ನವೆಂಬರ್ 27ಕ್ಕೆ ಕಾಂತಾರ-2 ಮುಹೂರ್ತ – 14ನೇ ಶತಮಾನದ ಪಂಜುರ್ಲಿ ವೈಭವವನ್ನು ತೆರೆ ಮೇಲೆ ತರಲಿದ್ದಾರೆ ಡಿವೈನ್ ಸ್ಟಾರ್!

ನವೆಂಬರ್ 27ಕ್ಕೆ ಕಾಂತಾರ-2 ಮುಹೂರ್ತ – 14ನೇ ಶತಮಾನದ ಪಂಜುರ್ಲಿ ವೈಭವವನ್ನು ತೆರೆ ಮೇಲೆ ತರಲಿದ್ದಾರೆ ಡಿವೈನ್ ಸ್ಟಾರ್!

ನ್ಯೂಸ್ ಆ್ಯರೋ : ಡಿವೈನ್ ಸ್ಟಾರ್ ರಿಶಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು, ಕೇವಲ 17 ಕೋಟಿಯಲ್ಲಿ ತಯಾರಾದ ‘ಕಾಂತಾರ’ ವಿಶ್ವದಾದ್ಯಂತ ಬರೋಬ್ಬರಿ 400 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಕಾಂತಾರ ಸಿನಿಮಾದ ರಿಶಬ್ ನಟನೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ, ಸೂಪರ್ ಸ್ಟಾರ್ ರಜನಿಕಾಂತ್ ಕೂಡ ರಿಶಬ್ ಅವರನ್ನು‌ ಮನೆಗೆ ಕರೆಸಿ ಅಭಿನಂದಿಸಿದ್ದರು. ಸದ್ಯ, ರಿಶಬ್ ಶೆಟ್ಟಿ ಕಾಂತಾರ-2 ಸಿನಿಮಾ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.

ನವೆಂಬರ್ 27ಕ್ಕೆ ಮುಹೂರ್ತ!

ಈಗಾಗಲೇ ರಿಶಬ್ ಮತ್ತು ತಂಡ ಕಾಂತಾರ-2 ಸಿನಿಮಾದ ಕಥೆ ಬರೆಯಲು ನಿಗೂಢ ಸ್ಥಳಕ್ಕೆ ತೆರಳಿ ಅಲ್ಲೇ ಬೀಡು ಬಿಟ್ಟಿದ್ದಾರೆ. ಈ ನಡುವೆ ಸಿನಿಮಾದ ಮುಹೂರ್ತಕ್ಕೆ ಸದ್ದಿಲ್ಲದೆ ತಯಾರಿ ನಡೆದಿದೆ. ಸಕಲ ತಯಾರಿಗಳೊಂದಿಗೆ ನವೆಂಬರ್ 27 ರಂದು ‘ಕಾಂತಾರ-2’ ಸಿನಿಮಾದ ಮುಹೂರ್ತ ಸರಳವಾಗಿ ನಡೆಯಲಿದೆ ಎಂದು ರಿಶಬ್ ಆಪ್ತ ಬಳಗ ತಿಳಿಸಿದೆ ಎನ್ನಲಾಗಿದೆ. ಮುಹೂರ್ತದ ಬಳಿಕ ಡಿಸೆಂಬರ್ ನಲ್ಲಿ ಸ್ಕ್ರಿಪ್ಟ್ ಕೆಲಸಗಳನ್ನು ಮುಗಿಸಿ 2024ರ ಆರಂಭಕ್ಕೆ ಶೂಟಿಂಗ್ ಆರಂಭವಾಗಲಿದೆಯಂತೆ.

14 ಶತಮಾನದ ಕಥೆ, 110 ಕೋಟಿ ಬಜೆಟ್.!

ರಿಶಬ್ ಶೆಟ್ಟಿ ಈ ಹಿಂದೆ ಕಾಂತಾರ-2 ಸೀಕ್ವೆಲ್ ಅಲ್ಲ ಪ್ರೀಕ್ವೆಲ್ ಎಂದಿದ್ದರು. ಅದೇ ಪ್ರಕಾರ ಇದೀಗ ರಿಶಬ್ ಚಿತ್ರಕ್ಕಾಗಿ ಇತಿಹಾಸದ ಆಳ ಅಧ್ಯಯನದಲ್ಲಿ ತೊಡಗಿದ್ದು, 14ನೇ ಶತಮಾನದ ಕಥೆಯನ್ನು ತೆರೆಯ ಮೇಲೆ ತರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಹುಟ್ಟಿನ ಕಥೆಯನ್ನು ರಿಶಬ್ ಹೇಳ ಹೊರಟಿದ್ದು, ಇದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಬರೋಬ್ಬರಿ 110 ಕೋಟಿ ಬಜೆಟ್ ಕೂಡಿಕೆ ಮಾಡಲಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಥಿಯೇಟರ್‌ಗಳಲ್ಲಿ ಪಂಜುರ್ಲಿ ದೈವದ ವೈಭವವನ್ನು ಸಿನಿ ಪ್ರೇಕ್ಷಕ ಕಣ್ತುಂಬಿಕೊಳ್ಳಬಹುದು.

ಚಿತ್ರಕ್ಕಾಗಿ ರಿಶಬ್ ಕಠಿಣ ಪರಿಶ್ರಮ!

ಸಿನಿಮಾ ವಿಚಾರದಲ್ಲಿ ರಿಶಬ್ ಶೆಟ್ಟಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಇದೀಗ ಕಾಂತಾರ-2 ಚಿತ್ರ ತಯಾರಾಗುತ್ತಿದ್ದು. ಇದಕ್ಕಾಗಿ ರಿಶಬ್ ಕುದುರೆ ಸವಾರಿ, ಕಳರಿ ಕಲಿಯುತ್ತಿದ್ದಾರೆ. ಜೊತೆಗೆ ರಿಶಬದ ಲುಕ್ ಕೂಡ ಚೇಂಜ್ ಆಗಲಿದೆಯಂತೆ. ಈಗಾಗಲೇ ಚಿತ್ರತಂಡ ಅನುಮತಿಗಾಗಿ ಪಂಜುರ್ಲಿ ಹಾಗೂ ಗುಳಿಗ ದೈವದ ಮೊರೆ ಹೋಗಿದ್ದು ಸಿನಿಮಾ ಮಾಡಲು ದೈವಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ‘ಕಾಂತಾರ’ ಸಿನಿಮಾ ಮಾಡಿದ ದಾಖಲೆ, ಮೋಡಿಯನ್ನು ಯಾವ ರೀತಿ ರಿಶಬ್ ‘ಕಾಂತಾರ-2’ ಸಿನಿಮಾದಲ್ಲೂ ಮುಂದುವರೆಸಿಕೊಂಡು‌ ಹೋಗಲಿದ್ದಾರೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *