ಅರ್ಬಾಜ್ ಖಾನ್‌ ಪ್ರಪೋಸ್‌ ಮಾಡಿದ ದಿನ ಇಂದಿಗೂ ವಿಶೇಷ – ಮಾಜಿ ಪತಿಯ ನೆನಪು ಮೆಲುಕು ಹಾಕಿದ ನಟಿ ಮಲೈಕಾ ಅರೋರಾ

ಅರ್ಬಾಜ್ ಖಾನ್‌ ಪ್ರಪೋಸ್‌ ಮಾಡಿದ ದಿನ ಇಂದಿಗೂ ವಿಶೇಷ – ಮಾಜಿ ಪತಿಯ ನೆನಪು ಮೆಲುಕು ಹಾಕಿದ ನಟಿ ಮಲೈಕಾ ಅರೋರಾ

ನ್ಯೂಸ್‌ ಆ್ಯರೋ : ಒಂದು ಕಾಲದಲ್ಲಿ ಬಾಲಿವುಡ್‌ನ ಸ್ಟಾರ್‌ ಜೋಡಿಯಾಗಿದ್ದ ನಟಿ ಮಲೈಕಾ ಅರೋರಾ ಹಾಗೂ ನಟ ಅರ್ಬಾಜ್ ಖಾನ್ ಅವರು ವಿಚ್ಛೇದನ ಪಡೆದು ಬೇರೆಯಾಗಿರುವುದು ಹಳೆ ವಿಷಯ. ವಿಚ್ಛೇದನದ ಬಳಿಕವೂ ಒಬ್ಬರನೊಬ್ಬರು ನೋಡಲು ಇಚ್ಛೆ ಪಡದ ಜೋಡಿಗಳ ಪೈಕಿ ಇವರಿಬ್ಬರು ತಮ್ಮ ಮಗನ ಸಲುವಾಗಿ ಆಗಾಗ ಒಟ್ಟಿಗೆ ಕಾಣಿಸಿಕೊಂಡು ಕ್ಯಾಮೆರಾ ಕಣ್ಣಿಗೂ ಸೆರೆಯಾಗಿದ್ದು ಉಂಟು. ಸದ್ಯ ಮಲೈಕಾ ತನಗಿಂತ 10 ವರ್ಷ ಚಿಕ್ಕವನಾಗಿರುವ ನಟ ಅರ್ಜುನ್ ಕಪೂರ್ ಜತೆ ಡೇಟಿಂಗ್‌ ಮಾಡುತ್ತಿದ್ದಾರೆ.

ಈಚೆಗೆ ಸಂದರ್ಶನವೊಂದರಲ್ಲಿ ಮಲೈಕಾ ಅವರು ತಮ್ಮ ಮಾಜಿ ಪತಿ ಅರ್ಬಾಜ್ ಖಾನ್ ಅವರು ಮಾಡಿದ ಪ್ರೇಮ ನಿವೇದನೆ ನೆನಪಿಸಿಕೊಂಡು, ಆ ದಿನವನ್ನು ಇಂದಿಗೂ ಮೇಲುಕು ಹಾಕುತ್ತಿರುತ್ತೇನೆಂದು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಬರ್ತಡೇ ದಿನ ನನಗೆ ಅರ್ಬಾಜ್ ಮದುವೆಯಾಗುತ್ತೀಯಾ ಎಂದು ಪ್ರಮೋಸ್ ಮಾಡಿದ್ದ. “ನನ್ನ ಮತ್ತು ಅರ್ಬಾಜ್‌ ನಡುವೆ ಅನ್ಯೋನ್ಯತೆ ಬೆಳೆದಿದ್ದು, ಕಾಫಿ ಬ್ರಾಂಡ್‌ ಶೂಟಿಂಗ್‌ ವೇಳೆ. ಅಲ್ಲಿ ನನ್ನ ಮತ್ತು ಅವನ ನಡುವೆ ಮಾತುಕತೆ ನಡೆಯುತ್ತಿತ್ತು. ಫೋನ್‌ ಕಾಲ್‌ನಲ್ಲಿಯೂ ಇಬ್ಬರೂ ಮಾತನಾಡುತ್ತಿದ್ದೆವು. ನಿಧಾನಕ್ಕೆ ಇಬ್ಬರಲ್ಲೂ ಒಂದು ಹೊಸ ಭಾವ ಮೂಡಲಾರಂಭಿಸಿತು.

ಹೀಗಿರುವಾಗ ಒಂದು ದಿನ ನನ್ನ ಬರ್ತ್ ಡೇ ದಿನ ನೇರವಾಗಿ ಅರ್ಬಾಜ್‌ ಮನೆಗೆ ಹೋಗಿದ್ದೆ. ಆಗ ಅತಿಯಾದ ಜ್ವರದಿಂದ ಬೆಡ್‌ ಮೇಲೆ ಬೆಡ್‌ಶೀಟ್‌ ಹೊದ್ದಿಕೊಂಡು ಅರ್ಬಾಜ್‌ ಮಲಗಿದ್ದ.

ಆ ಜ್ವರದಲ್ಲಿಯೇ ನನಗೆ ಬರ್ತ್‌ಡೇ ವಿಶ್‌ ಮಾಡಿ, ಶೇಕ್‌ ಹ್ಯಾಂಡ್‌ ನೀಡಿದ್ದ. ಆವತ್ತು ಆತನ ಕೈ ಸಹ ಜ್ವರದ ಹಿನ್ನೆಲೆಯಲ್ಲಿ ಸುಡುತ್ತಿತ್ತು. ನಿಧಾನಕ್ಕೆ ನನ್ನ ಕೈ ಬೆರಳು ಹಿಡಿದು, ವಜ್ರದ ಉಂಗುರು ತೊಡಿಸಿ ಮದುವೆ ಆಗುವೆಯಾ ಎಂದು ಪ್ರಪೋಸ್‌ ಮಾಡಿದ್ದ. ಆ ಕ್ಷಣ ನನ್ನ ಪಾಲಿಗೆ ತುಂಬ ವಿಶೇಷವಾಗಿತ್ತು. ಇಂದಿಗೂ ನಾನು ಆ ಕ್ಷಣವನ್ನು ಮೆಲುಕು ಹಾಕುತ್ತಿರುತ್ತೇನೆ” ಎಂದು ಮಲೈಕಾ ಹೇಳಿಕೊಂಡಿದ್ದಾರೆ.

1998ರಲ್ಲಿ ಮದುವೆಯಾದ ಅರ್ಬಾಜ್ ಹಾಗೂ ಮಲೈಕಾ ಸುದೀರ್ಘ ಕಾಲ ಒಟ್ಟಿಗೆ ಸಂಸಾರ ಮಾಡಿ 2017ರಲ್ಲಿ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದು ಬೇರೆಯಾಗುತ್ತಾರೆ. ಕೆಲ ವರ್ಷಗಳ ಬಳಿಕ ಅರ್ಜುನ್ ಕಪೂರ್ ಜತೆ ಮಲೈಕಾ ಅವರಿಗೆ ಸ್ನೇಹ ಬೆಳೆಯುತ್ತದೆ.

ಆ ಸ್ನೇಹ ಪ್ರೀತಿಯಾಗಿ ಇದೀಗ ಕೆಲ ವಿಶೇಷ ದಿನಗಳದ್ದು ಈ ಜೋಡಿ ಕ್ಯಾಮರಾ ಕಣ್ಣಿಗೆ ಒಟ್ಟಿಗೆ ಕಾಣಿಸುತ್ತದೆ. ಅದಲ್ಲದೆ ಇಬ್ಬರು ಲೀವಿಂಗ್ ರಿಲೇಶನ್‌ ಶಿಪ್‌ನಲ್ಲಿ ಇರುವುದಾಗಿ ಹೇಳಿದ್ದುಂಟು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *