ರಾತ್ರಿ ಎಡಗಡೆ ತಿರುಗಿ ಮಲಗುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಈ ಬಗ್ಗೆ ತಿಳಿದುಕೊಳ್ಳಲೇ ಬೇಕು

Side Sleeping
Spread the love

ನಮ್ಮ ಪ್ರತಿ ದಿನದ ಅಭ್ಯಾಸಗಳು ನಮ್ಮ ದೈಹಿಕ ಆರೋಗ್ಯವನ್ನು ವೃದ್ಧಿಸುವಂತಿರಬೇಕು. ನಾವು ಯಾವ ಆಹಾರ ಸೇವನೆ ಮಾಡುತ್ತೇವೆ, ಪ್ರತಿ ದಿನ ನಮ್ಮ ದೇಹವನ್ನು ಎಷ್ಟು ಪ್ರಮಾಣದ ಚಟುವಟಿಕೆಗಳಿಗೆ ಹೊಂದಿಕೊಳ್ಳುವಂತೆ ನೋಡಿಕೊಂಡಿದ್ದೇವೆ. ಇವೆಲ್ಲವೂ ಮುಖ್ಯವಾಗುತ್ತದೆ. ರಾತ್ರಿ ಮಲಗಿಕೊಳ್ಳುವ ನಮ್ಮ ಅಭ್ಯಾಸ ಕೂಡ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಬಹುದು.

ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ

ರಾತ್ರಿ ಎಡಗಡೆ ತಿರುಗಿಕೊಂಡು ಮಲಗುವುದರಿಂದ ಹೊಟ್ಟೆಯ ಆಮ್ಲ ಸಾಕಷ್ಟು ನಿಯಂತ್ರಣವಾಗುತ್ತದೆ. ಆದರೆ ಬಲಗಡೆ ತಿರುಗಿಕೊಂಡು ಮಲಗುವುದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಯಾವುದಾದರೂ ಮಸಾಲೆ ಪದಾರ್ಥಗಳನ್ನು ಒಳಗೊಂಡಿರುವ ಆಹಾರ ಸೇವನೆ ಮಾಡಿದ ನಂತರ ಸಾಧ್ಯವಾದಷ್ಟು ಎಡಗಡೆಗೆ ತಿರುಗಿ ಮಲಗುವುದು ತುಂಬಾ ಒಳ್ಳೆಯದು. ಇದು ನಮ್ಮ ಎದೆಯುರಿ ಅಥವಾ ಆಮ್ಲಿಯತೆಯನ್ನು ಸಾಕಷ್ಟು ಕಡಿಮೆ ಮಾಡುತ್ತದೆ.

ಗೊರಕೆ ಹೊಡೆಯುವುದು ತಪ್ಪುತ್ತದೆ:

ಬೆನ್ನಿನ ಮೇಲೆ ಅಂದರೆ ಅಂಗಾತ ಮಲಗಿಕೊಳ್ಳುವುದರಿಂದ ನಮ್ಮ ಗಂಟ ಲಿನ ಹಾಗೂ ನಾಲಿಗೆಯ ಮಾಂಸ ಖಂಡಗಳು ಗಂಟಲಿನ ಕಡೆಗೆ ಒತ್ತಿದಂತೆ ಆಗುತ್ತವೆ. ಇದರಿಂದ ಸಹಜವಾಗಿ ಉಸಿರಾಟದ ತೊಂದರೆ ಉಂಟಾಗಿ ಗೊರಕೆ ಶಬ್ದ ಶುರುವಾಗುತ್ತದೆ. ಕೆಳಗಡೆ ತಿರುಗಿ ಮಲಗುವು ದರಿಂದ ನಮ್ಮ ಮಾಂಸ ಖಂಡಗಳು ಇದ್ದಲ್ಲಿಯೇ ಇರುತ್ತವೆ ಮತ್ತು ಗೊರಕೆ ಬರುವಂತಹ ಸಾಧ್ಯತೆ ಇರುವುದಿಲ್ಲ.

ಜೀರ್ಣಶಕ್ತಿ ಹೆಚ್ಚಾಗುತ್ತದೆ:

ಎಡಗಡೆಗೆ ತಿರುಗಿ ಮಲಗುವ ಅಭ್ಯಾಸ ಮಾಡಿಕೊಂಡವರಿಗೆ ಆಹಾರದ ತ್ಯಾಜ್ಯ ಸಣ್ಣ ಕರುಳಿನಿಂದ ದೊಡ್ಡ ಕರುಳಿನವರೆಗೆ ಸುಲಭವಾಗಿ ಸಾಗಲು ಅನುಕೂಲವಾಗುತ್ತದೆ. ಇದು ಉತ್ತಮ ಜೀರ್ಣ ಶಕ್ತಿಯನ್ನು ಕೊಡುತ್ತದೆ.

ಗರ್ಭಿಣಿ ಮಹಿಳೆಯರಿಗೆ:

ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಎಡಗಡೆ ತಿರುಗಿಕೊಂಡು ಮಲಗಿಕೊಳ್ಳುವುದು, ಭ್ರೂಣದಲ್ಲಿರುವ ಮಗು, ಹೃದಯ ಮತ್ತು ಕಿಡ್ನಿಗಳಿಗೆ ಉತ್ತಮ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತದೆ. ಇನ್ನೊಂದು ತರಹದಲ್ಲಿ ವೆರಿಕೋಸ್ ವೆನ್ಸ್ ಹೊಂದಿರುವ ಜನರಿಗೆ ಎಡಗಡೆ ತಿರುಗಿ ಕೊಂಡು ಮಲಗುವುದು ಈ ಸಮಸ್ಯೆಗೆ ಗುಣ ಕಾಣುವಂತೆ ಮಾಡುತ್ತದೆ.

ಇತರ ಪ್ರಯೋಜನಗಳು:

ಹೃದಯದ ಆರೋಗ್ಯ ಚೆನ್ನಾಗಿರಲು, ಬೆನ್ನು ನೋವು ಹಾಗೂ ಕುತ್ತಿಗೆ ನೋವು ದೂರವಾಗಲು, ಬೆನ್ನಿನ ಒತ್ತಡ ನಿವಾರಣೆಯಾಗಲು ಸ್ಪ್ಲೀನ್ ಆರೋಗ್ಯಕ್ಕೆ ಎಡಗಡೆಗೆ ತಿರುಗಿಕೊಂಡು ಮಲಗುವುದು ಹೆಚ್ಚು ಸಹಾಯ ಮಾಡುತ್ತದೆ.

ರೋಗಗಳನ್ನು ತಡೆಗಟ್ಟಲು:

ಎಡಗಡೆ ತಿರುಗಿ ಮಲಗುವುದು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ತೆಗೆದುಹಾಕುತ್ತದೆ. ಈ ವಿಷಗಳು ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ನಮ್ಮ ದೇಹದಿಂದ ತೆಗೆದುಹಾಕಲಾಗುತ್ತದೆ ಮತ್ತು ಮೂತ್ರಪಿಂಡಗಳು ಅವುಗಳಿಂದ ಹೊರೆಯಾಗುವುದಿಲ್ಲ. ನಿಮ್ಮ ದೇಹದ ದ್ರವವನ್ನು ವೇಗವಾಗಿ ಫಿಲ್ಟರ್ ಮಾಡಲು ಸಹಾಯ ಮಾಡುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!