ಏಷ್ಯಾದ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಚೀನಾದ ಚೆಂದುಳ್ಳಿ ಚೆಲುವೆ – ಬಾಲಿವುಡ್ ತಾರೆಯರನ್ನೂ ಹಿಂದಿಕ್ಕಿದ ಫ್ಯಾನ್ ಬಿಂಗ್‌ಬಿಂಗ್..!!

ಏಷ್ಯಾದ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಚೀನಾದ ಚೆಂದುಳ್ಳಿ ಚೆಲುವೆ – ಬಾಲಿವುಡ್ ತಾರೆಯರನ್ನೂ ಹಿಂದಿಕ್ಕಿದ ಫ್ಯಾನ್ ಬಿಂಗ್‌ಬಿಂಗ್..!!

ನ್ಯೂಸ್‌ ಆ್ಯರೋ : ಅತ್ಯಂತ ಶ್ರೀಮಂತ ಉದ್ಯಮಗಳಲ್ಲಿ ಭಾರತೀಯ ಚಲನಚಿತ್ರೋದ್ಯಮವು ಒಂದಾಗಿದ್ದು, ಅತೀ ಹೆಚ್ಚು ಸಂಭಾವಣೆ ಪಡೆಯುವ ನಾಯಕರ ಪಟ್ಟಿಯಲ್ಲಿ ನಟ ಶಾರುಖ್‌ ಖಾನ್, ನಾಯಕಿಯರ ಪಟ್ಟಿಯಲ್ಲಿ ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಐಶ್ವರ್ಯ ರೈ ಬಚ್ಚನ್ ಅವರ ಹೆಸರಿದೆ. ಆದರೆ ಇದೀಗ ಏಷ್ಯಾದ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಬಾಲಿವುಡ್‌ ನಾಯಕಿಯರನ್ನು ಹಿಂದಿಕ್ಕಿ, ಚೀನಾದ ಚೆಲುವೆ ಏಷ್ಯಾದ ನಂ1 ಶ್ರೀಮಂತ ನಟಿಯಾಗಿ ಹೊರಹೊಮ್ಮಿದ್ದಾರೆ.

ಚೀನಾದ ನಟಿ ಫ್ಯಾನ್ ಬಿಂಗ್‌ಬಿಂಗ್ ಏಷ್ಯಾದ ಅತ್ಯಂತ ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. ಎಲ್ಲಾ ಬಾಲಿವುಡ್​​ ತಾರೆಯರನ್ನೂ ಹಿಂದಿಕ್ಕಿ ಚೀನಾದ ಸುಂದರಿ ನಂಬರ್​1 ಪಟ್ಟಕ್ಕೆ ಬಂದಿದ್ದಾರೆ. ಬಹುತೇಕ ಎಲ್ಲರೂ ಈ ಹೆಸರು ಕೇಳಿದ್ರೆ ಶಾಕ್ ಆಗಬಹುದು. ಏಕೆಂದರೆ ಈ ಹೆಸರನ್ನು ಬಹುಶಃ ಯಾರೂ ಈ ಹಿಂದೆ ಕೇಳಿರಲಿಕ್ಕೇ ಇಲ್ಲ. ವರದಿಗಳ ಪ್ರಕಾರ, ಫ್ಯಾನ್ ಬಿಂಗ್‌ಬಿಂಗ್ ಏಷ್ಯಾದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರು.

ಸುದ್ದಿ ಪ್ರಕಾರ, ನಟಿಯ ನಿವ್ವಳ ಮೌಲ್ಯ 100-110 ಮಿಲಿಯನ್ ಡಾಲರ್ ಅಂದರೆ 820-900 ಕೋಟಿ ರೂಪಾಯಿ. ಚೀನೀ ಚಲನಚಿತ್ರೋದ್ಯಮದಲ್ಲಿ ಹಲವು ವರ್ಷಗಳಿಂದ ಪ್ರಮುಖ ನಟಿಯಾಗಿ ಕೆಲಸ ಮಾಡುತ್ತಿರುವ ಫ್ಯಾನ್ ಬಿಂಗ್‌ಬಿಂಗ್, ನಿವ್ವಳ ಮೌಲ್ಯದ ವಿಷಯದಲ್ಲಿ ಭಾರತದಲ್ಲಿ ಮಾತ್ರವಲ್ಲದೆ ಕೊರಿಯನ್ ಚಲನಚಿತ್ರೋದ್ಯಮದಲ್ಲಿಯೂ ಅನೇಕ ಖ್ಯಾತನಾಮರನ್ನು ಹಿಂದಿಕ್ಕಿದ್ದಾರೆ.

ತೆರಿಗೆ ಸಂಬಂಧ ಸುದ್ದಿಯಾಗಿದ್ದ ಬಿಂಗ್‌ಬಿಂಗ್

2018 ರಲ್ಲಿ ನಟಿ ತೆರಿಗೆ ವಂಚಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ನಟಿಯ ನಿವ್ವಳ ಮೌಲ್ಯಕ್ಕಿಂತ ಹೆಚ್ಚಿನ ತೆರಿಗೆ ದಂಡವನ್ನು ವಿಧಿಸಲಾಗಿದೆ ಎಂದು ವರದಿಯಾದ ಬೆನ್ನಲ್ಲೇ ಈಕೆ ಚೀನಾದ ಹೊರಗೂ ಬೆಳಕಿಗೆ ಬಂದರು. ತೆರಿಗೆ ವಂಚನೆಗಾಗಿ ನಟಿಗೆ RMB 883 ಮಿಲಿಯನ್ ($ 127 ಮಿಲಿಯನ್ ಅಥವಾ ರೂ 1000 ಕೋಟಿ) ದಂಡ ವಿಧಿಸಲಾಯಿತು. ವರದಿಗಳ ಪ್ರಕಾರ, ನಟಿ ಫ್ಯಾನ್ ಬಿಂಗ್‌ಬಿಂಗ್ ಹದಿಹರೆಯದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಕೇವಲ 16 ನೇ ವಯಸ್ಸಿನಲ್ಲಿ, ಅವರು ಟಿವಿ ಶೋ ಮೈ ಫೇರ್ ಪ್ರಿನ್ಸೆಸ್ (1998-99) ಕಾರ್ಯಕ್ರಮ ಮುನ್ನಡೆಸಿದರೂ, ಇದು ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು.

ಭಾರತದ ಶ್ರೀಮಂತರ ನಟಿಯ ಪಟ್ಟಿ:

ಇನ್ನು ಭಾರತದ ಶ್ರೀಮಂತ ಟಾಪ್​-5 ನಟಿಯರ ವಿಷಯಕ್ಕೆ ಬರುವುದಾದರೆ ಟಾಪ್​-1ನಲ್ಲಿ ಇರುವುದು ಐಶ್ವರ್ಯಾ ರೈ ಬಚ್ಚನ್​ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿರುವ ನಟಿಯ ಆಸ್ತಿ ಮೌಲ್ಯ 820 ಕೋಟಿ ರೂ.ಗೂ ಹೆಚ್ಚು ಎನ್ನಲಾಗಿದೆ. ಎರಡನೇ ಸ್ಥಾನದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಇದ್ದು ಇವರ ನಿವ್ವಳ ಮೌಲ್ಯ 620 ಕೋಟಿ ರೂಪಾಯಿ. ಕರೀನಾ ಕಪೂರ್‌ ಖಾನ್ ನಿವ್ವಳ ಮೌಲ್ಯ 490 ಕೋಟಿ, ಆಲಿಯಾ ಭಟ್ ಅವರ ಆದಾಯ 99 ಕೋಟಿ ಹಾಗೂ ಅನುಷ್ಕಾ ಶರ್ಮಾ ಅವರ ಆಸ್ತಿ 298 ಕೋಟಿ ರೂಪಾಯಿ ಆಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *