2025 ನಿಮಗೆ ಒಳ್ಳೆಯದಾಗಬೇಕಾ?: ಜ.1ರಂದು ಈ ಮುಹೂರ್ತದಲ್ಲಿ ಈ ಕೆಲಸ ಮಾಡಿ
ನ್ಯೂಸ್ ಆ್ಯರೋ: ಹೊಸ ವರ್ಷವನ್ನು ಸ್ವಾಗತಿಸಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ 2025 ಪ್ರಾರಂಭವಾಗಲಿದೆ. ಇನ್ನು 2025ರನ್ನು ಹೇಗೆ ಸ್ವಾಗತಿಸಬೇಕು ಎಂದು ಅನೇಕರಿಗೆ ಗೊಂದಲವಿದೆ. ಹೊಸ ವರ್ಷದಂದು ಮೊದಲ ದಿನ ಯಾವ ಕೆಲಸ ಮಾಡಿದರೆ ಒಳ್ಳೆಯದಾಗುತ್ತೆ? ಯಾವ ಕೆಲಸ ಮಾಡಬಾರದು? ಹೊಸ ವರ್ಷವನ್ನು ಹೇಗೆ ಸ್ವಾಗತಿಸಬೇಕು ಎನ್ನುವುದು ಎಲ್ಲರ ದೊಡ್ಡ ಪ್ರಶ್ನೆ ಆಗಿದೆ.
ನೀವು ಹೊಸ ವರ್ಷವನ್ನು ಈ ರೀತಿ ಬರಮಾಡಿಕೊಂಡರೆ ಆರ್ಥಿಕವಾಗಿ ಗಟ್ಟಿಯಾಗುತ್ತೀರಾ. ನಿಮ್ಮ ಸಂಪತ್ತು ವೃದ್ಧಿಸುತ್ತೆ. ನೀವು ಖಷಿಯಿಂದ ಜೀವನ ಕಳೆಯುತ್ತೀರಾ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಿದ್ರೆ ಈ ರೀತಿಯ ಪ್ರಯೋಜನವನ್ನು ಪಡೆಯಲು ಏನು ಮಾಡಬೇಕು? ಯಾವ ಕೆಲಸವನ್ನು ಯಾವ ಸಮಯಕ್ಕೆ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತೆ ಎಂಬುದನ್ನು ತಿಳಿಯೋಣ ಬನ್ನಿ.
ಪ್ರತಿಯೊಬ್ಬರಿಗೂ ವರ್ಷದ ಮೊದಲ ದಿನವನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಆಸೆ ಇರುತ್ತದೆ. ಅದೇ ರೀತಿ ನಾವು ಈ ವರ್ಷ ಪೂರ್ತಿ ಎಲ್ಲಾ ವಿಧಗಳಿಂದಲೂ ಚೆನ್ನಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. 2025 ವರ್ಷ ನಿಮ್ಮ ಜೀವನದಲ್ಲಿ ಉತ್ತಮವಾಗಿರಬೇಕಾದ್ರೆ ಜನವರಿ 1ರಂದು ಆ ಶುಭ ಮುಹೂರ್ತದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ.
ವರ್ಷದ ಮೊದಲ ದಿನ ಅಂದ್ರೆ ಜನವರು 1ರಂದು ಬ್ರಾಹ್ಮೀ ಅಥವಾ ಬ್ರಹ್ಮ ಮೂಹೂರ್ತದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಹೊಸ ವರ್ಷ ನಿಮಗೆ ಸಂತೋಷ, ಆರೋಗ್ಯ, ಸಂಪತ್ತು ಮತ್ತು ನೆಮ್ಮದಿಯನ್ನು ನೀಡಬೇಕಾದ್ರೆ ಈ ಕೆಲಸ ಮಾಡಬೇಕು. ಹೀಗೆ ಮಾಡೋದರಿಂದ ನಿಮಗೆ ವರ್ಷವಿಡೀ ಶುಭ ಫಲಿತಾಂಶಗಳು ಸಿಗುತ್ತವೆ.
ವರ್ಷದ ಮೊದಲ ದಿನ ಅಂದರೆ 2025 1 ಜನವರಿ ರಂದು ಬ್ರಹ್ಮ ಮುಹೂರ್ತದ ಸಮಯ, ಅಂದರೆ 05:25 ರಿಂದ 06:19 ರವರೆಗಿನ ಅವಧಿಯಲ್ಲಿ ಇದನ್ನು ಮಾಡಬೇಕು. ಆ ದಿನ ಅಂದರೆ ನಾಳೆ ಬೆಳಗ್ಗೆ ಬೇಗ ಏಳಬೇಕು. ಸ್ನಾನ ಮಾಡಿ ಶುಭ್ರವಾಗಿ ನಿಮಿಷ್ಟದ ದೇವರು ಅಥವಾ ಮನೆದೇವರಿಗೆ ತೆರಳಿ ದರ್ಶನ ಪಡೆಯಬೇಕು. ಇದು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಪೂಜೆ ಸಲ್ಲಿಸಬೇಕು.
ಮನೆದೇವರ ಹೆಸರಿನಲ್ಲಿ ತುಪ್ಪದ ದೀಪ ಬೆಳಗಬೇಕು. ನಂತರ ದೇವಾಲಯದಲ್ಲಿಯೇ ಕುಳಿತು ಕೆಲವು ಮಂತ್ರಗಳನ್ನು ಪಠಿಸಬೇಕು. ನಂತರ ನಿಮ್ಮ ಕೈಯಲ್ಲಿ ಸ್ವಲ್ಪ ನೀರು ಹಿಡಿದುಕೊಂಡು ನಿಮ್ಮ ಆಸೆಯನ್ನು ಹೇಳಿ ನಂತರ ಆ ನೀರನ್ನು ಬಿಡಬೇಕು.
ಬ್ರಹ್ಮ ಮುಹೂರ್ತದಲ್ಲಿ, ಬ್ರಹ್ಮ ಮುರಾರಿ ತ್ರಿಪುರಾಂತಕರಿ ಭಾನು: ಶಶಿ ಭೂಮಿ ಸುತೋ ಬುಧಶ್ಚ. ಗುರು ಶುಕ್ರ ಶನಿ ರಾಹು ಕೇತವ ಸರ್ವೇ ಗ್ರಹ ಶಾಂತಿ ಕರ ಭವಂತು ಮಂತ್ರವನ್ನು ಪಠಿಸಬೇಕು. ಈ ದಿನ ಗಾಯತ್ರಿ ಮಂತ್ರ ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದನ್ನು ಸಹ ಮರೆಯಬೇಡಿ. ಹೀಗೆ ಮಾಡುವುದರಿಂದ ವರ್ಷವಿಡೀ ದೇವರ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಇರುತ್ತದೆ.
ಇವುಗಳನ್ನೆಲ್ಲ ಮಾಡಿದ ನಂತರ, ಧ್ಯಾನ ಮಾಡಿ, ಮತ್ತು ನಿಮ್ಮ ಅಂಗೈಗಳನ್ನು ನೋಡಿ ಮತ್ತು ಓಂ ಕರಾಗ್ರೇ ವಸತೇ ಲಕ್ಷ್ಮೀ ಕರ್ಮಧೇ ಸರಸ್ವತಿ ಕರ್ಮುಲೇ: ತು ಗೋವಿಂದಾ: ಪ್ರಭಾತೇ ಕರ ದರ್ಶನಂ ಎಂಬ ಮಂತ್ರವನ್ನು ಪಠಿಸಿ. ಹಾಗೆಯೇ ಆ ದಿನ ನಿಮ್ಮ ಆರ್ಥಿಕ ಶಕ್ತಿಗನುಸಾರವಾಗಿ ದಾನ ಮಾಡಿ.
Leave a Comment