ʼವಿದೇಶದಲ್ಲಿ ಕನ್ನಡ ಬಾವುಟ ಹಾರಿಸಿದ್ದೀಯಲ್ಲ ಗುರುʼ ; ನೈಜೀರಿಯಾದ ಮಕ್ಕಳಿಗೆ ಕನ್ನಡ ಭಾಷೆ ಹೇಳಿಕೊಟ್ಟು ಡಾ. ಬ್ರೋ
ನ್ಯೂಸ್ ಆ್ಯರೋ: ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಇದೀಗ ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಡಾ. ಬ್ರೋ ನೈಜಿರಿಯಾದ ಸ್ಲಂ ಮಕ್ಕಳಿಗೆ ಕನ್ನಡ ಹೇಳಿಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಪ್ರವಾಸದ ತುಣುಕುಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಇವರು ವಿದೇಶದಲ್ಲಿ ಪುಟ್ಟ ಸ್ಕೂಲಿನ ತರಗತಿಯೊಂದರ ಮಕ್ಕಳಿಗೆ ಕನ್ನಡದಲ್ಲಿ ಪಾಠ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಡಾ. ಬ್ರೋ ನೈಜೀರಿಯಾದ ಅತಿ ದೊಡ್ಡ ಸ್ಲಂ ಪ್ರದೇಶಕ್ಕೆ ತೆರಳಿದ್ದು ಅಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆಯಲ್ಲಿ ಅಲ್ಲಿನ ಮಕ್ಕಳಿಗೆ ನಮ್ಮ ದೇಶ ಹಾಗೂ ರಾಜ್ಯದ ಬಗ್ಗೆ ಹೇಳಿದ್ದಾರೆ. ಬಳಿಕ ನಮ್ಮ ಕನ್ನಡ ಭಾಷೆಯನ್ನು ಭಾರತದ ರಾಷ್ಟ್ರ ಭಾಷೆ ಎಂದು ಹೇಳಿದ್ದು ಕನ್ನಡ ಭಾಷೆಯಲ್ಲೇ ಪಾಠ ಮಾಡಿದ್ದಾರೆ. ಇದರ ವಿಡಿಯೋ ಎಕ್ಸ್ ಖಾತೆಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಈ ವಿಡಿಯೋದಲ್ಲಿ ಗಗನ್ ಶ್ರೀನಿವಾಸ್ ಅವರು ನೈಜೀರಿಯಾದ ಶಾಲೆಗೆ ಭೇಟಿ ನೀಡಿರುವುದನ್ನು ನೋಡಿರಬಹುದು. ನೈಜೀರಿಯಾದ ಈ ಶಾಲೆಯನ್ನು ನೋಡಿದರೆ ಕಳಪೆ ಕಟ್ಟಡದಲ್ಲಿ ಇರುವಂತಿದೆ. ಈ ವಿಡಿಯೋದ ಪ್ರಾರಂಭದಲ್ಲಿ, ನಮ್ಮ ದೇಶ ಹಾಗ ರಾಜ್ಯದ ಬಗ್ಗೆ ಮಾತನಾಡಿದ್ದಾರೆ.
ಆ ಬಳಿಕ ನಮ್ಮ ಕನ್ನಡ ಭಾಷೆಯನ್ನು ಭಾರತದ ರಾಷ್ಟ್ರ ಭಾಷೆ ಎಂದು ಹೇಳುವುದನ್ನು ನೋಡಬಹುದು. ಅದಲ್ಲದೇ, ʼನಾನೀಗ ನಿಮಗೆ ಇಂಡಿಯಾದ ನ್ಯಾಷನಲ್ ಲ್ಯಾಂಗ್ವೇಜ್ ಹೇಳಿಕೊಡ್ತೀನಿʼ ಎಂದಿದ್ದಾರೆ. ತದನಂತರದಲ್ಲಿ ʼಅ, ಆ, ಇ, ಈʼ ಎಂದು ಕನ್ನಡದ ಅಕ್ಷರಮಾಲೆಯನ್ನು ಅಂ, ಅಃ ವರೆಗೆ ಹೇಳಿಕೊಟ್ಟಿದ್ದಾರೆ.
Leave a Comment