ಸಂಶೋಧನೆ ಮಾಡಲು ಹೋಗಿ ಮಗುವಿನ ಬ್ರೈನ್ ಡ್ಯಾಮೇಜ್; ದಯಾಮರಣ ಕೋರಿದ ತಂದೆ
ನ್ಯೂಸ್ ಆ್ಯರೋ: ಗರ್ಭಿಣಿಗೆ ಚಿಕಿತ್ಸೆ ನೀಡುವಾಗ ಮಗುವಿನ ಶ್ವಾಸಕೋಶ ಸಂಬಂಧಿ ಸಂಶೋಧನೆ ಮಾಡಿದ ಹಿನ್ನಲೆ ಮಗುವಿಗೆ ಬ್ರೈನ್ ಡ್ಯಾಮೇಜ್ ಆರೋಪ ಕೇಳಿಬಂದಿದೆ. ದಾವಣಗೆರೆಯ ಚಾಮರಾಜಪೇಟೆ ಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಿರುದ್ಧ ಆರೋಪ ಮಾಡಲಾಗಿದ್ದು, ಮಗುವಿಗೆ ಸಮಸ್ಯೆಯಾದ ಹಿನ್ನಲೆ ಓರ್ವ ವ್ಯಕ್ತಿ ಸರ್ಕಾರಕ್ಕೆ ದಯಾಮರಣ ಕೋರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಚಿತ್ರದುರ್ಗ ಮೂಲದ ಗೋಪಾಲ ಮತ್ತು ಮಗು ಇಬ್ಬರಿಗೂ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ. ವಿಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಡಿಮ್ಯಾಂಡ್ ಆನ್ ಡೆತ್ ಅರ್ಜಿಯನ್ನು ಗೋಪಾಲ ಅವರು ಸಲ್ಲಿಸಿದ್ದಾರೆ.
ಇನ್ನು ಹರಿಬಿಟ್ಟ ವಿಡಿಯೋದಲ್ಲಿ ಮಗಳಿಗೆ ಆದ ಆರೋಗ್ಯ ಸಮಸ್ಯೆ ಕುರಿತು ತಂದೆ ಗೋಪಾಲ ಅಳಲು ತೊಡಿಕೊಂಡಿದ್ದಾರೆ. ಮಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಅಕ್ರಮ ಸಂಶೋಧನೆಗೆ ಬಳಕೆ ಆರೋಪ ಮಾಡಿದ್ದಾರೆ.
ಏಳು ತಿಂಗಳ ಗರ್ಭಿಣಿ ಯಾಗಿದ್ದಾಗಲೇ ಸಂಶೋಧನೆಗೆ ಒಳಪಡಿಸಿ ಬಲವಂತವಾಗಿ ನನ್ನ ಪತ್ನಿಯಿಂದ ಸಹಿ ಮಾಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಗಳು ಜೀವಂತ ಹೆಣವಾಗಿದ್ದಾಳೆ. ವೈದ್ಯರ ವಿರುದ್ಧ ದೂರು ನೀಡಿದರೂ ಕ್ರಮ ಆಗಿಲ್ಲ ಎಂದಿದ್ದಾರೆ.
ನಮ್ಮ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ. ನಾವು ಸಮಾಜದಲ್ಲಿ ಬದುಕುವ ಯೋಗ್ಯತೆ ಕಳೆದುಕೊಂಡಿದ್ದೇವೆ. ನಮಗೆ ನೆಮ್ಮದಿ ಮರಣ ದಯಪಾಲಿಸಿ ಅಂತಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅದೇ ರೀತಿಯಾಗಿ ಗರ್ಭಿಣಿ ಮಹಿಳೆಯರ ಮೇಲೆ ನಡೆಯುತ್ತಿರುವ ಸಂಶೋಧನೆ ನಿಲ್ಲಿಸಿ. ತಾಯಿ ಮತ್ತು ಮಕ್ಕಳನ್ನು ಕಾಪಾಡಿ ಎಂದು ಸರ್ಕಾರಕ್ಕೆ ಗೋಪಾಲ ಒತ್ತಾಯಿಸಿದ್ದಾರೆ.
Leave a Comment