ವಿದ್ಯಾರ್ಥಿಗಳ ಜಗಳ ಬಿಡಿಸಲು ಹೋದ ನೆಚ್ಚಿನ ಶಿಕ್ಷಕಿಗೆ ಬರ್ತ್ಡೇ ಸರ್ಪ್ರೈಸ್…! – ಶಿಕ್ಷಕಿ-ವಿದ್ಯಾರ್ಥಿಗಳ ಬಾಂಧವ್ಯ ತೆರೆದಿಟ್ಟ ಈ ಭಾವುಕ ವಿಡಿಯೋ ನೋಡಿ..

ವಿದ್ಯಾರ್ಥಿಗಳ ಜಗಳ ಬಿಡಿಸಲು ಹೋದ ನೆಚ್ಚಿನ ಶಿಕ್ಷಕಿಗೆ ಬರ್ತ್ಡೇ ಸರ್ಪ್ರೈಸ್…! – ಶಿಕ್ಷಕಿ-ವಿದ್ಯಾರ್ಥಿಗಳ ಬಾಂಧವ್ಯ ತೆರೆದಿಟ್ಟ ಈ ಭಾವುಕ ವಿಡಿಯೋ ನೋಡಿ..

ನ್ಯೂಸ್ ಆ್ಯರೋ : ಕಾಲೇಜು ಲೈಫ್ ಅನ್ನೋದು ಗೋಲ್ಡನ್‌ ಲೈಫ್ ಅಂತ ಹೇಳೋದು ಇದಕ್ಕೆ ನೋಡಿ. ಫ್ರೆಂಡ್ಲಿ ಲೆಕ್ಚರ್ಸ್, ತಮ್ಮದೇ ಗೆಳೆಯರ ಬಳಗ, ಬೋರಿಂಗ್ ಆಗೋ ಕ್ಲಾಸ್ ನ ಬಂಕ್ ಮಾಡಿ ಕ್ಯಾಂಟೀನ್ ನಲ್ಲಿ ಕೂತು ಪಟ್ಟಾಂಗ ಹೊಡೆಯೋದು.. ಈ ಎಲ್ಲ ಅನುಭವ ಜೀವನದಲ್ಲಿ ಮತ್ತೆ ಬರಲು ಸಾಧ್ಯನೇ ಇಲ್ಲ. ಅಂದ ಹಾಗೆ ನಮ್ಮ ಫೇವರೆಟ್ ಉಪನ್ಯಾಸಕರಿಗಂತೂ ಕಾಲೇಜಿನಲ್ಲಿ ಏನಾದರೊಂದು ಸರ್ಪ್ರೈಸ್ ಕೊಡೋದು ಅಂದ್ರೆ ಎಲ್ಲಿಲ್ಲದ ಖುಷಿ.

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಶಿಕ್ಷಕಿಯೊಬ್ಬರು ತರಗತಿಯೊಳಗೆ ಬರುತ್ತಿದ್ದಂತೆ ಜಗಳವಾಡುತ್ತಿದ್ದಂತೆ ನಟಿಸಿ ಆ ಶಿಕ್ಷಕಿ ಅವರ ಜಗಳವನ್ನು ಬಿಡಿಸಲು ಬರುವಾಗ ವಿದ್ಯಾರ್ಥಿಗಳು ಜೋರಾಗಿ ಕೂಗುತ್ತಾ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತಾರೆ. ವಿದ್ಯಾರ್ಥಿಗಳು ನೀಡಿದ ಸರ್ಪ್ರೈಸ್ ಕಂಡು ಶಿಕ್ಷಕಿ ಭಾವುಕರಾಗಿದ್ದಾರೆ. ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ತೋರಿಸುವ ಈ ವೀಡಿಯೋ ಸಖತ್ ವೈರಲ್ ಆಗಿದೆ.

ವೈರಲ್ ಆದ ವೀಡಿಯೋದಲ್ಲಿ ಏನಿದೆ..?

@konappumedia ಎಂಬ ಇನ್ಸ್ಟ್ರಾಗ್ರಾಂ ಪೇಜ್ ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋದಲ್ಲಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿಗೆ ಸರ್ಪ್ರೈಸ್ ನೀಡುತ್ತಿರುವುದನ್ನು ಕಾಣಬಹುದು. ಈ ವೈರಲ್ ವೀಡಿಯೋದಲ್ಲಿ ಶಿಕ್ಷಕಿ ಒಳಗಡೆ ಬರುವ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪು ತಮ್ಮ ತಮ್ಮಲ್ಲೇ ಗಂಭೀರವಾಗಿ ಗಲಾಟೆ ಆಗುತ್ತಿರುವಂತೆ ನಟಿಸುತ್ತಾರೆ.

ಇವರ ಗಲಾಟೆ ನೋಡಿ ಶಿಕ್ಷಕಿ ಗಲಾಟೆ ನಿಲ್ಲಿಸಲೆಂದು ಅಲ್ಲಿಗೆ ಓಡೋಡಿ ಬರುತ್ತಾರೆ. ಅಷ್ಟರಲ್ಲಿ ಜಗಳವಾಡುತ್ತಿದ್ದ ವಿದ್ಯಾರ್ಥಿಗಳು ಶಿಕ್ಷಕಿಗೆ ಜೋರಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಾರೆ. ಶಾಕ್ ಆದ ಶಿಕ್ಷಕಿ ವಿದ್ಯಾರ್ಥಿಗಳ ಪ್ಲ್ಯಾನ್ ಮತ್ತು ಅವರ ಪ್ರೀತಿ ಕಂಡು ಭಾವುಕರಾಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವೀಡಿಯೋ ಎಷ್ಟು ವೀಕ್ಷಣೆ ಪಡೆದಿದೆ ಗೊತ್ತಾ..?

ನಾಲ್ಕು ದಿನಗಳ ಹಿಂದೆ ಇನ್ಸ್ಟ್ರಾಗ್ರಾಂ ಪೇಜ್ ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 9.8 ಮಿಲಿಯನ್ ವೀಕ್ಷಣೆಗಳನ್ನು ಮತ್ತು 1ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ ಈ ಸುಂದರ ವೀಡಿಯೋ ನೋಡಿ ನನ್ನ ಕಣ್ಣಲ್ಲೂ ನೀರು ಬಂತು’ ಎಂದು ಕಮೆಂಟ್ ಮಾಡಿದ್ದಾರೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *