ಖಾಲಿ ಹೊಟ್ಟೆಯಲ್ಲಿ ಲವಂಗದ ನೀರು ಮಾಡಿ ಕುಡಿಯಿರಿ; ಏನೆಲ್ಲಾ ಆರೋಗ್ಯ ಪ್ರಯೋಜನ ಸಿಗುತ್ತವೆ ಗೊತ್ತಾ ?

Drinking clove water
Spread the love

ನ್ಯೂಸ್ ಆ್ಯರೋ: ನಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ಮಸಾಲೆ ಪದಾರ್ಥಗಳು ಹಲವು ರೂಪಗಳಲ್ಲಿ ಬಳಕೆಯಾಗುತ್ತವೆ.ಅದರಲ್ಲೂ ಕೆಲವೊಂದು ಮಸಾಲೆ ಪದಾರ್ಥಗಳು ನಿರಂತರವಾಗಿ ಬಳಕೆ ಆಗುತ್ತಲೇ ಇರುತ್ತವೆ. ಮಸಾಲೆ ಪದಾರ್ಥಗಳು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಹಲವಾರು ಕಾಯಿಲೆಗಳಿಂದ ಕೂಡ ನಮ್ಮನ್ನು ದೂರವಿರಸುತ್ತದೆ. ಇರುವಂತಹ ಹಲವು ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು. ನೋಡಲು ಪುಟ್ಟದಾಗಿ ಈ ಲವಂಗದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಅಂಶಗಳು, ಖನಿಜಾಂಶಗಳು, ಅಯೋಡಿನ್, ಕ್ಯಾಲ್ಸಿಯಂ, ಪಾಸ್ಪರಸ್ ಮತ್ತು ಕಬ್ಬಿಣದ ಅಂಶಗಳು, ಇತ್ಯಾದಿ ಆರೋಗ್ಯಕಾರಿ ಅಂಶಗಳು ಹೇರಳವಾಗಿ ಕಂಡುಬರುತ್ತದೆ.

ಲವಂಗಗಳಲ್ಲಿ ಆಂಟಿ ಇನ್ಫ್ಲಮೆಟರಿ ಲಕ್ಷಣಗಳು ಹೇರಳವಾಗಿ ಕಂಡುಬರುತ್ತವೆ. ಮುಖ್ಯವಾಗಿ ಇವುಗಳಲ್ಲಿ eugenol ಎನ್ನುವ ಅಂಶ ಇರಲಿದ್ದು, ಇದು ನಮ್ಮ ದೇಹದ ಉರಿಯುತ ನಿವಾರಕವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಲವಂಗವನ್ನು ಮೂಳೆ ನೋವಿನ ಅಥವಾ ಆರ್ಥ್ರೈಟಿಸ್ ನೋವು ನಿವಾರಕ ಎಂದು ಕರೆಯುತ್ತಾರೆ.

ಲವಂಗದ ನೀರು ಸೇವನೆಯಿಂದ ನೈಸರ್ಗಿಕವಾಗಿ ನಮ್ಮ ಹೊಟ್ಟೆ ಉಬ್ಬರ, ಅಜೀರ್ಣತೆ, ಗ್ಯಾಸ್ಟಿಕ್ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಲವಂಗಗಳಲ್ಲಿ ಕಂಡು ಬರುವ ಈ ಗುಣಲಕ್ಷಣಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲವು.

ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿ ಇನ್ಫ್ಲಮೇಟರಿ ಲಕ್ಷಣಗಳನ್ನು ಒಳಗೊಂಡಿರುವ ಲವಂಗದ ನೀರು ಸೇವನೆಯಿಂದ ನಮ್ಮ ದೇಹದಲ್ಲಿ ಸೋಂಕು ಗಳು ಉಂಟಾಗುವುದಿಲ್ಲ ಮತ್ತು ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ ನಮ್ಮ ದೇಹವನ್ನು ಸೋಂಕುಗಳಿಂದ ಕಾಪಾಡುತ್ತದೆ.

ಲವಂಗದ ನೀರು ತನ್ನಲ್ಲಿ ಅಗತ್ಯ ಪೋಷಕಾಂಶಗಳನ್ನು ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿರುವುದರಿಂದ ಆಕ್ಸಿಡೇಟಿವ್ ಒತ್ತಡ ಉಂಟು ಮಾಡುವ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತವೆ.

ಲಿವರ್ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುವ ಗುಣ ಲವಂಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಧ್ಯಯನಗಳು ಹೇಳುವಂತೆ ಲವಂಗಗಳಲ್ಲಿ ಇರುವಂತಹ eugenol ಪ್ರಮಾಣ ಫ್ಯಾಟಿ ಲಿವರ್ ಕಾಯಿಲೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಲವಂಗದ ನೀರು ರಕ್ತದಲ್ಲಿನ ಸಕ್ಕರೆ ಮಟ್ಟ ಅಂದ್ರೆ ಬ್ಲಡ್ ಶುಗರ್ ಲೆವೆಲ್ ಅತ್ಯುತ್ತಮವಾಗಿ ನಿರ್ವಹಣೆ ಮಾಡುವುದು ಮಾತ್ರವಲ್ಲದೆ ದೇಹದಲ್ಲಿ ಇನ್ಸುಲಿನ್ ಪ್ರಕ್ರಿಯೆ ಸರಿಯಾದ ಪ್ರಮಾಣದಲ್ಲಿ ನಡೆಯುವಂತೆ ನೋಡಿಕೊಳ್ಳುತ್ತದೆ. ಇದರಿಂದ ಮಧುಮೇಹ ಕಾಯಿಲೆಯನ್ನು ಕೂಡ ನಿಯಂತ್ರಣದಲ್ಲಿಡಲು ಪರೋಕ್ಷವಾಗಿ ನೆರವಿಗೆ ಬರುತ್ತದೆ.

ಆರೋಗ್ಯ ತಜ್ಞರು ಹೇಳುವ ಪ್ರಕಾರ ಲವಂಗವನ್ನು ನೀರಿನಲ್ಲಿ ನೆನೆ ಹಾಕುವು ದರಿಂದ ಲವಂಗಗಳಲ್ಲಿ ನೋವು ನಿವಾರಕ ಗುಣಗಳು ಇಮ್ಮಡಿಗೊಳ್ಳುತ್ತವೆಯಂತೆ. ಈ ರೀತಿ ನೆನೆಹಾಕಿದ ಲವಂಗದ ನೀರು ಕುಡಿಯುವುದರಿಂದ ತಲೆ ನೋವು, ಹಲ್ಲು ನೋವು ಮತ್ತು ಮಾಂಸಖಂಡಗಳ ನೋವು ಹಾಗೂ ಸೆಳೆತ ದೂರವಾಗುತ್ತದೆ.

ಲವಂಗದ ನೀರು ಕುಡಿಯುವ ವಿಧಾನ:

ಮೊದಲಿಗೆ ಒಂದು ಸಣ್ಣ ಪಾತ್ರೆಯಲ್ಲಿ 1 ರಿಂದ 2 ಕಪ್ ಆಗುವಷ್ಟು ನೀರನ್ನು ಕುದಿಸಿ. ಒಮ್ಮೆ ಈ ನೀರು ಸರಿಯಾಗಿ ಕುದಿ ಬಂದ ಬಳಿಕ ಇದಕ್ಕೆ 9-10 ಲವಂಗವನ್ನು ಸೇರಿಸಿ, ಚೆನ್ನಾಗಿ ಬೆರೆಸಿ ಮತ್ತು ನೀರನ್ನು ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ. ಆ ಬಳಿಕ ಗ್ಯಾಸ್ ಸ್ಟವ್ ಆಫ್ ಮಾಡಿ, ಈ ಪಾನೀಯವನ್ನು ಸ್ವಲ್ಪ ಹೊತ್ತು ತಣಿಯಲು ಬಿಡಿ. ಆಬಳಿಕ ಇನ್ನೊಂದು ಪಾತ್ರೆಗೆ ಸೋಸಿmಕೊಂಡು, ಬೆಳಗ್ಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ

Leave a Comment

Leave a Reply

Your email address will not be published. Required fields are marked *

error: Content is protected !!