ನಿಮಗೆ ಮಾನ ಮರ್ಯಾದೆ ನಾಚಿಕೆ ಅನ್ನೋದೇ ಇಲ್ವಾ? ನಿಮ್ಮ ತೆವಲಿಗೋಸ್ಕರ ನ್ಯೂಸ್ ಹಾಕ್ಬೇಡಿ – ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ಗರಂ ಆಗಿದ್ಯಾಕೆ?

ನಿಮಗೆ ಮಾನ ಮರ್ಯಾದೆ ನಾಚಿಕೆ ಅನ್ನೋದೇ ಇಲ್ವಾ? ನಿಮ್ಮ ತೆವಲಿಗೋಸ್ಕರ ನ್ಯೂಸ್ ಹಾಕ್ಬೇಡಿ – ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ಗರಂ ಆಗಿದ್ಯಾಕೆ?

ನ್ಯೂಸ್‌ ಆ್ಯರೋ : ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಅವರು ಫೇಕ್ ನ್ಯೂಸ್ ಮಾಡುತ್ತಿರುವ ಮೀಡಿಯಾಗಳ ವಿರುದ್ಧ ಗರಂ ಆಗಿದ್ದಾರೆ. ‌

ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ನಯನಾ ಅವರು, ವೀವ್ಸ್‌ ಹಾಗೂ ಫಾಲೋವರ್ಸ್‌ ಜಾಸ್ತಿಯಾಗಲೆಂದು ಕಚಡವಾಗಿ ನ್ಯೂಸ್‌ಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಯನಾ ಹಂಚಿಕೊಂಡಿರುವ ವಿಡಿಯೋದಲ್ಲಿ ಏನಿದೆ?

‘ನಿನ್ನೆಯಿಂದ ಒಂದು ಫೇಕ್ ನ್ಯೂಸ್ ಓಡಾಡುತ್ತಿದೆ. ಕೆಲವೊಂದು ಪೇಜ್‌ಗಳು ವೀಕ್ಷಣೆ ಬರಲಿ ಫಾಲೋವರ್ಸ್‌ ಹೆಚ್ಚಾಗಬೇಕು ಅನ್ನೋ ಕಾರಣಕ್ಕೆ ತುಂಬಾ ಕಚಡವಾಗಿ ತುಂಬಾ ಹೊಲಸಾಗಿ ನ್ಯೂಸ್‌ಗಳನ್ನು ಪೋಸ್ಟ್ ಮಾಡುತ್ತಿರುವುದಾಗಿ ಗಮನಿಸುತ್ತಿರುವೆ. ನಯನಾ ಅವರ ಗಂಡನಿಂದ ಪ್ರೆಗ್ನೆಂಟ್ ಆಗಿದ್ದಾರೆ, ನಯನಾ ಅವರಿಗೆ ಡಿಲಿವರಿ ಆಗಿ ಅವರಿಗೆ ಗಂಡು ಮಗು ಆಗಿದೆ ಅಂತ ಕೆಲವರು ಹಾಕಿದ್ದಾರೆ ಇನ್ನೂ ಕೆಲವರು ಅವಳಿ-ಜವಳಿ ಮಕ್ಕಳಾಗಿದ್ದಾರೆ ಅಂತ ಹಾಕಿದ್ದಾರೆ. ದಯವಿಟ್ಟು ನಿಮ್ಮ ತೆವಲಿಗೋಸ್ಕರ ನಿಮಗೆ ವ್ಯೂಸ್ ಮತ್ತು ಫಾಲೋವರ್ಸ್ ಬೇಕು ಅಂತ ಈ ರೀತಿ ಫೇಕ್ ನ್ಯೂಸ್ ಹಾಕಬೇಡಿ’ ಎಂದು ನಯನಾ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

‘ಹೌದು ನಾನು ಪ್ರೆಗ್ನೆಂಟ್ ತುಂಬಾ ಜನ ವಿಶ್ ಮಾಡಿದ್ದೀರಿ.. ಪಾಸಿಟಿವ್ ಆಗಿರಿ ಆ್ಯಕ್ಟಿವ್ ಆಗಿರಿ ಎಂದು ಸಲಹೆ ಕೊಟ್ಟಿದ್ದೀರಿ.. ದೇವರ ಆಶೀರ್ವಾದ ಇರಲಿ ಅಂತ ಬ್ಲೆಸ್ ಮಾಡುತ್ತಿದ್ದೀರಿ. ಇದರಿಂದ ನಾನು ಖುಷಿಯಾಗಿರುವೆ, ಆದರೆ ದಯವಿಟ್ಟು ಈ ರೀತಿ ಫೇಕ್ ನ್ಯೂಸ್‌ನ ಯಾರೂ ನಂಬುವುದಕ್ಕೆ ಹೋಗಬೇಡಿ. ಮಗು ಆದ ಮೇಲೆ ನನ್ನ ಪ್ರೀತಿಯ ಕನ್ನಡದ ಜನತೆಗೆ ನಾನು ತಿಳಿಸುತ್ತೀನಿ ನಾನೇ ಪೋಸ್ಟ್ ಮಾಡ್ತೀನಿ… ಬೆಳಗ್ಗೆಯಿಂದ ಸುಮಾರು ಮಂದಿ ನನಗೆ ಕರೆ ಮಾಡಿ ವಿಶ್ ಮಾಡುತ್ತಿದ್ದಾರೆ ಈ ಸಮಯದಲ್ಲಿ ಇಂತಹ ವಿಚಾರಗಳು ನನಗೆ ಕಿರಿಕಿರಿ ಅನಿಸುತ್ತದೆ. ಅಲ್ಲದೆ ಕೆಲವೊಂದು ಪೇಜ್‌ಗಳನ್ನು ಹೆಸರು ಹೇಳಬೇಕು..

ನಿಮಗೆ ಒಂದು ಚೂರು ಮಾನ ಮರ್ಯಾದೆ ನಾಚಿಕೆ ಅನ್ನೋದು ಇದ್ರೆ ದಯವಿಟ್ಟು ಈಗಲೇ ಅದನ್ನು ಡಿಲೀಟ್ ಮಾಡಬೇಕು ಅಂತ ಕೇಳಿಕೊಳ್ತೀನಿ. ನಿಮ್ಮನೆ ಹೆಣ್ಣು ಮಕ್ಕಳು ನನ್ನ ಜಾಗದಲ್ಲಿ ಇದ್ರೆ ಹೀಗೆ ವರ್ತಿಸುತ್ತೀರಾ? ದಯವಿಟ್ಟು ಅರ್ಥ ಮಾಡಿಕೊಳ್ಳಿ’ ಎಂದು ನಯನಾ ಮಾತನಾಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *