ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ನಟಿಯರ ಪಟ್ಟಿ ಇಲ್ಲಿದೆ -ಸೀರಿಯಲ್ ನ ದುಬಾರಿ ನಟಿಯರಿವರು…

ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ನಟಿಯರ ಪಟ್ಟಿ ಇಲ್ಲಿದೆ -ಸೀರಿಯಲ್ ನ ದುಬಾರಿ ನಟಿಯರಿವರು…

ನ್ಯೂಸ್ ಆ್ಯರೋ‌ : ಕನ್ನಡ ಹಿರಿತೆರೆಯಂತೆ ಕಿರುತೆರೆಯೂ ಪ್ರಭಾವಶಾಲಿ ಮಾಧ್ಯಮ. ಇಲ್ಲಿ ಪ್ರಸಾರವಾಗುವ ವೈವಿಧ್ಯಮಯ ದಾರಾವಾಹಿಗಳಿಗೆ ಅದರದ್ದೇ ಆದ ಪ್ರೇಕ್ಷಕ ವರ್ಗವಿದೆ. ಹೀಗಾಗಿಯೇ ಧಾರಾವಾಹಿಯ ಕಲಾವಿದರು ಗಾಢ ಪ್ರಭಾವ ಬೀರುತ್ತಾರೆ. ತಮ್ಮ ಅಭಿನಯದಿಂದಲೇ ಮನೆ ಮಾತಾಗಿ ಅತಿ ಹೆಚ್ಚು ಸಂಭಾನೆ ಪಡೆಯುವ ಕಿರುತೆರೆ ನಟಿಯರ ಪಟ್ಟಿ ಇಲ್ಲಿದೆ.

ಮೇಘಾ ಶೆಟ್ಟಿ

ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿದ್ದ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಪ್ರವರ್ಧಮಾನಕ್ಕೆ ಬಂದ ನಟಿ ಮೇಘಾ ಶೆಟ್ಟಿ. ಅನು ಆಗಿ ಕಾಣಿಸಿಕೊಂಡ ಅವರು ವೀಕ್ಷಕರ ಗಮನ ಸೆಳೆದಿದ್ದರು. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಈಗ ಮುಕ್ತಾಯ ಕಂಡಿದೆ. ಇದರಲ್ಲಿನ ಒಂದು ಎಪಿಸೋಡ್ ನ ಅಭಿನಯಕ್ಕಾಗಿ ಮೇಘಾ ಶೆಟ್ಟಿ 40 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಆ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಖ್ಯಾತಿ ಪಡೆದಿದ್ದರು. ಸದ್ಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ನಿಶಾ ರವಿಕೃಷ್ಣನ್

ಸುಮಾರು 4 ವರ್ಷಗಳಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ನಿಶಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸಾವಿರ ಸಂಚಿಕೆ ಪೂರೈಸಿದರೂ ಈ ಧಾರಾವಾಹಿ ಟಿ.ಆರ್.ಪಿ.ಯಲ್ಲಿ ಟಾಪ್ 2 ಸ್ಥಾನ ಕಾಯ್ದುಕೊಂಡಿರುವುದು ವಿಶೇಷ. ಈ ಸೀರಿಯಲ್ ನ ಒಂದು ಸಂಚಿಕೆಗೆ ನಿಶಾ 35 ಸಾವಿರ ರೂ. ಪಡೆದುಕೊಳ್ಳುತ್ತಾರಂತೆ.

ಗೌತಮಿ ಜಾಧವ್

ಝೀ ಕನ್ನಡ ವಾಹಿನಿಯ ಇನ್ನೊಂದು ಜನಪ್ರಿಯ ಧಾರಾವಾಹಿ ‘ಸತ್ಯ’. ಇದರಲ್ಲಿ ನಾಯಕಿಯಾಗಿ ನಟಿಸುತ್ತಿರುವ ಗೌತಮಿ ಜಾಧವ್ ಎಪಿಸೋಡ್ ಒಂದಕ್ಕೆ 35 ಸಾವಿರ ರೂ. ಸಂಭಾವನೆ ಚಾರ್ಜ್ ಮಾಡುತ್ತಾರೆ ಎನ್ನಲಾಗುತ್ತದೆ. ಈ ಧಾರಾವಾಹಿಯೂ ಉತ್ತಮ ಟಿ.ಆರ್.ಪಿ. ರೇಟಿಂಗ್ ಪಡೆದುಕೊಳ್ಳುತ್ತಿದೆ.

ರಂಜನಿ ರಾಘವನ್

ನಟಿಯ ಜೊತೆಗೆ ಲೇಖಕಿಯೂ ಆಗಿರುವ ರಂಜನಿ ರಾಘವನ್ ಕಿರುತೆರೆ ಲೋಕದಲ್ಲಿ ಜನಪ್ರಿಯರಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಮುಕ್ತಾಯವಾದ ‘ಕನ್ನಡತಿ’ ಧಾರಾವಾಹಿಯ ನಾಯಕಿಯಾಗಿ ಅವರು ಪ್ರತಿ ಸಂಚಿಕೆಗೆ 30 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದರಂತೆ. ಕೆಲವು ಚಿತ್ರಗಳಲ್ಲಿ ನಟಿಸಿರುವ ಅವರು ಸದ್ಯ ಸಿನಿಮಾಗಳತ್ತ ಮುಖ ಮಾಡಿದ್ದಾರೆ.

ಅಮೂಲ್ಯ ಗೌಡ

‘ಕಮಲಿ’ಯಾಗಿ ಗಮನ ಸೆಳೆದಿದ್ದ ಅಮೂಲ್ಯ ಗೌಡ ಈ ಸೀರಿಯಲ್ ನ ಒಂದು ಎಪಿಸೋಡ್ ಗೆ 25 ಸಾವಿರ ರೂ. ಪಡೆಯುತ್ತಿದ್ದರಂತೆ. ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದ ಅವರು ಸದ್ಯ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ.

ಮೋಕ್ಷಿತಾ ಪೈ

ಹಿರಿಯ ನಟಿ ವಿನಯಾ ಪ್ರಸಾದ್ ಅಭಿನಯಿಸುತ್ತಿರುವ, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಸೀರಿಯಲ್‍ನ ನಾಯಕಿ ಮೋಕ್ಷಿತಾ ಪೈ. ಸದ್ಯ ಅವರು ಸಂಚಿಕೆಯೊಂದಕ್ಕೆ 20-25 ಸಾವಿರ ರೂ. ಚಾರ್ಜ್ ಮಾಡುತ್ತಾರಂತೆ.

ಭವ್ಯಾ ಗೌಡ

‘ಗೀತಾ’-ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ. ಇದರಲ್ಲಿ ಮುಖ್ಯ ಪಾತ್ರದ ಮೂಲಕ ಗಮನ ಸೆಳೆದಿರುವ ಭವ್ಯಾ ಗೌಡ ಎಪಿಸೋಡ್ ಒಂದಕ್ಕೆ 15 ಸಾವಿರ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ನಯನಾ

ಉತ್ತರ ಕನ್ನಡ ಭಾಷೆಯ ಸೊಗಡಿನಿಂದಲೇ ಗಮನ ಸೆಳೆದಿದ್ದ ಧಾರಾವಾಹಿ ‘ಗಿಣಿರಾಮ’. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಸೀರಿಯಲ್ ನಲ್ಲಿ ನಾಯಕಿಯಾಗಿದ್ದ ನಯನಾ ಪ್ರತಿ ಸಂಚಿಕೆಗೆ 12-20 ಸಾವಿರ ರೂ. ಪಡೆಯುತ್ತಿದ್ದರಂತೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *