ಆಸ್ಪತ್ರೆಗೆ ದಾಖಲಾದ ದರ್ಶನ್; ಚಿಕಿತ್ಸೆ ಕುರಿತು ನ್ಯೂರೋ ಸರ್ಜನ್ ಮಹತ್ವದ ಮಾಹಿತಿ
ನ್ಯೂಸ್ ಆ್ಯರೋ: ಹೈಕೋರ್ಟ್ ಆರು ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರು ಜೈಲಿನಿಂದ ಹೊರಬಂದಿದ್ದು, ಇಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟನ ಶೀಘ್ರ ಚೇತರಿಕೆಗೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್ನಿಂದ ಕೆಂಗೇರಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದರ್ಶನ್ ತೆರಳಿದ್ದಾರೆ. ನಟನ ಜೊತೆ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಉಪಸ್ಥಿತರಿದ್ದರು. ಹಿರಿಯ ತಜ್ಞ ವೈದ್ಯ ಡಾ.ನವೀನ್ ಚಿಕಿತ್ಸೆ ನೀಡಲಿದ್ದಾರೆ. ಇವರು ನರರೋಗ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ ಸಂಜೆ ಈ ಕುರಿತು ಕನಸಲ್ಟ್ ಮಾಡಿದ್ದರು.
ಮೊಬೈಲ್ನಲ್ಲಿ ಎಂಆರ್ಐ ಸ್ಕ್ಯಾನ್ ಕಾಪಿ ಕಳುಹಿಸಿ ತಜ್ಞ ವೈದ್ಯರ ಅಭಿಪ್ರಾಯವನ್ನು ದರ್ಶನ್ ಕುಟುಂಬ ಪಡೆದುಕೊಂಡಿತ್ತು. ಇದೀಗ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಬೆನ್ನು ನೋವು ಕಾರಣದಿಂದ ಮಧ್ಯಂತರ ಜಾಮೀನಿನ ಮೇಲೆ ದರ್ಶನ್ ಹೊರಬಂದಿದ್ದು, ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಮುಂದುವರಿಯಲಿದೆ ಎಂಬುದು ಇನ್ನಷ್ಟೇ ತಿಳಿಯಲಿದೆ. ಸದ್ಯದ ಮಾಹಿತಿ ಪ್ರಕಾರ ಎರಡು ದಿನ ಆಸ್ಪತ್ರೆಯಲ್ಲಿರಲಿದ್ದಾರೆ.
ಮೊದಲಿಗೆ ದರ್ಶನ್ ಅವರ ಬಿಪಿ, ಶುಗುರ್, ಇಸಿಜಿ ಸ್ಕ್ಯಾನಿಂಗ್ ಸೇರಿದಂತೆ ಕೆಲ ಟೆಸ್ಟ್ಗಳನ್ನು ಮಾಡುತ್ತಿದ್ದಾರೆ. ನಂತರ, ಬೆನ್ನು ನೋವಿಗೆ ಸಂಬಂಧಿಸಿದ ಫಿಸಿಯೋಥೆರಪಿ ಮಾಡಲಾಗುತ್ತದೆ. ಎಲ್ಲಾ ಟೆಸ್ಟ್ಗಳ ರಿಪೋರ್ಟ್ ಬಂದ ಬಳಿಕ ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೋ? ಬೇಡವೋ ಎಂಬುದರ ಬಗ್ಗೆ ಗೊತ್ತಾಗುತ್ತದೆ.
ಬಿಜಿಎಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ನವೀನ್ ಅವರು ದರ್ಶನ್ ಹೆಲ್ತ್ ಬಗ್ಗೆ ಹೇಳಿಕೆ ನೀಡಿದ್ದು, ದರ್ಶನ್ ಅಡ್ಮಿಟ್ ಆಗಿದ್ದಾರೆ. ಬೆನ್ನು ನೋವಿನ ಹಿನ್ನೆಲೆ ದಾಖಲಾಗಿದ್ದಾರೆ. ಕಾಲಿನ ನೋವು ಸಹ ಹೆಚ್ಚಾಗಿದೆ. ಎಲ್ಲಾ ರೀತಿಯ ಟೆಸ್ಟ್ ಮಾಡುತ್ತಿದ್ದೇವೆ. ಸದ್ಯ ಎಡಗಾಲಿನ ನೋವು ಹೆಚ್ಚಿದೆ. ಬೆನ್ನು ನೋವಿಗೆ ಪರೀಕ್ಷೆ ನಡೆಸುತ್ತಿದ್ದೇವೆ. 48 ಗಂಟೆಗಳಲ್ಲಿ ಎಲ್ಲಾ ವರದಿಗಳು ಬರಲಿವೆ. ಎಡಗಾಲು ಸ್ವರ್ಶ ಕಡಿಮೆ ಆಗಿದೆ. ಕಾಲು ನೋವಿನ ಜೊತೆಗೆ ಎಡಗಾಲಿನ ಸೆಳೆತವೂ ಇದೆ. ರಕ್ತಪರೀಕ್ಷೆ, ಎಂಆರ್ಐ ಸ್ಕ್ಯಾನಿಂಗ್ ಸೇರಿ ಕೆಲ ಪರೀಕ್ಷೆಗಳನ್ನು ನಡೆಸಲಾಗತ್ತದೆ. ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದಿನ ಎರಡು ದಿನಗಳ ಕಾಲ ದರ್ಶನ್ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ತಿಳಿಸಿದರು.
Leave a Comment