ಬಾಲಿವುಡ್ ನಟಿ ರೇಖಾ ಲೇಡಿ ಸೆಕ್ರೆಟರಿ ಜೊತೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ರಾ? – ರೇಖಾ ಅವರ ಪತಿ ಆತ್ಮಹತ್ಯೆ ಹಿಂದೆಯೂ ಆ ಲೇಡಿ ಕೈವಾಡ..!? ಯಾರದು?

ಬಾಲಿವುಡ್ ನಟಿ ರೇಖಾ ಲೇಡಿ ಸೆಕ್ರೆಟರಿ ಜೊತೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ರಾ? – ರೇಖಾ ಅವರ ಪತಿ ಆತ್ಮಹತ್ಯೆ ಹಿಂದೆಯೂ ಆ ಲೇಡಿ ಕೈವಾಡ..!? ಯಾರದು?

ನ್ಯೂಸ್ ಆ್ಯರೋ‌ : ಚಿರ ಯೌವ್ವನೆ, ಬಾಲಿವುಡ್ ನಟಿ ರೇಖಾ (Rekha) ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಲೇಡಿ ಸೆಕ್ರೆಟರಿ ಫರ್ಜಾನಾ (Farzana) ಜೊತೆ ಸಹ ಜೀವನ (live-in relationship) ನಡೆಸುತ್ತಿದ್ದರು ಎನ್ನುವ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಯಾಸೀರ್ ಉಸ್ಮಾನ್ ಬರೆದಿರುವ ರೇಖಾ ಜೀವನ ಚರಿತ್ರೆ ‘ರೇಖಾ: ದಿ ಅನ್ ಟೋಲ್ಡ್ ಸ್ಟೋರಿ’ (Rekha the untold story) ಎನ್ನುವ ಪುಸ್ತಕದಲ್ಲಿ ಈ ವಿಚಾರ ಪ್ರಸ್ತಾವವಾಗಿದೆ.

ಪುಸ್ತಕದಲ್ಲೇನಿದೆ?

ಫರ್ಜಾನಾ ರೇಖಾ ಅವರ ಸಂಗಾತಿ, ಸಲಹೆಗಾರ್ತಿ, ಸ್ನೇಹಿತೆ ಹೀಗೆ ಎಲ್ಲವೂ ಆಗಿದ್ದಳು. ಅವಳಿಲ್ಲದೆ ರೇಖಾ ಬದುಕಲು ಸಾಧ್ಯವಿರಲಿಲ್ಲ. ರೇಖಾ ಮತ್ತು ಫರ್ಜಾನಾ ಸಹ ಜೀವನ ನಡೆಸುತ್ತಿದ್ದಾರೆ ಎಂದು ಕೆಲವು ಮಾತನಾಡಿಕೊಳ್ಳುತ್ತಿದ್ದರು. ರೇಖಾ ಅವರ ಬೆಡ್ ರೂಮ್ ಗೆ ಮನೆ ಕೆಲಸದವರಿಗೂ ಪ್ರವೇಶವಿರಲಿಲ್ಲ. ಆದರೆ ಫರ್ಜಾನಾಗೆ ಅನುಮತಿ ಇತ್ತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ರೇಖಾ ಅವರ ಜೀವನದ ಪ್ರತಿಯೊಂದು ವಿಷಯವನ್ನೂ ಫರ್ಜಾನಾ ನಿಯಂತ್ರಿಸುತ್ತಿದ್ದರು. ರೇಖಾ ಅವರಿಗೆ ಬರುವ ಪ್ರತಿಯೊಂದು ಕರೆಯನ್ನು ಅವರೇ ಪರಿಶೀಲಿಸುತ್ತಿದ್ದರು. ಪ್ರತಿಯೊಂದನ್ನು ಮೇಲ್ವಿಚಾರಣೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.

ಲೇಡಿ ಸೆಕ್ರೆಟರಿ ಫರ್ಜಾನಾ

ಮಾತ್ರವಲ್ಲ ರೇಖಾ ಅವರ ಪತಿ ಮುಖೇಶ್ ಅಗರ್ವಾಲ್ ಆತ್ಮಹತ್ಯೆಯ ಹಿಂದೆಯೂ ಫರ್ಜಾನಾ ಅವರ ಕೈವಾಡವಿದೆ ಎಂದೂ ಈ ಜೀವನ ಚರಿತ್ರೆಯಲ್ಲಿ ಆರೋಪಿಸಲಾಗಿದೆ.

ದಿಲ್ಲಿ ಮೂಲದ ಉದ್ಯಮಿ ಮುಖೇಶ್ ಅಗರ್ವಾಲ್-ರೇಖಾ ವಿವಾಹ 1990ರಲ್ಲಿ ನಡೆದಿತ್ತು. ಅದೇ ವರ್ಷ ಮುಖೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ರದಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಮುಖೇಶ್ ಡೆತ್ ನೋಡ್ ನಲ್ಲಿ ಬರೆದಿದ್ದರು. ಅಲ್ಲದೆ ಆ ವೇಳೆ ರೇಖಾ ಲಂಡನ್ ನಲ್ಲಿದ್ದರು. ಹೀಗಿದ್ದರೂ ಪತಿಯ ಸಾವಿಗೆ ರೇಖಾ ಪರೋಕ್ಷ ಕಾರಣ ಎಂದು ಆರೋಪಿಸಲಾಗುತ್ತಿತ್ತು. ಇನ್ನು ಈ ಪುಸ್ತಕ ಯಾವೆಲ್ಲ ರೀತಿ ವಿವಾದ ಎಬ್ಬಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…