ಐಎಎಸ್ ಅಧಿಕಾರಿಯಾದ ಜನಪ್ರಿಯ ಬಾಲನಟಿ – ವಿಷ್ಣುವರ್ಧನ್, ಶಿವಣ್ಣ, ಉಪ್ಪಿ ಜೊತೆ ಅಭಿನಯಿಸಿದ್ದ ಇವರ್ಯಾರು ಗೊತ್ತೆ?

ಐಎಎಸ್ ಅಧಿಕಾರಿಯಾದ ಜನಪ್ರಿಯ ಬಾಲನಟಿ – ವಿಷ್ಣುವರ್ಧನ್, ಶಿವಣ್ಣ, ಉಪ್ಪಿ ಜೊತೆ ಅಭಿನಯಿಸಿದ್ದ ಇವರ್ಯಾರು ಗೊತ್ತೆ?

ನ್ಯೂಸ್ ಆ್ಯರೋ‌ : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ‘ದೊರೆ’ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಎಚ್.ಎಸ್.ಕೀರ್ತನಾ ಸದ್ಯ ಮಂಡ್ಯದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಆರಂಭಿಸಿದ್ದಾರೆ.

ಸತತ ಸಾಧನೆ ಮೂಲಕ ಯಶಸ್ಸು

ಬಾಲನಟಿಯಾಗಿದ್ದ ಕೀರ್ತನಾ 5 ಬಾರಿ ಯು.ಪಿ.ಎಸ್.ಸಿ. ಪರೀಕ್ಷೆ ಬರೆದು ವಿಫಲಗೊಂಡಿದ್ದರು. ಆದರೆ ಭರವಸೆ ಕಳೆದುಕೊಳ್ಳದ ಅವರು 6ನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದರು.

2011ರಲ್ಲಿ ಕೀರ್ತನಾ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ತೇರ್ಗಡೆಯಾಗಿ ಎರಡು ವರ್ಷ ಕೆಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. 2020ರಲ್ಲಿ 6ನೇ ಬಾರಿ ಪರೀಕ್ಷೆ ಬರೆದು ಅಖಿಲ ಭಾರತ ಶ್ರೇಣಿಯಲ್ಲಿ 167ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು.

ಕೀರ್ತನಾ ಅಭಿನಯದ ಚಿತ್ರಗಳು

ಕೀರ್ತನಾ ಬಾಲನಟಿಯಾಗಿ ‘ಕರ್ಪೂರದ ಗೊಂಬೆ’, ‘ಗಂಗಾ-ಯಮುನಾ’, ‘ಮುದ್ದಿನ ಅಳಿಯ’, ‘ಉಪೇಂದ್ರ’, ‘ಎ’, ‘ಕಾನೂರು ಹೆಗ್ಗಡತಿ’, ‘ಓ ಮಲ್ಲಿಗೆ’, ‘ಲೇಡಿ ಕಮಿಷನರ್’, ‘ಹಬ್ಬ’, ‘ಸಿಂಹಾದ್ರಿ ಸಿಂಹ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *