
Shocking : ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಜೋಡಿ ಡೈವೋರ್ಸ್? – ಕುಂದ್ರಾ ಟ್ವಿಟರ್ ನಲ್ಲಿ ಬೇರ್ಪಟ್ಟ ಬಗ್ಗೆ ಏನ್ ಹೇಳಿದ್ರು?
- ಮನರಂಜನೆ
- October 20, 2023
- No Comment
- 100
ನ್ಯೂಸ್ ಆ್ಯರೋ : ರಾಜ್ ಕುಂದ್ರಾ 2021ರಲ್ಲಿ ಅಶ್ಲೀಲ ಚಿತ್ರ ನಿರ್ಮಾಣ ಮಾಡಿ, ಜೈಲು ಪಾಲಾಗಿದ್ದರು. ಆದರೆ ಆ ಸಮಯದಲ್ಲಿ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾರನ್ನು ಬಿಡಿಸಿಕೊಂಡು ಬರಲು ಸಾಕಷ್ಟು ಕಷ್ಟಪಟ್ಟಿದ್ದರು. ಅಷ್ಟೇ ಅಲ್ಲ ಸಾಕಷ್ಟು ನಿಂದನೆಗೆ ಒಳಗಾಗಿದ್ದರು. ಎಷ್ಟೇ ನೋವಾದರೂ, ಮನಸ್ಸನ್ನು ಗಟ್ಟಿ ಮಾಡಿಕೊಂಡು, ಸವಾಲನ್ನು ಎದುರಿಸಿ ರಾಜ್ ಕುಂದ್ರಾರನ್ನು ಹೊರಗೆ ಕರೆದುಕೊಂಡು ಬಂದಿದ್ದರು.
ಸ್ವಲ್ಪ ದಿನಗಳ ಕಾಲ ರಾಜ್ ಕುಂದ್ರಾ ಅಷ್ಟಾಗಿ ಎಲ್ಲಿಯೂ ಕಾಣಿಸಿರಲಿಲ್ಲ. ಆದರೆ ಆಮೇಲೆ ಇಬ್ಬರೂ ಮೊದಲಿನಂತೆ ಸಂತಸದಿಂದ ಇದ್ದರು. ಇದು ಸೋಷಿಯಲ್ ಮೀಡಿಯಾದಲ್ಲೂ ರಾರಾಜಿಸುತ್ತಾ ಇತ್ತು. ಆದರೆ ಇದೀಗ ಇದ್ದಕ್ಕಿದ್ದ ಹಾಗೇ ರಾಜ್ ಕುಂದ್ರಾ ಅವರ ಅಕೌಂಟ್ ನಿಂದ ಪೋಸ್ಟ್ ಒಂದನ್ನು ಹಾಕಲಾಗಿದೆ.
‘ನಾವೂ ಬೇರೆ ಆಗಿದ್ದೇವೆ. ಈ ಕಷ್ಟದ ಸಮಯದಲ್ಲಿ ದಯವಿಟ್ಟು ನಮಗೆ ಸಮಯ ನೀಡಿ’ ಎಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗಿದೆ. ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಡಿವೋರ್ಸ್ ಆಯ್ತಾ ಎಂಬ ಚರ್ಚೆಗಳು ಶುರುವಾಗಿದೆ. ಆದರೆ ಈ ರೀತಿಯಾದ ಪೋಸ್ಟ್ ಗೆ ಶಿಲ್ಪಾ ಶೆಟ್ಟಿ ಕಡೆಯಿಂದ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಅಶ್ಲೀಲ ವಿಡಿಯೊ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ, ಜೈಲಿನಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನೇ ಆಧರಿಸಿ ‘ಯುಟಿ 69’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಅ. 18ರಂದು ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖವಾಡ ತೆರೆದು ಮಾಧ್ಯಮಗಳಿಗೆ ಮುಖ ತೋರಿಸಿದ್ದಾರೆ ರಾಜ್ ಕುಂದ್ರಾ. ರಾಜ್ ಕುಂದ್ರಾ ತಮ್ಮದೇ ಜೀವನದಲ್ಲಿ ನಡೆದ ಘಟನೆಯನ್ನೇ ಆಧರಿಸಿದ ಸಿನಿಮಾ ಇದಾಗಿದೆ.
ಸಮಾರಂಭದಲ್ಲಿ ಮಾತನಾಡಿದ ರಾಜ್, “ಚಿತ್ರ ನನ್ನ 63 ದಿನಗಳ ಜೈಲಿನಲ್ಲಿರುವ ಜರ್ನಿಯಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನಗೆ ತಿಳಿದಿದ್ದರಿಂದ ನಾನು ಸಿಂಹದಂತೆ ಹೊರಬಂದೆ. ಯುಟಿ-69 ತನ್ನ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ವಿಡಂಬನಾತ್ಮಕ ಹಾಸ್ಯವಾಗಿದೆʼʼ ಎಂದು ರಾಜ್ ಪ್ರಸ್ತಾಪಿಸಿದ್ದರು. ರಾಜ್ ಕುಂದ್ರಾ ಯುಟಿ-69 ಮೂಲಕ ನಟನೆಗೆ ಪದಾರ್ಪಣೆ ಮಾಡುತ್ತಿದ್ದು ಮಾತ್ರವಲ್ಲದೆ ಶಾನವಾಜ್ ಅಲಿ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದಾರೆ. U-69 ನವೆಂಬರ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಬೇರ್ಪಟ್ಟ ವಿಚಾರ ಕೇವಲ ಈ ಸಿನಿಮಾದ ಪ್ರಚಾರಕ್ಕಾಗಿ ಎಂದು ನಂಬಲಾಗಿದೆ.