ಬಾಲಿವುಡ್ ಗೂ ಕಾಲಿಟ್ಟ ಕನ್ನಡತಿ ಕಿರಣ್ ರಾಜ್ – ಇಸ್ರೋ ವಿಜ್ಞಾನಿಗಳಿಗೆ ಗೌರವ ಅರ್ಪಿಸಲಿದೆ “ರಾನಿ” ಚಿತ್ರತಂಡ‌

ಬಾಲಿವುಡ್ ಗೂ ಕಾಲಿಟ್ಟ ಕನ್ನಡತಿ ಕಿರಣ್ ರಾಜ್ – ಇಸ್ರೋ ವಿಜ್ಞಾನಿಗಳಿಗೆ ಗೌರವ ಅರ್ಪಿಸಲಿದೆ “ರಾನಿ” ಚಿತ್ರತಂಡ‌

ನ್ಯೂಸ್ ಆ್ಯರೋ‌ : ಸ್ಯಾಂಡಲ್ ವುಡ್ ನಟ ಕಿರಣ್ ರಾಜ್ ಸದ್ಯ ‘ರಾನಿ’ ಚಿತ್ರದ ಪ್ರೊಮೋಷನ್ ನಲ್ಲಿ ನಿರತರಾಗಿದ್ದಾರೆ. ಮೊದಲ ಬಾರಿಗೆ ಆ್ಯಕ್ಷನ್ ಪ್ಯಾಕ್ಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರಣ್ ರಾಜ್ ಬಾಲಿವುಡ್ ಗೂ ಕಾಲಿಡುತ್ತಿದ್ದಾರೆ. ಅದರ ಕುರಿತಾದ ವಿವರ ಇಲ್ಲಿದೆ.

ಹಿಂದಿಯಲ್ಲೂ ಬಿಡುಗಡೆ

‘ರಾನಿ’ ಚಿತ್ರ ಹಿಂದಿಯಲ್ಲೂ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಹಿಂದಿ ಟಿಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಾಗಿದೆ. ಟಿ ಸೀರಿಸ್ ಹೊರ ತರುವ ಟೀಸರ್ ವಿಶೇಷ ದಿನವಾದ ನಾಳೆ (ಆಗಸ್ಟ್ 23) ಬಿಡುಗಡೆಯಾಗಲಿದೆ.

ನಾಳೆ ಚಂದ್ರನ ಅಂಗಳದಲ್ಲಿ ಚಂದ್ರಯಾನ-3 ಇಳಿಯಲಿದೆ. ಸಂಜೆ 6.4 ಗಂಟೆಗೆ ಈ ಐತಿಹಾಸಿಕ ಕಾರ್ಯ ನಡೆಯಲಿದ್ದು, ಅದೇ ಸಮಯಕ್ಕೆ ಸರಿಯಾಗಿ ‘ರಾನಿ’ ಟೀಸರ್ ಲಾಂಚ್ ಮಾಡಿ ಇಸ್ರೋ ತಂಡಕ್ಕೆ ಶುಭಾಶಯ ತಿಳಿಸುವುದಾಗಿ ಚಿತ್ರತಂಡ ತಿಳಿಸಿದೆ.

ನಿರ್ದೇಶಕ ಗುರುತೇಜ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಸಮೀಕ್ಷಾ, ಅಪೂರ್ವ, ರಾಧ್ಯ ನಾಯಕಿಯರಾಗಿ ಅಭಿನಯಿಸಿದ್ದಾರೆ.

‘ವಾಚ್ ಮ್ಯಾನ್’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕಿರಣ್ ರಾಜ್ ಸ್ಯಾಂಡಲ್ ವುಡ್ ಪ್ರವೇಶಿಸಿದರು. ಬಳಿಕ ‘ಮಾರ್ಚ್ 22’ ಚಿತ್ರದಲ್ಲಿ ಅನಂತ್ ನಾಗ್ ಜೊತೆ ತೆರೆ ಹಂಚಿಕೊಂಡರು. ಇನ್ನು ‘ದೇವತೆ’ ಧಾರವಾಹಿಯ ಮೂಲಕ ಕಿರುತೆರೆಗೂ ಕಾಲಿಟ್ಟ ಅವರು ಇತ್ತೀಚೆಗೆ ಮುಕ್ತಾಯವಾದ ಕಲರ್ಸ್ ಕನ್ನಡ ವಾಹಿನಿಯ ‘ಕನ್ನಡತಿ’ ಸೀರಿಯಲ್ ನಲ್ಲಿ ಹರ್ಷ ಪಾತ್ರ ನಿಭಾಯಿಸಿ ಜನಪ್ರಿಯರಾದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *