಬಂದಿದ್ದಾರೆ. ರಾಜಿ ಪಾತ್ರ ಯಾರು ಮಾಡ್ತಾರೆ? ರಾಜಿ ಪಾತ್ರ ಮುಕ್ತಾಯವಾಯ್ತಾ? ಅಥವಾ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಪಾತ್ರ ಮುಂದುವರೆಸ್ಬಹುದು ಅಂತಲ್ಲಾ ವೀಕ್ಷಕರಲ್ಲೆ ಲೆಕ್ಕಾಚಾರ ಶುರುವಾಗಿದ್ವು.
ಹಂಸ ಅವರು ಮಾಹಿತಿ ನೀಡದೇ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ನಮಗೆ ಹೇಳಲೇ ಇಲ್ಲ ಅವ್ರು. ನನಗೆ ಫೋನ್ ಮಾಡಿ ಹೇಳಿದ್ದು, ಸರ್ ನನೊಂದು ಸಿನಿಮಾ ಶೂಟಿಂಗ್ಗೆ 40 ರಿಂದ 45 ದಿನ ಫಾರಿನ್ಗೆ ಹೊಗ್ತಾ ಇದ್ದೀನಿ ಅಂದ್ರು. ನಾನು, ಹೌದಾ ಮೇಡಮ್ ಅಂತ ಅಂದೆ. ಪೋಷಕ ನಟ ನಟಿಯರನ್ನ ಯಾರು 45 ಫಾರಿನ್ಗೆ, ಅದು ಈ ಟೈಮ್ನಲ್ಲಿ ಕರ್ಕೊಂಡು ಹೋಗ್ತಾರೆ ಅನ್ನೋದು ಮನಸ್ಸಲ್ಲಿತ್ತು. ಆದ್ರೂ, ಸರಿ ಮ್ಯಾಡಮ್ ನಾನು ತಂಡಕ್ಕೆ ಮಾಹಿತಿ ನೀಡ್ತಿನಿ ಕತೆಯಲ್ಲಿ ಏನಾದ್ರೂ ಬದಲಾವಣೆ ಮಾಡೋಣ ಅಂತ ಅಂದೆ. ಇದಾದ ಮೇಲೆ ಅವ್ರನ್ನ ನಾನು ನೋಡಿದ್ದೇ ಬಿಗ್ ಬಾಸ್ ಪ್ರೊಮೋದಲ್ಲಿ.
ನಂಗೆ ಶಾಕ್ ಆಯ್ತು. ಎಲ್ಲಾ ಕಡೆಯಿಂದ ಕಾಲ್ಸ್ ಬರೋದಕ್ಕೆ ಶುರುವಾಯ್ತು. ಸಿನಿಮಾ ಶೂಟಿಂಗ್ ಅಂತ ಹೋದ್ರೆ ಆಗೋಮ್ಮೆ ಈಗೊಮ್ಮೆ ಬರ್ತಾರೆ. ರಾಜಿ ಪಾತ್ರದ ಶೂಟಿಂಗ್ ಮಾಡಬಹುದು ಅನ್ನೋ ಯೋಚನೆಯಲ್ಲೇ ನಾವು ಇದ್ವಿ. ಬಿಗ್ ಬಾಸ್ಗೆ ಹೋಗ್ತಿದ್ದೀನಿ ಅಂತ ನಮಗೆ ಹೇಳೇ ಇಲ್ಲ. ಪ್ರೊಫೇಶನಲ್ ಎಥಿಕ್ಸ್ ಇಲ್ಲ. ಹೀಗಾಗಿ ನಾವು ನಮ್ಮ ಪ್ರೊಡ್ಯೂಸರ್ ಅಸೋಸಿಯೇಷನ್ಗೆ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ಗೆ ದೂರು ಕೊಟ್ಟಿದ್ದೀವಿ. ಅವರು ಏನು ಡಿಸಿಶನ್ ತಗೊಂಡ್ರು ಅಂತ ಗೊತ್ತಾಗಿಲ್ಲ. ಬಿಗ್ ಬಾಸ್ ಥರನೇ ಪುಟ್ಟಕ್ಕನ ಮಕ್ಕಳು ಒಂದ್ ಪ್ರಾಜೆಕ್ಟ್. ನೀವೂ ಸೀರಿಯಲ್ ಬೀಡೋದಾದ್ರೇ ಬಿಡಿ. ಆದ್ರೇ ಹೇಳ್ಬಿಟ್ಟು ಬೀಡಬೇಕಿತ್ತು. ಎಥಿಕ್ಸ್ ಇಟ್ಕೊಳ್ಳಿ ಅಂತ ಹಂಸ ಅವರ ಬಗೆ ಸಂದರ್ಶನದಲ್ಲಿ ಆರೋಪ ಮಾಡಿದ್ದಾರೆ.
ಸದ್ಯ ಹಂಸ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ರೀ ಎಂಟ್ರಿ ಕೊಡ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ ಅವ್ರು, ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣನೇ ನಾವು ಕಾಲ್ ಮಾಡಿ ಕೇಳಿದ್ವಿ. ಮತ್ತೇ ಪಾತ್ರಕ್ಕೆ ಬನ್ನಿ ಅಂತ. ಆದ್ರೇ ಅವರು ಬಿಗ್ ಬಾಸ್ ಕಮಿಟ್ಮೆಂಟ್ ಇದೆ ಅಂದ್ರು. ಅಗ್ರಿಮೆಂಟ್ ಸೈನ್ ಆಗಿದೆ. ನಾನು ಬರಲ್ಲ ಅಂದ್ರು. ರಾಜಿನ ಯಾಕೆ ಚೇಂಜ್ ಮಾಡಿದ್ರಿ, ರಾಜಿ ಯಾಕೆ ಸೀರಿಯಲ್ಗೆ ಬರ್ತಿಲ್ಲ ಅಂತ ಜನ ನನಗೆ ಬೈತಾರೆ. ಇಂತಹ ಪರಿಸ್ಥಿತಿಗಳು ಬರ್ತಾ ಇರ್ತಾವೆ. ಹಂಸ ಅವರು ಒಳ್ಳೆ ಕಲಾವಿದೆ. ನಮಗೂ ಅವ್ರಿಗೂ ಒಳ್ಳೆ ಬಾಂಧವ್ಯ ಇದೆ. ಆದ್ರೇ ಅವರು ಹೇಳ್ದೇ ಹೋಗಿದ್ದು ಬೇಜಾರಾಗಿದೆ. ಪಾತ್ರಕ್ಕೆ ಒಂದು ಎಂಡ್ ಕೊಟ್ಟೇ ಹೋಗ್ಬಹುದಿತ್ತು ಅಂತ ಹಂಸ ಅವರ ಬಗ್ಗೆ ಬೇಸರ ಹೊರ ಹಾಕಿದ್ದಾರೆ ನಿರ್ದೇಶಕ ಆರೂರು ಜಗದೀಶ್.
Leave a Comment