ಪುತ್ರಿ ಐಶ್ವರ್ಯಾ ಎರಡನೇ ಮದುವೆ ವಿರೋಧಿಸಿ ರಜನಿಕಾಂತ್‌ ಮನಸ್ತಾಪ – ನೊಂದ ತಲೈವಾ ಮಾಡಿದ್ದೇನು?

ಪುತ್ರಿ ಐಶ್ವರ್ಯಾ ಎರಡನೇ ಮದುವೆ ವಿರೋಧಿಸಿ ರಜನಿಕಾಂತ್‌ ಮನಸ್ತಾಪ – ನೊಂದ ತಲೈವಾ ಮಾಡಿದ್ದೇನು?

ನ್ಯೂಸ್ ಆ್ಯರೋ : ಕೆಲವು ಸೆಲೆಬ್ರಿಟಿಗಳನ್ನು ಜನರು ತೀವ್ರವಾಗಿ ಹಚ್ಚಿಕೊಂಡಿರುತ್ತಾರೆ. ಅವರ ಖಾಸಗಿ ಬದುಕಿನ ವಿಚಾರಗಳನ್ನೂ ಅಭಿಮಾನಿಗಳು ಫಾಲೋ ಮಾಡುತ್ತಾರೆ. ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್​ ದಂಪತಿಯನ್ನು ಫ್ಯಾನ್ಸ್​ ಹೆಚ್ಚು ಇಷ್ಟಪಡುತ್ತಿದ್ದರು. ಆದರೆ ಈ ಜೋಡಿ ಏಕಾಏಕಿ ದೂರ ಆಗಿರುವ ಸುದ್ದಿ ಅನೇಕರಿಗೆ ಬೇಸರ ತಂದಿದೆ.

21ನೇ ವಯಸ್ಸಿಗೆ ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್​ ಹಾಗೂ ರಜನಿಕಾಂತ್​ ಮಗಳು ಐಶ್ವರ್ಯಾ ದಾಂಪತ್ಯ ವಿಚ್ಛೇದನದಲ್ಲಿ ಕೊನೆಯಾಗಿದ್ದು, ಐಶ್ವರ್ಯಾ ಅವರು ನಟ ರಜನಿಕಾಂತ್ ಹಿರಿಯ ಪುತ್ರಿ. ವೃತ್ತಿಯಲ್ಲಿ ಅವರು ನಿರ್ದೇಶಕಿ ಹಾಗೂ ಗಾಯಕಿ. ಇವರು 2004ರ ನವೆಂಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ 2022ರ ಜನವರಿಯಲ್ಲಿ, ’18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿ, ನಾವಿಬ್ಬರು ಬೇರೆಯಾಗುತ್ತಿದ್ದೇವೆ’ ಎಂದು ಘೋಷಿಸುವ ಮೂಲಕ ಧನುಷ್ ಮತ್ತು ಐಶ್ವರ್ಯಾ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಅಲ್ಲದೇ ಈ ಮಧ್ಯೆ ಐಶ್ವರ್ಯಾ ರಜನಿಕಾಂತ್ ಅವರು ಮತ್ತೊಂದು ಮದುವೆ ಆಗಲು ನಿರ್ಧಾರ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಯುವ ನಟನೊಂದಿಗೆ ಐಶ್ವರ್ಯಾ ರಜನಿಕಾಂತ್‌ ಕಾಣಿಸಿಕೊಳ್ಳುತ್ತಿರುವುದು ಸುದ್ದಿಯಾಗಿತ್ತು.

ಆದರೀಗ ಐಶ್ವರ್ಯಾ ಎರಡನೇ ಮದುವೆ ಆಗುವ ಕಾರಣಕ್ಕಾಗಿ ಅಪ್ಪ ಮಗಳ ಮಧ್ಯೆ ಜಗಳ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ನಿರ್ಧಾರಕ್ಕೆ ರಜನಿಕಾಂತ್​ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹೌದು.. ಐಶ್ವರ್ಯಾ ಎರಡನೇ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸೂಪರ್‌ಸ್ಟಾರ್ ರಜನಿಕಾಂತ್ ಅಸಮಾಧಾನಗೊಂಡಿದ್ದು, ಯುವನಟನೊಂದಿಗೆ ಐಶ್ವರ್ಯಾ ಹೆಸರು ತಳುಕು ಹಾಕಿಕೊಂಡಿರುವುದು ಅವರಿಗೆ ಬೇಸರ ತಂದಿದೆ ಎನ್ನಲಾಗಿದೆ. ಅಲ್ಲದೆ ಮಗಳಿಗೆ ಎರಡನೇ ಮದುವೆ ಬೇಡ ಎಂದು ಒತ್ತಾಯಿಸಿದ್ದು, ಮಗಳು ಹಠ ಹಿಡಿದಾಗ ರಜನಿಕಾಂತ್ ಒಬ್ಬರೇ ಬೇಸರದಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದರು ಎಂದು ಖಾಸಗಿ ಯೂಟ್ಯೂಬ್ ಚಾನೆಲ್‌ ನಲ್ಲಿ ಹಿರಿಯ ಪತ್ರಕರ್ತರೊಬ್ಬರು ಹೇಳಿದ್ದಾರೆ.

ಪುತ್ರಿ ಐಶ್ವರ್ಯಾ ವಿರುದ್ಧ ಕೋಪಗೊಂಡ ತಲೈವಾ ಮಾಲ್ಡೀವ್ಸ್‌ಗೆ ಒಂಟಿಯಾಗಿ ತೆರಳಿದ್ದು, ಮಗಳಿಗೆ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರು. ಮಕ್ಕಳ ಬಗ್ಗೆ ಧನುಷ್‌ಗೆ ಪ್ರೀತಿ ಬಂದೇ ಬರುತ್ತೆ. ಹಿಂತಿರುಗಿ ಬರುತ್ತಾರೆ ಎಂದು ಹೇಳಿದ್ದಾರೆಂದು ಆ ಹಿರಿಯ ಪತ್ರಕರ್ತ ಮಾಹಿತಿ ಹಂಚಿಕೊಂಡಿದ್ದಾರೆ.

ಆದರೆ ಮಗಳ ವಿರುದ್ಧ ತಂದೆ ಆಕ್ರೋಶ ಹೊರಹಾಕಿದ್ದಾರೆ ಅನ್ನೋ ವಿಷಯ ಹೊರಬೀಳುತ್ತಿದ್ದಂತೆ ಈ ವದಂತಿಗೆ ಪರೋಕ್ಷವಾಗಿ ಐಶ್ವರ್ಯಾ ಉತ್ತರ ನೀಡಿದ್ದು, ಇತ್ತೀಚೆಗೆ ಬಿಡುಗಡೆಯಾದ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾದ ಆಡಿಯೋ ರಿಲೀಸ್ ವೇಳೆ ತಂದೆಯೊಂದಿಗೆ ಆತ್ಮೀಯತೆಯಿಂದ ತೆಗೆದ ಫೋಟೊಗಳನ್ನು ಐಶ್ವರ್ಯಾ ರಜನಿಕಾಂತ್ ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ತಂದೆ ಮಗಳ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದು, ಈ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಇನ್ನು ರಜನಿಕಾಂತ್ ಅವರ 2ನೇ ಪುತ್ರಿ ಸೌಂದರ್ಯಾ ಅವರು ಕೂಡ 2010ರಲ್ಲಿ ಅಶ್ವಿನ್ ರಾಮ್‌ಕುಮಾರ್ ಎಂಬುವವರ ಜೊತೆ ಮದುವೆ ಆಗಿದ್ದರು. ಕೊನೆಗೆ ಹೊಂದಾಣಿಕೆಯ ಕೊರತೆಯಿಂದ 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ಪರಸ್ಪರ ವಿಚ್ಛೇದನ ಪಡೆದುಕೊಂಡರು. ಆನಂತರ ವಿಶ್‌ಗನ್‌ ವನಂಗಮುಡಿ ಜೊತೆ ಸೌಂದರ್ಯಾ 2ನೇ ಮದುವೆ ಆಗಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *