Kazan Khan : ಮರೆಯಾದ ಮತ್ತೊಬ್ಬ ಹಿರಿಯ ನಟ – ಒಂದು ಕಾಲದ ಖಡಕ್ ವಿಲನ್ ಕಜಾನ್ ಖಾನ್ ಇನ್ನಿಲ್ಲ

Kazan Khan : ಮರೆಯಾದ ಮತ್ತೊಬ್ಬ ಹಿರಿಯ ನಟ – ಒಂದು ಕಾಲದ ಖಡಕ್ ವಿಲನ್ ಕಜಾನ್ ಖಾನ್ ಇನ್ನಿಲ್ಲ

ನ್ಯೂಸ್ ಆ್ಯರೋ : ಒಂದು ಕಾಲದ ಖ್ಯಾತ ವಿಲನ್, ಹಬ್ಬ, ನಾಗದೇವತೆ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ್ದ ಮಲಯಾಳಂ ನಟ ಕಜಾನ್​ ಖಾನ್​ ಅವರು ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಜಾನ್​ ಖಾನ್​, ನಿಧನದ ಸುದ್ದಿಯನ್ನು ಮಲಯಾಳಂ ಚಿತ್ರರಂಗದ ಖ್ಯಾತ ಪ್ರೊಡಕ್ಷನ್ ಕಂಟ್ರೋಲರ್ ಮತ್ತು ನಿರ್ಮಾಪಕ ಎನ್. ಬಾದುಷಾ ಅವರು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಮಲಯಾಳಂ ನಟ ಕಜಾನ್ ಖಾನ್ 1992 ರಲ್ಲಿ ಬಿಡುಗಡೆಯಾದ ‘ಶೆಂತಮಿಲ್ ಪಾಟ್ಟು’ ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು. ನಂತ್ರ, ಸೇತುಪತಿ ಐಪಿಎಸ್, ಕಟ್ಟುಮರಕ್ಕರನ್ ಮತ್ತು ಮಾಪಿಳ್ಳೈ ಗೌಂಡರ್ ಮುಂತಾದ ಚಿತ್ರಗಳಲ್ಲಿ ಹಲವಾರು ಸಾಂಪ್ರದಾಯಿಕ ಪಾತ್ರಗಳನ್ನು ನಿರ್ವಹಿಸಿದರು. ಅವರು ಉಲ್ಲತೈ ಅಲ್ಲಿತಾ, ನಾಮ್ ಇರುವರ್ ನಮಕ್ಕು ಇರುವರ್ ಮತ್ತು ಪ್ರಿಯಮಾನವಳೆ ಸೇರಿದಂತೆ ಹಲವಾರು ಹಾಸ್ಯಮಯ ವಿಲನ್ ಪಾತ್ರಗಳನ್ನು ನಿರ್ವಹಿಸಿದ್ದಾರೆ.

​ಕಜಾನ್​ ಖಾನ್​ ಅವರು ಪ್ರಧಾನವಾಗಿ ಖಳನಟನ ಪಾತ್ರಗಳಲ್ಲೇ ನಟಿಸುತ್ತಿದ್ದರು. 1993 ರಲ್ಲಿ ಮೋಹನ್ ಲಾಲ್ ಅವರ ‘ಗಂಧರ್ವಂ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಮಲಯಾಳಂ ನಟ ದಿಲೀಪ್ ಅಭಿನಯದ ‘ಸಿಐಡಿ ಮೂಸಾ’ ಚಿತ್ರದಲ್ಲಿನ ವಿಲನ್​ ಪಾತ್ರಕ್ಕಾಗಿ ಕಜನ್ ಖಾನ್ ಬಹಳ ಮೆಚ್ಚುಗೆಯನ್ನು ಪಡೆದರು.

ಕಜಾನ್ ಖಾನ್ ಅವರು ‘ಗಂಧರ್ವಂ,’ ‘ಸಿಐಡಿ ಮೂಸ,’ ‘ದಿ ಕಿಂಗ್,’ ‘ವರ್ಣಪಕಿಟ್ಟು,’ ‘ಡ್ರೀಮ್ಸ್,’ ‘ದಿ ಡಾನ್,’ ‘ಮಾಯಾಮೋಹಿನಿ,’ ‘ರಾಜಾಧಿರಾಜ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಕನ್ನಡದಲ್ಲಿ ಹಬ್ಬ, ನಾಗದೇವತೆ ಮತ್ತು ಚೆಲುವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಕಜಾನ್​ ಖಾನ್​ ಅವರು ಆ ಕಾಲದಲ್ಲಿಯೇ ದಕ್ಷಿಣ ಭಾರತದ ಹ್ಯಾಂಡ್​ಸಮ್​ ಖಳನಟ ಎಂಬ ಹೆಸರು ಪಡೆದುಕೊಂಡಿದ್ದರು. 2008 ರಲ್ಲಿ ಬಿಡುಗಡೆಯಾದ ಪಟ್ಟಾಯ ಕೇಳಪ್ಪು ಅವರ ಕೊನೆಯ ಚಿತ್ರ.
ಇದರ ನಂತ್ರ, ವ್ಯಾಪಾರದಲ್ಲಿ ಆಸಕ್ತಿ ತೋರಿದ ಗಜನ್ ಖಾನ್ ತನಗೆ ಬಂದ ಸಿನಿಮಾ ಅವಕಾಶಗಳನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *