ಬಲಿಪಾಡ್ಯಮಿ ಮತ್ತು ಗೋಪೂಜೆಗೆ ಈ ಮಂತ್ರ ಪಠಿಸಿ; ಕೆಡುಕುಗಳಿಂದ ಪಾರಾಗಿ. . .ಸಂಪೃತ್ತರಾಗಿರಿ
ನ್ಯೂಸ್ ಆ್ಯರೋ: ದೀಪಾವಳಿ ಎಂದರೆ ದೀಪಗಳ ಹಬ್ಬ. ಅಂಧಕಾರದ ವಿರುದ್ಧ ಬೆಳಕಿನ ಗೆಲುವನ್ನು ಸಂಭ್ರಮಿಸುವ ದಿನ. ಈ ದೀಪಾವಳಿ ಹಬ್ಬದಂದು ಲಕ್ಷ್ಮೀಪೂಜೆ ಪ್ರಧಾನ. ಆದರೆ ದೇಶದಲ್ಲಿ ಕರ್ನಾಟಕ ಸೇರಿ ಹಲವು ಭಾಗಗಳಲ್ಲಿ ದೀಪಾವಳಿ ದಿನ ಬಲಿರಾಜನ ಪೂಜೆ, ಗೋಪೂಜೆಯನ್ನೂ ಮಾಡಲಾಗುತ್ತದೆ. ದೀಪಾವಳಿಯಲ್ಲಿ ಗೋವುಗಳ ಪೂಜೆ ಮತ್ತು ಬಲಿಪಾಡ್ಯಮಿ ಪೂಜೆ ಹೇಗೆ ನಡೆಯುತ್ತದೆ?. ಅಂದು ಯಾವ ಮಂತ್ರವನ್ನ ಪಠಿಸಬೇಕು?-ಇಲ್ಲಿದೆ ನೋಡಿ ಮಾಹಿತಿ..
ಬಲಿಪಾಡ್ಯಮಿ ಪೂಜೆಯಲ್ಲಿ ಯಾವ ಮಂತ್ರ ಪಠಿಸಬೇಕು?:
ರಾಕ್ಷಸ ರಾಜ ಬಲಿಯ ಬಳಿ ವಿಷ್ಣುವು ವಾಮನ ಅವತಾರದಲ್ಲಿ ಬಂದು ಮೂರು ಹೆಜ್ಜೆ ಜಾಗ ಕೇಳುತ್ತಾನೆ. ಬಳಿಕ ಅವನ ಒಂದು ಹೆಜ್ಜೆ ಇಡೀ ಆಕಾಶವನ್ನ ವ್ಯಾಪಿಸುತ್ತದೆ, ಇನ್ನೊಂದು ಹೆಜ್ಜೆ ಭೂಮಿಯನ್ನ ಆವರಿಸುತ್ತದೆ. ಹಾಗೇ ಮೂರನೇ ಹೆಜ್ಜೆ ಎಲ್ಲಿಡಲಿ ಎಂದು ಬಲಿಯ ಬಳಿ ಕೇಳಿದಾಗ, ಅವನು ತನ್ನ ತಲೆಯನ್ನೇ ತೋರಿಸುತ್ತಾನೆ. ವಿಷ್ಣುವು ಬಲಿಯ ತಲೆ ಮೇಲೆ ಹೆಜ್ಜೆಯಿಡುತ್ತಿದ್ದಂತೆ ಅವನು ಪಾತಾಳ ಲೋಕ ಸೇರುತ್ತಾನೆ. ಬಲಿ ರಾಕ್ಷಸ ರಾಜನೇ ಆಗಿದ್ದರೂ ಅವನು ದಾನ-ಧರ್ಮಗಳಿಗೆ ಹೆಸರಾಗಿದ್ದ. ಹಾಗಾಗಿ ವಿಷ್ಣುವು ಒಂದು ವರವನ್ನೂ ಕೊಡುತ್ತಾನೆ. ಪ್ರತಿವರ್ಷ ಒಂದು ಸಲ ನೀನು ಭೂಮಿಗೆ ಬರಬಹುದು..ನಿನ್ನನ್ನು ಜನ ಪೂಜಿಸತ್ತಾರೆ ಎಂಬುದು ಅವರ. ಅಂತೆಯೇ ದೀಪಾವಳಿ ಸಂದರ್ಭದಲ್ಲಿ, ಬಲಿಪಾಡ್ಯಮಿ ಆಚರಣೆ ಬೆಳೆದುಬಂದಿದೆ.
