‘ಆದಿಪುರುಷ್’ ಸಿನಿಮಾ ಒಟಿಟಿಗೆ ರಿಲೀಸ್ ಆಗುವ ಮೊದಲೇ ಎಚ್​ಡಿ ಪ್ರಿಂಟ್ ಸೋರಿಕೆ – ಯೂಟ್ಯೂಬ್ ನಲ್ಲೂ‌ ಅಪ್ಲೋಡ್..!!

‘ಆದಿಪುರುಷ್’ ಸಿನಿಮಾ ಒಟಿಟಿಗೆ ರಿಲೀಸ್ ಆಗುವ ಮೊದಲೇ ಎಚ್​ಡಿ ಪ್ರಿಂಟ್ ಸೋರಿಕೆ – ಯೂಟ್ಯೂಬ್ ನಲ್ಲೂ‌ ಅಪ್ಲೋಡ್..!!

ನ್ಯೂಸ್ ಆ್ಯರೋ : ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಕೆಟ್ಟದಾಗಿ ವಿಮರ್ಶೆಗಳನ್ನು ಪಡೆದಿದೆ. ಟೀಸರ್-ಟ್ರೇಲರ್ ರಿಲೀಸ್ ಆದಾಗಲೇ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದವು. ಸಿನಿಮಾ ರಿಲೀಸ್ ಆದ ಬಳಿಕ ಈ ಟೀಕೆ ಹೆಚ್ಚಾಯಿತು. ಅಲ್ಲದೇ ‘ಆದಿಪುರುಷ್’ ಸಿನಿಮಾದ ಕಲೆಕ್ಷನ್ ಕೂಡ ನಿರೀಕ್ಷೆ ಮಟ್ಟ ತಲುಪಲಿಲ್ಲ. ಇದೀಗ ಈ ಸಿನೆಮಾಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ‘ಆದಿಪುರುಷ್’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುವ ಮೊದಲೇ ಹೆಚ್​ಡಿ ಪ್ರಿಂಟ್ ಸೋರಿಕೆ ಆಗಿದೆ.

ಹೌದು.. ನೂರಾರು ಕೋಟಿ ರೂ. ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಯಶಸ್ಸು ಗಳಿಸುವಲ್ಲಿ ಹಿನ್ನಡೆ ಅನುಭವಿಸಿದ್ದು, ಚಿತ್ರತಂಡ ಕೂಡ ಹಲವು ವಿವಾದಗಳನ್ನು ಎದುರಿಸಬೇಕಾಯಿತು. ಅಲ್ಲದೇ ಈ ಸಿನೆಮಾದಲ್ಲಿ ರಾಮಾಯಣದ ಕಥೆ ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದಲ್ಲದೇ ರಾವಣ ಬ್ರಾಹ್ಮಣನಾಗಿ ಮಾಂಸ ಮುಟ್ಟುವುದು, ಪುಷ್ಪಕ ವಿಮಾನದ ಬದಲು ಬಾವಲಿ ಬಳಸಿದ್ದು, ಮಾನ ಹಾನಿ ಆಗುವಂಥ ಡೈಲಾಗ್​ಗಳು, ಪಾತ್ರಗಳನ್ನು ಬೇಕಾಬಿಟ್ಟಿ ತೋರಿಸಿದ್ದು ಹೀಗೆ ನಾನಾ ಕಾರಣಗಳಿಂದ ಸಿನಿಮಾ ಸೋಲನ್ನು ಅನುಭವಿಸಬೇಕಾಯಿತು.

ಅದರೂ ತಲೆ ಕೆಡಿಸಿಕೊಳ್ಳದ ಈ ಸಿನಿಮಾ ತಂಡ ಒಟಿಟಿಯಲ್ಲಿ ಕಮಾಲ್ ಮಾಡಲು ಸಜ್ಜಾಗಿತ್ತು. ಆದರೆ ಇದೀಗ ಅದಕ್ಕೂ ಕುತ್ತು ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಬೇಕಿದ್ದ ಚಿತ್ರದ ಎಚ್​ಡಿ ಪ್ರಿಂಟ್ ಸೋರಿಕೆ ಆಗಿದೆ.

ಕೆಲವರು ಇದನ್ನು ಯೂಟ್ಯೂಬ್​ನಲ್ಲೂ ಅಪ್​ಲೋಡ್ ಮಾಡಿದ್ದು, ಒಂದಷ್ಟು ಜನ ಅದನ್ನೇ ಡೌನ್​ಲೋಡ್ ಮಾಡಿಕೊಂಡು ನೋಡುತ್ತಿದ್ದಾರೆ. ಇನ್ನು, ಯೂಟ್ಯೂಬ್​ನಲ್ಲೂ ಇದೇ ವಿಡಿಯೋ ಅಪ್​ಲೋಡ್ ಆಗಿತ್ತು. ಒಂದು ಗಂಟೆಯ ಬಳಿಕ ಅದನ್ನು ಡಿಲೀಟ್ ಮಾಡಿಸಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *