ರಾತ್ರಿ ಲೇಟಾಗಿ ಮಲಗುವವರೇ ಎಚ್ಚರ; ಈ ಗಂಭೀರ ಕಾಯಿಲೆ ಬರಬಹುದು!

Sleeping Problem
Spread the love

ನ್ಯೂಸ್ ಆ್ಯರೋ: ರಾತ್ರಿ ನಿದ್ದೆ ಬರೋಲ್ಲ, ಎಷ್ಟೇ ಬೇಗ ಮಲ್ಕೊಂಡ್ರೂ ನಿದ್ದೆ ಹತ್ತಿರ ಸುಳಿಯೊಲ್ಲ ಅನ್ನೋದು ಇತ್ತೀಚೆಗೆ ಹಲವರ ಗೋಳು. ಆ ಕಾರಣಕ್ಕೆ ತಡವಾಗಿ ಮಲಗುವುದು ರೂಢಿಯಾಗಿರುತ್ತದೆ. ನೀವು ಈ ಸಾಲಿಗೆ ಸೇರುವವರಾಗಿದ್ದರೆ ಈ ಸ್ಟೋರಿಯನ್ನು ತಪ್ಪದೇ ಓದಬೇಕು.

ತಡವಾಗಿ ಮಲಗುವುದು ಎಂದರೆ ಕಡಿಮೆ ನಿದ್ರೆ ಮಾಡುವುದು ಎಂದರ್ಥ. ಏಕೆಂದರೆ ರಾತ್ರಿ ತಡವಾಗಿ ಮಲಗಿದರೂ ಬೆಳಿಗ್ಗೆ ಎದ್ದೇಳುವ ಸಮಯಕ್ಕೆ ಎದ್ದೇಳಲೇಬೇಕು. ದೇಹಕ್ಕೆ ಅವಶ್ಯ ಇರುವಷ್ಟು ನಿದ್ದೆ ಮಾಡದೇ ಇದ್ದರೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ಬೊಜ್ಜು, ಮಧುಮೇಹ, ಹೃದ್ರೋಗ ಸೇರಿದಂತೆ ಆತಂಕದಂತಹ ಮಾನಸಿಕ ಸಮಸ್ಯೆಗಳೂ ಎದುರಾಗುತ್ತವೆ. ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ರಾತ್ರಿ ತಡವಾಗಿ ಮಲಗುವುದರಿಂದ ಮುಂಜಾನೆ ಸೂರ್ಯನ ಬೆಳಕು ನೋಡಲು ಆಗುವುದಿಲ್ಲ. ಮುಂಜಾನೆಯ ಎಳೆ ಬಿಸಿಲು ನಮ್ಮ ಸಿರ್ಕಾಡಿಯನ್‌ ಲಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದು ದೇಹದ ಆಂತರಿಕ ಗಡಿಯಾರವನ್ನು ಸಿಂಕ್ರೊನೈಸ್‌ ಮಾಡಲು ಸಹಾಯ ಮಾಡುತ್ತದೆ.

ರಾತ್ರಿ ತಡವಾಗಿ ಮಲಗುವುದರಿಂದ ಇದು ನಮ್ಮ ನೆನಪಿನ ಶಕ್ತಿಯ ಪರಿಣಾಮ ಬೀರುತ್ತದೆ. ಗಮನಶಕ್ತಿ ಕುಗುತ್ತದೆ, ಅಲ್ಲದೆ ಉತ್ಪಾದಕತೆಯು ಕಡಿಮೆಯಾಗುತ್ತದೆ. ತಡವಾಗಿ ಹಾಗೂ ದಿನಕ್ಕೊಂದು ಸಮಯದಲ್ಲಿ ಮಲಗುವುದರಿಂದ ದೇಹ ನೈಸರ್ಗಿಕ ಚಕ್ರವು ಬದಲಾಗುತ್ತದೆ. ಇದು ನಿದ್ದೆ ಮಾಡುವುದು ಹಾಗೂ ಎಚ್ಚರಗೊಳ್ಳುವ ವಿಚಾರದಲ್ಲಿ ತೊಂದರೆ ಉಂಟು ಮಾಡುತ್ತದೆ. ಇದು ದೌರ್ಬಲ್ಯ, ಶಕ್ತಿಯ ಕೊರತೆ ಮತ್ತು ಹಗಲಿನಲ್ಲಿ ಏಕಾಗ್ರತೆಯ ತೊಂದರೆಗೆ ಕಾರಣವಾಗಬಹುದು.

ನಿದ್ದೆ ಕಡಿಮೆಯಾದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದರಿಂದ ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು, ಸೋಂಕಿನ ತೊಂದರೆ ಉಂಟಾಗುವುದು ಆಗಬಹುದು. ಉತ್ತಮ ನಿದ್ದೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರಾತ್ರಿ ತಡವಾಗಿ ಊಟ ಮಾಡುವುದು, ನಿದ್ದೆಯ ಅಸಮತೋಲನವು ಹಸಿವು ಹೆಚ್ಚುವುದು, ಅನಾರೋಗ್ಯಕರ ಆಹಾರದ ಕಡುಬಯಕೆಗೆ ಕಾರಣವಾಗುತ್ತದೆ. ಹಾಗಾಗಿ ನಿದ್ದೆಯಲ್ಲಿನ ವ್ಯತ್ಯಾಸವು ಪರೋಕ್ಷವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ನಿದ್ದೆಯ ಕೊರತೆಯು ಕಿರಿಕಿರಿ, ಮೂಡ್‌ ಸ್ವಿಂಗ್‌, ಒತ್ತಡದ ಪ್ರಮಾಣ ಹೆಚ್ಚುವುದು, ಖಿನ್ನತೆ ಹಾಗೂ ಆತಂಕದಂತಹ ಮಾನಸಿಕ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ. ತಡವಾಗಿ ಮಲಗುವುದು ದೈಹಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಅಪಾಯ ಉಂಟಾಗಬಹುದು.

ನಿದ್ದೆಯ ಕೊರತೆಯಿಂದ ಚರ್ಮದ ಸಮಸ್ಯೆಗಳಾದ ಚರ್ಮ ಮಂದವಾಗುವುದು, ಕಪ್ಪು ಕಲೆಗಳು ಉಂಟಾಗುವುದು, ಮೊಡವ ಮತ್ತು ಬೇಗನೆ ವಯಸ್ಸಾದಂತೆ ಕಾಣುವುದು ಇಂತಹ ಸಮಸ್ಯೆಗಳು ಎದುರಾಗಬಹುದು. ಸಾಕಷ್ಟು ಉತ್ತಮ ನಿದ್ದೆಯು ಚರ್ಮದ ಆರೋಗ್ಯ ಉತ್ತಮವಾಗಿರಲು ಸಹಕಾರಿ. ನಿದ್ರಾಹೀನತೆಯು ಹಸಿವು, ಚಯಾಪಚಯ ಮತ್ತು ಒತ್ತಡ ಹಾರ್ಮೋನುಗಳ ವ್ಯತ್ಯಾಸಕ್ಕೆ ಕಾರಣವಾಗಬಹುದು. ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!