ಕೆಲವೆಡೆ ಹಿಟ್ಟಿನಲ್ಲಿ ಬಲಿ ಚಕ್ರವರ್ತಿಯ ವಿಗ್ರಹವನ್ನ ತಯಾರಿಸಿ, ಪೂಜಿಸಲಾಗುತ್ತದೆ. ರಾಜ್ಯದ ಮಲೆನಾಡು ಭಾಗಗಳಲ್ಲಿ ಅಡಕೆಯ ಸಿಂಗಾರವನ್ನೇ ಬಲೀಂದ್ರ ಎಂದು ಭಾವಿಸಲಾಗುತ್ತದೆ. ಹಬ್ಬದಲ್ಲಿ ಮೂರು ದಿನ ಪೂಜಿಸಿ, ಕೊನೇ ದಿನ ಬಲೀಂದ್ರನನ್ನ ತುಳಸಿ ಕಟ್ಟೆಯ ಬಳಿ ಇಟ್ಟು, ಪೂಜಿಸಲಾಗುತ್ತದೆ. ನಂತರ ಅಲ್ಲಿಂದ ಕಳಿಸಿಕೊಡಲಾಗುತ್ತದೆ. ಬಲೀಂದ್ರನನ್ನ ಕಳಿಸುವಾಗ ಈ ವರ್ಷ ಹೋಗಿ, ಮುಂದಿನ ವರ್ಷ ಬಾ ಎಂದು ಘೋಷಣೆ ಕೂಗಲಾಗುತ್ತದೆ.
ಈ ಮಂತ್ರವನ್ನ ಪಠಿಸಿ:
ಬಲಿಂದ್ರನನ್ನ ಪೂಜಿಸುವ ವೇಳೆ ನೀವು ಬಲಿನಮಸ್ಕಾರ ಮಂತ್ರವನ್ನ ಹೇಳಬೇಕು..
ʼಬಲಿರಾಜ ನಮಸ್ತುಭ್ಯಂ ದೈತ್ಯ ದಾನವವಂದಿತಾ|
ಇಂದ್ರಸತ್ರೋಮರಾರಾತೇ ವಿಷ್ಣುಸಾನ್ನಿಧ್ಯದೋ ಭವ||
ಬಲಿಮುದ್ದಿಸ್ಯ ದೀಯಂತೇ, ದಾನಾನಿ ಕುರೂನಂದನ |
ಯಾನಿ ತಾನ್ಯಚ್ಛಯಾಣ್ಯಾಹುರ್ ಮೈಯವಂ ಸಂಪ್ರದರ್ಶಿತಂ..||
ದೀಪಾವಳಿ ಹಬ್ಬದಲ್ಲಿ ನಡೆಸುವ ಇನ್ನೊಂದು ಪ್ರಮುಖ ಆಚರಣೆಯೆಂದರೆ ಗೋಪೂಜೆ..ಈ ಹಬ್ಬದಂದು ಗೋವುಗಳನ್ನ ಅಲಂಕರಿಸಲಾಗುತ್ತದೆ. ಪೂಜೆ-ಆರತಿ ಮಾಡಿ ಗೋಗ್ರಾಸವಾಗಿ ಖ್ಯಾದ್ಯಗಳನ್ನ ನೀಡಲಾಗುತ್ತದೆ. ಗೋಪೂಜೆಯ ಸಂದರ್ಭದಲ್ಲಿ ನೀವು ಈ ಮಂತ್ರಗಳನ್ನ ಪಠಿಸಿ. .
ಬಲಿಪಾಡ್ಯಮಿ 2024 ಶುಭಮುಹೂರ್ತ:
- ಬಲಿಪಾಡ್ಯಮಿ 2024 ದಿನಾಂಕ: 2024 ನವೆಂಬರ್ 2ರಂದು ಶನಿವಾರ
- ಬಲಿ ಪೂಜೆ ಪ್ರಾತಃ ಕಾಲ ಮುಹೂರ್ತ: 2024 ನವೆಂಬರ್ 2ರಂದು ಶನಿವಾರ ಮುಂಜಾನೆ 06:34 ರಿಂದ 08:46
- ಅವಧಿ: 02 ಗಂಟೆ 12 ನಿಮಿಷಗಳು
- ಗೋವರ್ಧನ ಪೂಜೆ 2024: ನವೆಂಬರ್ 2ರಂದು ಶನಿವಾರ
- ಬಲಿ ಪೂಜೆ ಸಾಯಂಕಾಲ ಮುಹೂರ್ತ: 2024 ನವೆಂಬರ್ 2ರಂದು ಮಧ್ಯಾಹ್ನ 03:23 ರಿಂದ ಸಂಜೆ 05:35
- ಅವಧಿ: 02 ಗಂಟೆಗಳು 12 ನಿಮಿಷಗಳು
- ಪ್ರತಿಪಾದ ತಿಥಿ ಪ್ರಾರಂಭ: 2024 ನವೆಂಬರ್ 1ರಂದು ಸಂಜೆ 6:16
- ಪ್ರತಿಪಾದ ತಿಥಿ ಮುಕ್ತಾಯ: 2024 ನವೆಂಬರ್ 2ರಂದು ಶನಿವಾರ ರಾತ್ರಿ 8:21 ರವರೆಗೆ.
ಗೋವರ್ಧನ ಮಂತ್ರ:
ʼಗೋವರ್ಧನಾ ಧರಾಧಾರಾ, ಗೋಕುಲತ್ರಾಣಕಾರಕ |
ಬಹುಬಾಹುಕೃತಚ್ಛಾಯ ಗವಾಂ ಕೋಟಿಪ್ರದೋ ಭವ..||ʼ
ಗೋಮಂತ್ರ:
ಲಕ್ಷ್ಮೀರ್ಯ ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾ
ಘೃತಂ ವಹತಿ ಯರ್ಘಾರ್ತೇ ಮಮ ಪಾಪಂ ವ್ಯಪೋಹತು..||
Leave a Comment