ನಟಿ ರಚಿತಾ ಮಹಾಲಕ್ಷ್ಮಿ ದಾಂಪತ್ಯ ಜೀವನದಲ್ಲಿ ಬಿರುಕು, ಡೈವೋರ್ಸ್ ಪಕ್ಕಾ..!! – ಬಿಗ್ ಬಾಸ್ ಮನೆಯಲ್ಲೇ ಹೊರಬಿತ್ತು ಕಹಿಸತ್ಯ..

ನಟಿ ರಚಿತಾ ಮಹಾಲಕ್ಷ್ಮಿ ದಾಂಪತ್ಯ ಜೀವನದಲ್ಲಿ ಬಿರುಕು, ಡೈವೋರ್ಸ್ ಪಕ್ಕಾ..!! – ಬಿಗ್ ಬಾಸ್ ಮನೆಯಲ್ಲೇ ಹೊರಬಿತ್ತು ಕಹಿಸತ್ಯ..

ನ್ಯೂಸ್ ಆ್ಯರೋ : ತಮಿಳಿನ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿರುವ ಕನ್ನಡತಿ ರಚಿತಾ ಮಹಾಲಕ್ಷ್ಮೀ ಇದೀಗ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಇವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ, ಪತಿ ದಿನೇಶ್ ಗೋಪಾಲಸ್ವಾಮಿಗೆ ಡಿವೋರ್ಸ್‌ಕೊಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.

ಕನ್ನಡ ಕಿರುತೆರೆಯಲ್ಲಿ ಮನೆಮಾತಾದ ನಟಿ ರಚಿತಾ ಮಹಾಲಕ್ಷ್ಮಿ ತಮಿಳಿನ ಜನಪ್ರಿಯ ಧಾರಾವಾಹಿಯಾದ `ಪಿರಿವೊಮ್ ಸಂದಿಪ್ಪೊಮ್’ನಲ್ಲಿ ರಚಿತಾ- ದಿನೇಶ್ ಜೋಡಿಯಾಗಿ ನಟಿಸಿದ್ದರು.

ಈ ವೇಳೆ ಇಬ್ಬರಿಗೂ ಪ್ರೀತಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ 2013ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಬಳಿಕ ‘ನಾಚಿಯಾರ್ ಪುರಮ್’ ಸೀರಿಯಲ್‌ನಲ್ಲೂ ಜೋಡಿಯಾಗಿ ನಟಿಸಿದ್ದರು.

ಇದೀಗ ಕಮಲ್ ಹಾಸನ್ ನೇತೃತ್ವದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್‌ನಲ್ಲಿ ಕನ್ನಡತಿ ರಚಿತಾ 60 ದಿನಗಳನ್ನ ಪೂರೈಸಿದ್ದಾರೆ. ಇನ್ನೂ 40 ದಿನಗಳ ಆಟ ಬಾಕಿಯಿದೆ.

ಇಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಡಿವೋರ್ಸ್ ವಿಷಯವಾಗಿ ರಚಿತಾ ಸುದ್ದಿಯಾಗುತ್ತಿದ್ದಾರೆ. ಇದಕ್ಕೆಲ್ಲ ನಟಿ ಬಿಗ್‌ಬಾಸ್‌ನಿಂದ ಬಂದ ಮೇಲೆ ಉತ್ತರಿಸಬೇಕಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *