
ಹೊಸ ಬ್ಯುಸಿನೆಸ್ ಗೆ ಹೂಡಿಕೆ ಮಾಡಿದ ರಕುಲ್ ಪ್ರೀತ್ ಸಿಂಗ್ – ಯಾವ ಉದ್ಯಮದ ಮೇಲೆ ಸ್ಟಾರ್ ನಟಿ ಹೂಡಿಕೆ ಮಾಡಿದ್ದಾರೆ ಗೊತ್ತಾ?
- ಮನರಂಜನೆ
- September 6, 2023
- No Comment
- 36
ನ್ಯೂಸ್ ಆ್ಯರೋ : ಸಿನಿ ರಂಗದ ಸ್ಟಾರ್ ನಟ, ನಟಿಯರು ತಾವು ಪಡೆಯುವ ಭಾರೀ ಮೊತ್ತದ ಸಂಭಾವನೆಯನ್ನು ವಿವಿಧ ಉದ್ಯಮಗಳ ಮೇಲೆ ಹೂಡಿಕೆ ಮಾಡುತ್ತಾರೆ. ಕೆಲವರು ತಮ್ಮದೇ ಆದ ಬ್ರ್ಯಾಂಡ್ಗಳನ್ನು, ಹಲವು ಚಿತ್ರ ನಿರ್ಮಾಣ ಸಂಸ್ಥೆಗಳನ್ನು, ಚಿತ್ರಮಂದಿರಗಳನ್ನು, ಹೋಟೆಲ್ ಹೀಗೆ ಹತ್ತು ಹಲವು ಉದ್ಯಮಗಳನ್ನು ಆರಂಭಿಸಿದ್ದಾರೆ. ಇದೀಗ ಬಾಲಿವುಡ್‌ನ ಸ್ಟಾರ್ ನಟಿ ರಕುಲ್ ಪ್ರೀತ್ ಸಿಂಗ್ ಉದ್ಯಮವೊಂದರ ಮೇಲೆ ಹೂಡಿಕೆ ಮಾಡಿದ್ದಾರೆ. ಈ ಬಗೆಗಿನ ಡೀಟಿಯಲ್ಸ್ ಇಲ್ಲಿದೆ.
ಸ್ಪೋರ್ಟ್ಸ್ ಹಿಂದೆ ಸ್ಟಾರ್ ನಟ-ನಟಿಯರು..!
ಇತ್ತೀಚೆಗೆ ಬಾಲಿವುಡ್‌ನ ಸ್ಟಾರ್ ನಟ-ನಟಿಯರು ಕ್ರೀಡೆಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಐಪಿಎಲ್ ಬಳಿಕ ಇದು ಹೆಚ್ಚಾಗಿದೆ. ನಟರಾದ ಶಾರುಖ್ ಖಾನ್, ಜೂಹಿ ಚಾವ್ಲಾ ಕೆಕೆಆರ್ ತಂಡದ ಮೇಲೆ, ಪ್ರೀತಿ ಜಿಂಟಾ ಪಂಜಾಬ್ ತಂಡದ ಮೇಲೆ, ಶಿಲ್ಪಾ ಶೆಟ್ಟಿ ರಾಜಸ್ಥಾನ ತಂಡದ ಮೇಲೆ, ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಅವರುಗಳು ಕಬಡ್ಡಿ ತಂಡದ ಮೇಲೆ ಹೂಡಿಕೆ ಮಾಡಿ ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, ಇದೀಗ ರಕುಲ್ ಪ್ರೀತ್ ಸಿಂಗ್ ಕೂಡ ಅವರ ಸಾಲಿಗೆ ಸೇರಿದ್ದಾರೆ.
ಟೆನ್ನಿಸ್ ಮೇಲೆ ರಕುಲ್ ಪ್ರೀತ್ ಸಿಂಗ್ ಹೂಡಿಕೆ

ಹೌದು, ಇತ್ತೀಚೆಗೆ ಐಪಿಎಲ್, ಫುಟ್ಬಾಲ್ ಲೀಗ್, ಕಬಡ್ಡಿ ಲೀಗ್ ರೀತಿಯಲ್ಲೇ ಟೆನ್ನಿಸ್ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಹೈದರಾಬಾದ್ ತಂಡದ ಮೇಲೆ ರಕುಲ್ ಪ್ರೀತ್ ಸಿಂಗ್ ಹೂಡಿಕೆ ಮಾಡಿದ್ದು, ಇದೀಗ ರಕುಲ್ ಹೈದರಾಬಾದ್ ಸ್ಟ್ರೈಕರ್ಸ್ ತಂಡದ ಸಹ ಒಡತಿ ಆಗಿದ್ದಾರೆ. ನವೀನ್ ದಾಲ್ಮಿಯಾ, ರಾಜ್ದೀಪ್ ದಾಲ್ಮಿಯಾ, ನಿಕುಂಜ್ ಶಾ ಅವರುಗಳು ಈ ತಂಡದ ಇತರೆ ಓನರ್ಗಳಾಗಿದ್ದಾರೆ. ಹೈದರಾಬಾದ್ ಸ್ಟ್ರೈಕರ್ಸ್ ತಂಡ ಈಗಾಗಲೇ ಎರಡು ಬಾರಿ ಚಾಂಪಿಯನ್ ಎನಿಸಿಕೊಂಡಿದ್ದು, ಮಾಲಿಕತ್ವ ಬದಲಾವಣೆಯ ನಂತರ ತಂಡದ ಹಣೆಬರಹ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಕುಲ್ ಪ್ರೀತ್ ಸಿಂಗ್ ಹೇಳಿದ್ದೇನು?
ಉದ್ಯಮ ಕ್ಷೇತ್ರದ ಮೇಲೆ ಹೂಡಿಕೆ ಮಾಡಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ನಟಿ ರಕುಲ್ ಪ್ರೀತ್ ಸಿಂಗ್, ‘ಟಿಪಿಎಲ್ ದೇಶದ ಪ್ರತಿಭಾವಂತ ಟೆನಿಸ್ ಆಟಗಾರರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಕ್ರೀಡೆಯಲ್ಲಿ ದೊಡ್ಡ ಹೆಸರು ಮಾಡಲು ಒಳ್ಳೆಯ ವೇದಿಕೆಯಾಗಿದೆ. ಭಾರತೀಯ ಟೆನಿಸ್‌ಗೆ ನೀಡಿದ ಕೊಡುಗೆಗಾಗಿ ಹೈದರಾಬಾದ್ ಯಾವಾಗಲೂ ಹೆಸರುವಾಸಿಯಾಗಿದೆ ಮತ್ತು ಹೈದರಾಬಾದ್ ಸ್ಟ್ರೈಕರ್‌ಗಳೊಂದಿಗೆ ನಾವು ಆ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಲು ಬಯಸುತ್ತೇವೆ’ ಎಂದಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಹೊಸ ಪ್ರಯತ್ನಕ್ಕೆ ಮನಸಾರೆ ಹಾರೈಸಿದ್ದಾರೆ.