ರೊಮ್ಯಾನ್ಸ್ ವಿಚಾರದಲ್ಲಿ ಜಿದ್ದಿಗೆ ಬಿದ್ದ ಮಾಜಿ ಪತಿ, ಪತ್ನಿ – ಹೃತಿಕ್ ತನ್ನ ಲವರ್ ಜೊತೆ ಡ್ಯುಯೆಟ್ ಬೆನ್ನಲ್ಲೇ ರೀಲ್ಸ್ ಶೇರ್ ಮಾಡಿದ ಸೂಸೆನ್ ಖಾನ್..!

ರೊಮ್ಯಾನ್ಸ್ ವಿಚಾರದಲ್ಲಿ ಜಿದ್ದಿಗೆ ಬಿದ್ದ ಮಾಜಿ ಪತಿ, ಪತ್ನಿ – ಹೃತಿಕ್ ತನ್ನ ಲವರ್ ಜೊತೆ ಡ್ಯುಯೆಟ್ ಬೆನ್ನಲ್ಲೇ ರೀಲ್ಸ್ ಶೇರ್ ಮಾಡಿದ ಸೂಸೆನ್ ಖಾನ್..!

ನ್ಯೂಸ್ ಆ್ಯರೋ‌ : ಒಂದು ಕಾಲದ ಬಾಲಿವುಡ್ ನ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ನಟ ಹೃತಿಕ್ ರೋಷನ್ ಮತ್ತು ಸೂಸೆನ್ ಖಾನ್ ತಮ್ಮ 14 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿ 2014ರಲ್ಲಿ ವಿಚ್ಛೇದನ ಪಡೆದುಕೊಂಡರು. ಬಳಿಕ ಹೃತಿಕ್ ರೋಷನ್ ಗಾಯಕಿ ಸಬಾ ಅಜಾದ್ ಜೊತೆ ಹೆಚ್ಚಾಗಿ ಕಾಣಿಸಿಕೊಂಡರು.

ಮದುವೆಯ ವದಂತಿ

ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಆಗಾಗ ಜೊತೆಯಾಗಿ ಕಾಣಿಸಿಕೊಂಡು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಸಿಪ್ ಹರಡಿತ್ತು. ಕಳೆದ ವರ್ಷ ನವೆಂಬರ್ ನಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇಬ್ಬರೂ ಈ ಬಗ್ಗೆ ಮಾತನಾಡಿರಲಿಲ್ಲ.

ಇತ್ತೀಚೆಗೆ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿರುವ ಹೃತಿಕ್ ರೋಷನ್ ಅರ್ಜೆಂಟೀನಾದಲ್ಲಿ ಸಬಾ ಅಜಾದ್ ಜೊತೆಗೆ ರಜೆಯನ್ನು ಕಳೆಯುತ್ತಿದ್ದಾರೆ. ಇಬ್ಬರೂ ಜೊತೆಯಾಗಿರುವ ಫೋಟೋವನ್ನು ಹೃತಿಕ್ ರೋಷನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಚಳಿಗಾಲದ ಹುಡುಗಿ ಎನ್ನುವ ಶೀರ್ಷಿಕೆ ನೀಡಿದ್ದಾರೆ. ಆ ಫೋಟೋ ವೈರಲ್ ಆಗಿದೆ.

ಇತ್ತ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸೂಸೆನ್ ಖಾನ್ ತಾವೇನೂ ಕಮ್ಮಿ ಇಲ್ಲ ಎಂಬಂತೆ ತನ್ನ ಗೆಳೆಯ ಅಸ್ರ್ಲಾನ್ ಗೋನಿ ಜೊತೆಗಿನ ವೀಡಿಯೋ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವೀಡಿಯೋ ರೊಮ್ಯಾಂಟಿಕ್ ರೀಲ್ಸ್ ಆಗಿದ್ದು, ಹೃತಿಕ್ ಗೆ ಪೈಪೋಟಿ ನೀಡಲೆಂದೇ ಈಗ ಹರಿಯಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಸೂಸೆನ್ ಮತ್ತು ಅಸ್ರ್ಲಾನ್ ಅವರ ರಜೆಯ ಕ್ಷಣಗಳು, ನೈಟ್ ಕ್ಲಬ್ ಪಾರ್ಟಿಯಲ್ಲಿ ಜೊತೆಯಾಗಿ ಸಮಯ ಕಳೆದುದನ್ನು ಈ ವೀಡಿಯೋ ಒಳಗೊಂಡಿದೆ. 2023ರ ಅತ್ಯುತ್ತಮ ಬೇಸಗೆಗಾಗಿ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚೆಗೆ ತೆರೆಕಂಡ ಹೃತಿಕ್ ರೋಷನ್ ಅಭಿನಯದ ‘ವಿಕ್ರಮ್ ವೇದ’ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಕಮಾಲ್ ಮಾಡಲಿಲ್ಲ. ತಮಿಳಿನಲ್ಲಿ ಪ್ರೇಕ್ಷಕರು ಮೆಚ್ಚಿದ್ದ ಚಿತ್ರವನ್ನು ಹಿಂದಿ ವೀಕ್ಷಕರು ಕೈ ಹಿಡಿಯಲಿಲ್ಲ. ಮುಂದೆ ‘ಫೈಟರ್’ ಚಿತ್ರದಲ್ಲಿ ಹೃತಿಕ್ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಜೊತೆ ತೆರೆ ಹಂಚಿಕೊಳ್ಳುತ್ತಿದ್ದು ನಿರೀಕ್ಷೆ ಮೂಡಿಸಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಮುಂದಿನ ವರ್ಷಾರಂಭದಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *