
ನಿಮ್ಮ ಮೊಬೈಲ್ ಡಿಸ್ಪ್ಲೇ ಸ್ಕ್ರಾಚ್ ಆಗಿದ್ಯಾ? – ಹಾಗಿದ್ದರೆ ಈ ಟ್ರಿಕ್ಸ್ ಬಳಸಿ, ಸುಲಭದಲ್ಲಿ ರಿಮೂವ್ ಮಾಡಿ..
- ಟೆಕ್ ನ್ಯೂಸ್
- November 21, 2023
- No Comment
- 96
ನ್ಯೂಸ್ ಆ್ಯರೋ : ಈಗಂತೂ ಸ್ಮಾರ್ಟ್‌ಫೋನ್ ಖರೀದಿಸುವುದಕ್ಕಿಂತ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಹೆಚ್ಚು ಕಷ್ಟ ಎಂದೇ ಹೇಳಬಹುದು. ದೊಡ್ಡ ಡಿಸ್‌ಪ್ಲೇ ಹೊಂದಿರುವ ಇಂದಿನ ಮೊಬೈಲ್ಗಳನ್ನು ಹೇಗೆ ಕಾಪಾಡಿಕೊಂಡರೂ ಸಹ ಕೆಲವೊಮ್ಮೆ ಹಾನಿಯಾಗುತ್ತದೆ. ಇದಕ್ಕಾಗಿ ನಿಮ್ಮ ಕೈಯಿಂದ ಮೊಬೈಲ್ ಬೀಳಲೇ ಬೇಕು ಎಂದೇನಿಲ್ಲ. ಸತತವಾಗಿ ಉಪಯೋಗ ಮಾಡಿದರೆ ಅಥವಾ ರಫ್ ಯೂಸ್ ಮಾಡಿದರೆ ಸಾಕು ಹಾನಿಯಾಗುತ್ತದೆ. ಡಿಸ್ ಪ್ಲೇಗೆ ಸ್ಕ್ರೀನ್ ಕವರ್ ಹಾಕಿದ್ದರೂ ಅದು ಕೆಲವೊಂದು ಬಾರಿ ಉಪಯೋಗಕ್ಕೆ ಬರುವುದಿಲ್ಲ.
ಹಾಗಾಗಿ ದಿನನಿತ್ಯದ ಬಳಕೆಯ ನಡುವೆ ಸ್ಮಾರ್ಟ್‌ಫೋನ್ ಸ್ಕ್ರಾಚ್ ಆಗಿಯೇ ಆಗುತ್ತದೆ. ಆದ್ದರಿಂದ ನಿಮ್ಮ ಫೋನ್ನಲ್ಲಾದ ಸ್ಕ್ರಾಚ್ ಅನ್ನು ಸುಲಭವಾಗಿ ಹೇಗೆ ತೆಗೆಯಬಹುದು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
- ಮೊಟ್ಟೆಯ ಬಿಳಿಭಾಗ:
ಹೌದು, ಮೊಟ್ಟೆಯ ಬಿಳಿಭಾಗ ಮತ್ತು ಪೊಟ್ಯಾಶಿಯಮ್ ಸಲ್ಫೇಟ್ ಬಳಸಿ ಫೋನ್ ಸ್ಕ್ರಾಚ್ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಇವೆರಡನ್ನು ಮಿಶ್ರಣ ಮಾಡಿ. ಮತ್ತು ಈ ಮಿಶ್ರಣದಿಂದ ಸ್ಮಾರ್ಟ್‌ಫೋನ್ ಪರದೆಯನ್ನು ಒರೆಸಿ.
- ಬೇಕಿಂಗ್ ಸೋಡಾ:
ಸ್ಕ್ರಾಚ್ ನಿವಾರಣೆಗಾಗಿ ಬೇಕಿಂಗ್ ಸೋಡಾ ಉತ್ತಮ ವಿಧಾನ. ಒಂದು ಪಾತ್ರೆಗೆ ನೀರು ಮತ್ತು ಸೋಡಾವನ್ನು ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆ ಮಾಡಿ.
ಸ್ಕ್ರಾಚ್ ರಿಮೂವಲ್ ಕ್ರೀಮ್:
ಮಾರುಕಟ್ಟೆಯಲ್ಲಿ ಹಲವಾರು ಕಾರು ಸ್ಕ್ರಾಚ್ ರಿಮೂವಲ್ ಕ್ರೀಮ್‌ಗಳಿವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ನಿಮ್ಮ ಫೋನ್ ಡಿಸ್‌ಪ್ಲೇ ಸ್ಕ್ರಾಚ್ ಹೋಗಲಾಡಿಸಿ.
ಬೇಬಿ ಪೌಡರ್:
ಬೇಬಿ ಪೌಡರ್ ಮೂಲಕವೂ ಡಿಸ್‌ಪ್ಲೇ ಸ್ಕ್ರಾಚ್ ರಿಮೂವ್ ಮಾಡಬಹುದು ಎಂಬುದು ನಿಮಗೆ ಗೊತ್ತೆ. ಒಂದು ಪಾತ್ರೆಗೆ ನೀರು ಮತ್ತು ಬೇಬಿ ಪೌಡರ್ ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ಆದ ಜಾಗದಲ್ಲಿ ಹಚ್ಚಿರಿ.