Divorce Case : ತಿಂಗಳಿಗೆ ಆರು ಲಕ್ಷ ಜೀವನಾಂಶ ಕೇಳಿದ ಪತ್ನಿ – ಮೊದಲು ಅಷ್ಟು ದುಡಿದು ತೋರಿಸಿ ; ನ್ಯಾಯಾಧೀಶೆ ಗರಂ ಆದ ವಿಡಿಯೋ ವೀಕ್ಷಿಸಿ
ನ್ಯೂಸ್ ಆ್ಯರೋ : ವಿಚ್ಚೇದನ ಪ್ರಕರಣವೊಂದರ ವಿಚಾರಣೆ ವೇಳೆ ಪತಿಯಿಂದ ಜೀವನಾಂಶ ಕೇಳಿ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯ ಬೇಡಿಕೆ ಕೇಳಿ ನ್ಯಾಯಾಧೀಶರೇ ಒಂದು ಕ್ಷಣ ದಂಗಾಗಿದ್ದಾರೆ.
ರಾಜ್ಯದ ಹೈಕೋರ್ಟ್‌ನ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಪೀಠದಲ್ಲಿ ನಡೆದ ವಾದ-ಪ್ರತಿವಾದ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಪತಿಯಿಂದ ಜೀವನಾಂಶ ಕೇಳಿದ್ದ ಪತ್ನಿ ಬೇಡಿಕೆ ಕಂಡು ಇಡೀ ಕೋರ್ಟ್ ಕೂಡ ಒಂದು ಕ್ಷಣ ಮೌನವಾಗಿತ್ತು.
ಶೂ, , ಬಟ್ಟೆ, ಬಳೆ ಇತ್ಯಾದಿಗಳಿಗೆ ತಿಂಗಳಿಗೆ 15,000 ರೂಪಾಯಿ ಮತ್ತು ಮನೆಯಲ್ಲಿ ಆಹಾರಕ್ಕಾಗಿ ತಿಂಗಳಿಗೆ 60,000 ರೂಪಾಯಿ ಅಗತ್ಯವಿದೆ ಎಂದು ಮಹಿಳೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಮೊಣಕಾಲು ನೋವು ಮತ್ತು ಫಿಸಿಯೋಥೆರಪಿ ಮತ್ತು ಇತರ ಔಷಧಿಗಳ ವೈದ್ಯಕೀಯ ವೆಚ್ಚಗಳಿಗಾಗಿ 4-5 ಲಕ್ಷ ರೂ.ಗಳು ಸೇರಿದಂತೆ 6,16,300/- ರೂಪಾಯಿಗಳ ಅಗತ್ಯವಿದೆ ಎಂದು ಮಹಿಳೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಪೀಠವು ವಿಚಾರಣೆಯ ಸಮಯದಲ್ಲಿ, ಇದು ನ್ಯಾಯಾಲಯದ ಪ್ರಕ್ರಿಯೆಯ ಶೋಷಣೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಇಷ್ಟು ಹಣವನ್ನ ಖರ್ಚು ಮಾಡಲು ಬಯಸಿದರೆ ಆಕೆ ಸಂಪಾದಿಸಬಹುದು ಎಂದು ನ್ಯಾಯಾಧೀಶರು ಹೇಳಿದರು.
ಒಬ್ಬ ವ್ಯಕ್ತಿಗೆ ಬೇಕಾಗಿರುವುದು ಇಷ್ಟೇ ಎಂದು ನ್ಯಾಯಾಲಯಕ್ಕೆ ದಯವಿಟ್ಟು ಹೇಳಬೇಡಿ. ತಿಂಗಳಿಗೆ 6,16,300 ರೂ. ಯಾರಾದರೂ ಇಷ್ಟು ಖರ್ಚು ಮಾಡುತ್ತಾರೆಯೇ? ಒಬ್ಬಂಟಿ ಮಹಿಳೆ ಇಷ್ಟೊಂದು ಖರ್ಚು ಮಾಡಲು ಬಯಸಿದರೆ ಮೊದಲು ಆಕೆ ಸಂಪಾದಿಸಲಿ. ನಿಮಗೆ ಕುಟುಂಬದ ಬೇರೆ ಯಾವುದೇ ಜವಾಬ್ದಾರಿ ಇಲ್ಲ. ನೀವು ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲ. ನೀವು ಈ ಹಣವನ್ನು ಕೇವಲ ನಿಮಗಾಗಿ ಬಯಸುತ್ತೀರಿ. ನೀವು ಕೇಳುತ್ತಿರುವ ಮೊತ್ತವು ಸಮಂಜಸವಾಗಿರಬೇಕು ಎಂದು ಕೋರ್ಟ್ ತಿಳಿಸಿದೆ.
ಅಲ್ಲದೆ ಸರಿಯಾದ ಮೊತ್ತದ ಮನವಿ ಮಾಡುವಂತೆ ಮಹಿಳೆ ಪರ ವಕೀಲರಿಗೆ ತಿಳಿಸಿದ ಕೋರ್ಟ್ ಸರಿಯಾದ ಜೀವನಾಂಶ ಕೇಳದಿದ್ದರೆ ಅವರ ಅರ್ಜಿ ವಜಾ ಮಾಡುವುದಾಗಿ ಎಚ್ಚರಿಕೆ ನೀಡಿದರು.
Leave a Comment