Hindi BIGG BOSS OTT : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಪೂಜಾ ಭಟ್ ಮೊಬೈಲ್ ಬಳಸಿದ್ರಾ? – ವೈರಲ್ ಫೋಟೋ ಬಗ್ಗೆ ಏನಿದೆ ಮಾಹಿತಿ?

Hindi BIGG BOSS OTT : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಪೂಜಾ ಭಟ್ ಮೊಬೈಲ್ ಬಳಸಿದ್ರಾ? – ವೈರಲ್ ಫೋಟೋ ಬಗ್ಗೆ ಏನಿದೆ ಮಾಹಿತಿ?

ನ್ಯೂಸ್ ಆ್ಯರೋ‌ : ಹಿಂದಿಯಲ್ಲಿ ಬಿಗ್​ಬಾಸ್ ಒಟಿಟಿ (Bigg Boss OTT) ಎರಡನೇ ಸೀನಸ್ ಚಾಲ್ತಿಯಲ್ಲಿದ್ದು, ಸ್ಪರ್ಧಿಯೊಬ್ಬರು ಮೊಬೈಲ್ ಬಳಸಿರುವ ಆರೋಪ ಹೊರಿಸಲಾಗಿದ್ದು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರವೊಂದು ಹರಿದಾಡುತ್ತಿದೆ.

ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ ಎರಡರಲ್ಲಿ ನಟಿ ಪೂಜಾ ಭಟ್ ಸ್ಪರ್ಧಿಯಾಗಿ ಭಾಗಿಯಾಗಿದ್ದು, ಬಿಗ್​ಬಾಸ್ ಮನೆಯಲ್ಲಿ ಪೂಜಾ ಭಟ್ ಮೊಬೈಲ್ ಬಳಸಿದ್ದಾರೆ ಎನ್ನಲಾಗುತ್ತಿದ್ದು, ಪೂಜಾ ಭಟ್ ತಮ್ಮ ಪಕ್ಕದಲ್ಲಿ ಮೊಬೈಲ್ ಇಟ್ಟುಕೊಂಡು ಸಹ ಸ್ಪರ್ಧಿಯೊಟ್ಟಿಗೆ ಮಾತನಾಡುತ್ತಿರುವ ಫೋಟೊ ಒಂದು ವೈರಲ್ ಆಗಿದೆ.

ಹಿರಿಯ ನಿರ್ದೇಶಕ ಮಹೇಶ್ ಭಟ್ ಪುತ್ರಿ, ಆಲಿಯಾ ಭಟ್ ಸಹೋದರಿ ಆಗಿರುವ ಪೂಜಾ ಭಟ್, ಚಿತ್ರರಂಗದ ಪ್ರಭಾವಿ ಕುಟುಂಬದ ಸದಸ್ಯರಾಗಿದ್ದು, ಇದೇ ಕಾರಣಕ್ಕೆ ಪೂಜಾ ಭಟ್ಗೆ ಬಿಗ್ಬಾಸ್ ಮನೆಯಲ್ಲಿ ಮೊಬೈಲ್ ಬಳಸಲು ಅವಕಾಶ ಮಾಡಿಕೊಡಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.

ಫೋಟೋ ನಕಲಿ‌‌..!
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೂಜಾ ಭಟ್ರ ಮೊಬೈಲ್ ಚಿತ್ರ ನಕಲಿ ಆಗಿದೆ. ಯಾರೋ ಪೂಜಾ ಭಟ್ರ ಚಿತ್ರವನ್ನು ಎಡಿಟ್ ಮಾಡಿ ಖಾಲಿ ಜಾಗದಲ್ಲಿ ಮೊಬೈಲ್ ಅನ್ನು ತಂತ್ರಜ್ಞಾನ ಬಳಸಿ ಕೂರಿಸಿ, ಪೂಜಾ ಭಟ್, ಬಿಗ್ಬಾಸ್ ಮನೆಯೊಳಗೆ ಮೊಬೈಲ್ ಬಳಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬುವಂತೆ ಮಾಡಿದ್ದಾರೆ.

ಈ ಬಗ್ಗೆ ಬಿಗ್​ಬಾಸ್ ಖಬ್ರಿ ಸೇರಿದಂತೆ ಇನ್ನೂ ಕೆಲವು ಸಾಮಾಜಿಕ ಜಾಲತಾಣ ಪೇಜ್​ಗಳಲ್ಲಿ ಸ್ಪಷ್ಟನೆ ನೀಡಲಾಗಿದ್ದು, ಬಿಗ್ ಬಾಸ್ ಸ್ಪರ್ಧಿಗಳು ಮೊಬೈಲ್ ಬಳಸುತ್ತಾರೆ ಎಂಬ ವಾದಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *