ಸಿನಿಮಾಕ್ಕಾಗಿಯೇ ಹೆಸರು ಬದಲಾಯಿಸಿಕೊಂಡ ಮಾಲಾಶ್ರೀ ಪುತ್ರಿ – ಲಕ್ ತರುತ್ತಾ ಲೇಡಿ ಸೂಪರ್ ಸ್ಟಾರ್ ಪುತ್ರಿಯ ಹೊಸ ಹೆಸರು?

ಸಿನಿಮಾಕ್ಕಾಗಿಯೇ ಹೆಸರು ಬದಲಾಯಿಸಿಕೊಂಡ ಮಾಲಾಶ್ರೀ ಪುತ್ರಿ – ಲಕ್ ತರುತ್ತಾ ಲೇಡಿ ಸೂಪರ್ ಸ್ಟಾರ್ ಪುತ್ರಿಯ ಹೊಸ ಹೆಸರು?

ನ್ಯೂಸ್‌ ಆ್ಯರೋ : ಕನಸಿನ ರಾಣಿ ಮಾಲಾಶ್ರೀ, ನಿರ್ಮಾಪಕ ದಿ. ರಾಮು ದಂಪತಿ ಮಗಳು ರಾಧನಾ ರಾಮು ಸದ್ಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಇದೀಗ ತಮ್ಮ ಹೆಸರನ್ನು ಆರಾಧನಾ ರಾಮ್ ಎಂದು ಬದಲಾಯಿಸಿಕೊಂಡಿದ್ದಾರೆ.

ಈ ಸಂಬಂಧ ಮಾತನಾಡಿದ ನಟಿ ಮಾಲಾಶ್ರೀ, ಮಗಳಿಗೆ ಹೆಸರಿಡುವ ಬಗ್ಗೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ಜತೆ ಚರ್ಚಿಸಿ ಆರಾಧನಾ ಎಂಬ ಹೆಸರನ್ನು ಇಡಲಾಗಿದೆ. ಇನ್ಮುಂದೆ ಆರಾಧನಾ ಎಂದೇ ಕರೆಯಿರಿ ಎಂದು ಮಾಲಾಶ್ರೀ ಅವರು ವಿನಂತಿಕೊಂಡಿದ್ದಾರೆ.

ಇನ್ನೂ ಮಾಲಶ್ರೀ ಪತಿ ದಿವಂಗತ ರಾಮು ಅವರು ಕೋಟಿ ರಾಮು ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಭಾರೀ ಕೋಟಿ ಹಣದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆಗೆ ಇವರು ಪಾತ್ರರಾಗುತ್ತಾರೆ.

ಇನ್ನೂ ಮಾಲಾಶ್ರೀ ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಆದ ಬೋಲ್ಡ್‌ ನಟನೆಯಿಂದ ಲೇಡಿ ಸೂಪರ್‌ ಸ್ಟಾರ್ ಎಂಬ ಹೆಸರನ್ನು ಗಳಿಸಿದ್ದಾರೆ. ತಂದೆ-ತಾಯಿ ಇಬ್ಬರು ಕನ್ನಡ ಚಿತ್ರರಂಗದಲ್ಲಿ ತುಂಬಾ ದೊಡ್ಡ ಹೆಸರು ಗಳಿಸಿದ್ದು, ಇದೀಗ ಮಗಳು ಆರಾಧನಾ ರಾಮು ಕನ್ನಡ ಸಿನಿಮಾ ರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಸದ್ಯ ಆರಾಧನಾ ರಾಮು ಅವರು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಿಗ್ ಬಜೆಜ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ಆರಾಧನಾ ಲುಕ್‌ ಅನ್ನು ರಿವೀಲ್ ಮಾಡಲಾಗಿದ್ದು, ನಟಿಯ ಫಸ್ಟ್‌ ಲುಕ್‌ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *