ಈ ಊರಲ್ಲಿ ಪ್ರತಿ ಮಂಗಳವಾರ 1 ಸಾವು ಖಚಿತ; ಬೆಚ್ಚಿ ಬಿದ್ದ ಊರಿನ ಜನ ಕೊನೆಗೂ ಮಾಡಿದ್ದೇನು?

fear death
Spread the love

ನ್ಯೂಸ್ ಆ್ಯರೋ: ಪ್ರತಿ ಮಂಗಳವಾರ ಈ ಊರಲ್ಲಿ ತಪ್ಪದೇ ಒಂದು ಹೆಣ ಬೀಳ್ತಿತ್ತು ಅಂದ್ರೆ ನೀವೂ ನಂಬಲೇ ಬೇಕು. ವಿಚಿತ್ರ ಅದ್ರೂ ಇದೇ ಸತ್ಯ. ಹೌದು. . .ಸೋಮವಾರ ರಾತ್ರಿಯೇ ಬೆಚ್ಚಿ ಬೀಳುತ್ತಿತ್ತು ಇಡೀ ಊರು.

ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಜಮ್ಮಿಗಡ್ಡ ಜನ ಬೆಚ್ಚಿ ಬಿದ್ದಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ವಿಲಕ್ಷಣವಾಗಿ ಜನ ಸಾಯುತ್ತಿದ್ದಾರೆ. ಪ್ರತಿ ಮಂಗಳವಾರ ಬಂದರೆ ಸಾಕು ಊರಿನ ಜನ ಏನಾಗುತ್ತೋ? ಯಾರ ಮನೆಯಲ್ಲಿ ಸಾವಾಗುತ್ತೋ? ಅನ್ನೋ ವಿಲಕ್ಷಣ ಭಯದಲ್ಲೇ ಬದುಕುತ್ತಿದ್ದಾರೆ. ಯಾಕಂದ್ರೆ ಎರಡು ತಿಂಗಳಿನಲ್ಲಿ 10 ಮಂದಿ ಪ್ರತೀ ಮಂಗಳವಾರ ಒಂದಿಲ್ಲೊಂದು ಕಾರಣಕ್ಕೆ ಮೃತರಾಗುತ್ತಲೇ ಇದ್ದಾರೆ.

ಮೂಢನಂಬಿಕೆ ಅಂತಾದ್ರೂ ಅಂದುಕೊಳ್ಳಿ, ಭಯ ಅಂತಾದ್ರೂ ಅಂದುಕೊಳ್ಳಿ. ಮಂಗಳವಾರದ ಸಾವಿನ ಭಯಕ್ಕೆ ಇಡೀ ಊರು ಭಾನುವಾರ ಪರಿಹಾರ ಹುಡುಕುತ್ತಿದೆ. ಕಳೆದ ಎರಡು ತಿಂಗಳಿನಿಂದ ಎದುರಾಗ್ತಿರೋ ಭಯಾನಕ ಸಾವಿನ ಸರಣಿ ನಿಲ್ಲಿಸೋದಕ್ಕೆ ಸ್ವಾಮೀಜಿಯೊಬ್ಬರು ಕೊಟ್ಟ ಸಲಹೆ ಸ್ವೀಕರಿಸಿದೆ ಇಡೀ ಗ್ರಾಮ.

ಶನಿವಾರ ಮಧ್ಯರಾತ್ರಿಯೇ ಊರು ಬಿಡುವ ಗ್ರಾಮಸ್ಥರು ಊರಾಚೆಯ ಹೊಲಗಳಲ್ಲಿ ವನ ಭೋಜನ ಮಾಡುತ್ತಿದ್ದಾರೆ. ಹೀಗೆ ಮಾಡಿದ್ರೆ ಊರಿನಲ್ಲಿ ಮಂಗಳವಾರದ ಸಾವಿನ ಕೇಡು ಮರುಕಳಿಸೋದಿಲ್ಲ ಅನ್ನೋ ನಂಬಿಕೆ ಮನೆ ಮಾಡಿದೆ.

Leave a Comment

Leave a Reply

Your email address will not be published. Required fields are marked *

error: Content is protected !!